ಮಾರ್ಚ್ 5 ರ ಶುಕ್ರವಾರದಿಂದ ಗುರು ಕೊಟ್ಟೂರೇಶ್ವರ ರಥೋತ್ಸವ ಅಂಗವಾಗಿ ಪಾದಯಾತ್ರೆ.
1 min read
ಚಿತ್ರದುರ್ಗ ಫೆ. ೨೪ ಮಾರ್ಚ್ ೭ ರಂದು ನಡೆಯಲಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಪಾದಯಾತ್ರೆ ಕಾರ್ಯಕ್ರಮವೂ ಮಾ.೫ ರಂದು ಪ್ರಾರಂಭವಾಗಲಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ದೊಡ್ಡಪೇಟೆಯ ಶ್ರೀ ಗುರು ಕೊಟ್ಟೂರು ಬಸವೇಶ್ವರ ಪಾದಯಾತ್ರೆ ಸಮಿತಿಯವತಿಯಿಂದ ೨೪ನೇ ವರ್ಷದ ಸಮಗ್ರ ಪಾದಯತ್ರೆಯೂ ಮಾ.೫ರ ಶುಕ್ರವಾರ ಬೆಳಿಗ್ಗೆ ೩ ಗಂಟೆಗೆ ಪ್ರಾರಂಭವಾಗಲಿದೆ. ಅಂದು ದೊಡ್ಡಪೇಟೆಯ ಜವೇಳರ ಬೀದಿಯಲ್ಲಿನ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸಿ ಮಹಾಮಂಗಳಾರತಿಯೊಂದಿಗೆ ಪಾದಯಾತ್ರೆ ಪ್ರಾರಂಭವಾಗಲಿದೆ.
ಪಾದಯಾತ್ರೆಯೂ ಮಲ್ಲಾಪುರ, ಗುಡ್ಡದರಂಗವ್ವನಹಳ್ಳಿ, ಬೋಗಳೇರಹಟ್ಟಿ, ಕಲ್ಲೇದೇವಪುರ, ದೊಣ್ಣೆಹಳ್ಳಿ, ಜಗಳೂರು, ಕಚ್ಚೇನಹಳ್ಳಿ, ಹೊಸಕೆರೆ ಗಡಿಮಾಕುಂಟೆ ಉಜ್ಜನಿಯ ಮೂಲಕವಾಗಿ ಕೊಟ್ಟೂರನ್ನು ಮಾ. ೭ರಂದು ತಲುಪಲಿದೆ.
ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು, ಮಾತ್ತು ಮಾಹಿತಿಗಾಗಿ ೯೯೭೨೯೭೫೦೧೦, ೯೯೮೬೪೨೮೯೩೦, ೯೯೦೨೦೨೩೪೪೪, ೯೯೦೧೫೬೪೨೮೮ ಇವರನ್ನು ಸಂಪರ್ಕ ಮಾಡಬಹುದಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.