September 17, 2024

Chitradurga hoysala

Kannada news portal

ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿ ಜನರಿಗೆ ಮುಳುವಾಗಿದೆ:ಹನುಮಲಿ ಷಣ್ಮುಖಪ್ಪ

1 min read

ಚಿತ್ರದುರ್ಗ ಫೆ. ೨೨ : ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಜನತೆಯನ್ನು ನೆಮ್ಮದಿಯಿಂದ ಬದುಕಲು ಬಿಡದೇ ವಿವಿಧ ರೀತಿಯ ಕಾಯ್ದೆಗಳಿಗೆ ತಿದ್ದುಪಡಿ ತರುವುದರ ಮೂಲಕ ಹಾಗೂ ಬದುಕಿಗೆ ಅಗತ್ಯವಾದ ವಸ್ತಗಳ ದರಗಳನ್ನು ಏರಿಸುವುದರ ಮೂಲಕ ಜನವಿರೋಧಿ ಕಾರ್ಯವನ್ನು ಮಾಡುತ್ತಿದೆ ಇದನ್ನು ಮತದಾರರಿಗೆ ತಿಳಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮಾಡಬೇಕಿದೆ ಎಂದು ಹನುಮಲಿ ಷಣ್ಮುಖಪ್ಪ ಕರೆ ನೀಡಿದರು.

ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಅಧ್ಯಕ್ಷರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೂತನವಾಗಿ ಪಕ್ಷವನ್ನು ಸೇರಿದವರಿಗೆ ಕಾಂಗ್ರೇಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಸಹಾ ದೇಶವನ್ನು ಕಟಡ್ಟು ಕಾರ್ಯವನ್ನು ಮಾಡುತ್ತಾ ಬಂದಿದೆ ಎಂಬ ವಿಷಯವನ್ನು ನಿಮ್ಮ ತರಬೇತಿಯಂತ ಶಿಬಿರಗಳಲ್ಲಿ ತಿಳಿಸುವ ಕಾರ್ಯವನ್ನು ಮಾಡಬೇಕಿದೆ, ಇದು ಅಧಿಕಾರಕ್ಕಾಗಿ ಬಂದ ಕಾಂಗ್ರೇಸ್ ಅಲ್ಲ ದೇಶದ ಚುಕ್ಕಾಣಿಯನ್ನು ಹಿಡಿಯುವ ಅವಕಾಶ ಬಂದಿದ್ದರು ಸಗಾ ಅದನ್ನು ಬೇರೆಯವರಿಗೆ ತ್ಯಾಗ ಮಾಡಿದ ಪಕ್ಷ ನಮ್ಮದು ಎಂದು ಹೇಳುವಂತಹ ಎದೆಗಾರಿಕೆ ನಮ್ಮಲ್ಲಿ ಬರಬೇಕಿದೆ ಎಂದರು.

ಇಂದಿನ ದಿನದಲ್ಲಿ ಪಕ್ಷಕ್ಕೆ ಬರುವರಿಗೆ ನಮ್ಮ ಪಕ್ಷದ ತ್ಯಾಗದ ಬಗ್ಗೆ ಮಾಹಿತಿ ಇರುವುದಿಲ್ಲ, ಇದನ್ನು ತಿಳಿಸುವುದರೆ ಮೂಲಕ ಬಿಜೆಪಿಯಂತೆ ಬರೀ ಅಧಿಕಾರಕ್ಕಾಗಿ ಬಂದ ಪಕ್ಷ ನಮ್ಮದ್ದಲ್ಲ ಅಧಿಕಾರ ಇದ್ದರು ಸರಿ ಇಲ್ಲದಿದ್ದರೂ ಸರಿ ಜನತೆಯ ಸಮಸ್ಯೆಗಳಿಗೆ ಹೋರಾಡಲು ನಮ್ಮ ಪಕ್ಷ ಯಾವೂತ್ತು ಸಹಾ ಮುಂದೆ ಇದೆ. ನಮ್ಮ ಪಕ್ಷದಲ್ಲಿ ಎಲ್ಲಾ ರೀತಿಯ ಜನಪರವಾದ ಕೆಲಸವನ್ನು ಜಾರಿ ಮಾಡುತ್ತಾರೆ, ಅದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಜನತೆಗೆ ತಿಳಿಸುವಂತ ಕಾರ್ಯವನ್ನು ಮಾಡುತ್ತಿಲ್ಲ ಇದರಿಂದ ನಮಗೆ ಸೋಲಾಗುತ್ತಿದೆ ಆದರೆ ಬಿಜೆಪಿಯವರು ತಾವು ಜನತೆಯ ವಿರೋಧಿಯಾದ ಕೆಲಸವನ್ನು ಮಾಡಿದರು ಸಹಾ ಅದನ್ನು ಸರಿ ಎಂದು ಹೇಳುವಂತ ತಂಡವನ್ನು ರಚನೆ ಮಾಡಿ ಜನತೆಗೆ ಹೇಳುವುದರ ಮೂಲಕ ಮಂಕು ಬೂದಿಯನ್ನು ಎರೆಚುತ್ತಿದ್ದಾರೆ. ಅವರು ತಪ್ಪು ಮಾಡಿದ್ದರು ಸಹಾ ನಮ್ಮ ಪಕ್ಷದವರು ಅದನ್ನು ಮತದಾರರಿಗೆ ತಿಳಿಸುವಂತ ಕೆಲಸವನ್ನು ಮಾಡುತ್ತಿಲ್ಲ ಎಂದು ಹನುಮಲಿ ಷಣ್ಮುಖಪ್ಪ ವಿಷಾಧಿಸಿದರು.

ಅಧಿಕಾರ ಎನ್ನುವುದು ಒಂದು ಕಡೆಯಲ್ಲಿ ವಿಕೇಂದ್ರಿಕರಣವಾಗಬಾರದೆಂದು ಪಂಚಾಯತಿಗಳನ್ನು ಸ್ಥಾಪನೆ ಮಾಡಲಾಯಿತು ಇದರಿಂದ ಎಲ್ಲಾ ಜಾತಿ, ಜನಾಂಗದವರಿಗೆ ಮೀಸಲಾತಿಯ ಮೂಲಕ ರಾಜಕೀಯ ಪ್ರಾತಿನಿಧ್ಯವನ್ನು ನೀಡಲಾಯಿತು. ಇದನ್ನು ನೀಡಿದ್ದ ಕಾಂಗ್ರೇಸ್ ಎನ್ನುವುದನ್ನು ತಿಳಿಸಬೇಕಿದೆ. ಬಿಜೆಪಿಯವರಿಗೆ ಮಾತೇ ಬಂಡವಾಳವಾಗಿದೆ ಅವರು ಏನು ಸಾಧನೆ ಮಾಡದಿದ್ದರೂ ಸಹಾ ಮಾತಿನಲ್ಲಿಯೇ ಎಲ್ಲಾವನ್ನು ಮಾಡಿದ್ದೇವೆ ಎಂದು ಹೇಳುವುದರ ಮೂಲಕ ಮತದಾರರನ್ನು ಮರಳು ಮಾಡುತ್ತಿದ್ದಾರೆ ಇದರೆ ಬಗ್ಗೆ ಜಾಗರೂಕತೆಯಿಂದ ಇರಬೇಕಿದೆ ಎಂದು ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಂ ಕೆ ತಾಜ್ ಪೀರ್ ಅಧ್ಯಕ್ಷತೆಯನ್ನು ವಹಿಸಿದ್ದರು ಈ ಸಂದರ್ಭದಲ್ಲಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್ ಡಿ ಕುಮಾರ್ ಬ್ಲಾಕ್ ಅಧ್ಯಕ್ಷರುಗಳಾದ ಅಲ್ಲಾಬಕಾಶ್ ಪ್ರಕಾಶ .ಖುದ್ದುಸ್. ಮೈಲಾರಪ್ಪ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ .ಇನ್ನು ಮುಂತಾದವರು ಹಾಜರಿದ್ದರು

About The Author

Leave a Reply

Your email address will not be published. Required fields are marked *