ಎರಡು ವರ್ಷ ಜಿ.ಟಿ.ದೇವೇಗೌಡ ಜೆಡಿಎಸ್ ನಲ್ಲಿ ಇರುತ್ತಾರೆ.
1 min readಮೈಸೂರು (ಫೆ.24) : ಶಾಸಕ ಜಿ.ಟಿ. ದೇವೇಗೌಡರು ಮುಂದಿನ ಎರಡು ವರ್ಷ ಜೆಡಿಎಸ್‌ನಲ್ಲಿಯೇ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅದರ ನಂತರವು ಅವರ ಮನಪರಿವರ್ತನೆಯಾಗಿ ಜೆಡಿಎಸ್‌ನಲ್ಲೇ ಇರಬಹುದು.
ನಾಳಿನ ನಗರ ಪಾಲಿಕೆ ಚುನಾವಣೆಯಲ್ಲಿ ಅವರು ಬಂದು ಮತ ಹಾಕುತ್ತಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷದ ಪರವಾಗಿಯೇ ಮತ ಹಾಕುವ ವಿಶ್ವಾಸವಿದೆ. ಸದ್ಯಕ್ಕೆ ಅವರು ಜೆಡಿಎಸ್ ಬಿಟ್ಟಿದ್ದೀನಿ ಅಂತ ಎಲ್ಲಿಯೂ ಹೇಳಿಲ್ಲ. ಮುಂದಿನ ಎರಡು ವರ್ಷ ಇಲ್ಲೆ ಇರ್ತಾರೆ ಅದರ ನಂತರವು ಇಲ್ಲೇ ಇರಬಹುದು ಎಂದರು.
ಶೀಘ್ರದಲ್ಲೇ ಮೈಸೂರು ಮೇಯರ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯ ಮೈತ್ರಿಯ ಮಾತುಕತೆ ಇನ್ನೂ ನಡೆಯುತ್ತಿದೆ. ಆದರೆ ಜೆಡಿಎಸ್ ಬೆಂಬಲ ಯಾರಿಗೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.