ಚಿತ್ರದುರ್ಗದಲ್ಲಿ ಜಿಟಿಜಿಟಿ ಮಳೆಯಿಂದಾಗಿ ಊಟಿಯಂತೆ ಕಣ್ಮನಸೆಳೆಯುತ್ತಿರುವ ದೃಶ್ಯ…
1 min readಚಿತ್ರದುರ್ಗ:
ಚಿತ್ರದುರ್ಗ ನಗರ ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಸೋಮವಾರ ಜಿಟಿ ಜಿಟಿ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆಯಿಂದಲೂ ದಟ್ಟವಾದ ಮೋಡಕವಿದ ವಾತಾವರಣ ಇತ್ತು. ಆಗೊಮ್ಮೆ, ಈಗೊಮ್ಮೆ ಜಿಟಿಜಿಟಿ ಮಳೆ ಮಳೆಯಾಗುತ್ತಿತ್ತು.
ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ತಾಪಮಾನ ಇಳಿಕೆಯಾಗಿತ್ತು. ಚಿತ್ರದುರ್ಗದ ಗುಡ್ಡ ಬೆಟ್ಟಗಳ ಸಾಲು ಸಾಲು ನೋಟವು ಊಟಿಯಂತೆ ಕಣ್ಮನಸೆಳೆದು ಊಟಿ ಮರೆಸುವಂತಿತ್ತು.
ಇದರ ಮಧ್ಯಯೇ ಜನಗಳು ಜಿಟಿಜಿಟಿ ಮಳೆಯಲ್ಲಿ ತೊಯ್ದು ನಡೆದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.