May 5, 2024

Chitradurga hoysala

Kannada news portal

ಕೋವಿಡ್ ಇನ್ನು ತೊಲಗಿಲ್ಲ, ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ವರದಿ.ಸುರೇಶ್ ಪಟ್ಟಣ್ ಚಿತ್ರದುರ್ಗ ಫೆ. ೨೪ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೇ ಕಾಳಜಿಯನ್ನು ವಹಿಸಬೇಕಿದೆ, ಕೋವಿಡ್-೧೯ ಇನ್ನೂ ಹೋಗಿಲ್ಲ ಅಕ್ಕ-ಪಕ್ಕದ ರಾಜ್ಯ ಹಾಗೂ ನೆರೆ ದೇಶದಲ್ಲಿ ಮತ್ತೇ ಕಾಣಿಸಿಕೊಂಡಿದ್ದು ಎಚ್ಚರಿಕೆಯಿಂದ ಇರಬೇಕಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗ್ರಾಮಸ್ಥರಿಗೆ ತಿಳಿ ಹೇಳಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಕ್ಯಾಸಾಪುರ ಗ್ರಾಮದಲ್ಲಿ ೯೦ ಲಕ್ಷ ರೂ ವೆಚ್ಚದ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಸ್ವಲ್ಪ ದಿನ ಕಡಿಮೆಯಾಗಿದ್ದ ಕೋವಿಡ್-೧೯ ಈಗ ಮತ್ತೆ ಹೆಚ್ಚಾಗಿದೆ ನೆರೆ ರಾಜ್ಯ ಹಾಗೂ ನೇರೆ ದೇಶದಲ್ಲಿಯೂ ಸಹಾ ಕೋವಿಡ್-೧೯ ಹೆಚ್ಚಾಗಿದೆ ಇದರಿಂದ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಆರೋಗ್ಯ ಇಲಾಖೆಯ ಸೂಚನೆಯಂತೆ ಅಂತರವನ್ನು ಕಾಪಾಡಬೇಕು, ಮಾಸ್ಕ ಧರಿಸಬೇಕು ಹಾಗೂ ಸ್ಯಾನಿಟರಿಯನ್ನು ಬಳಸುವುದರ ಮೂಲಕ ಕೋವಿಡ್-೧೯ನ್ನು ದೂರ ಇರಿಸಬೇಕಿದೆ ಎಂದು ತಿಳಿಸಿದರು.

ಡಿಎಂಎಫ್ ಅನುದಾನದಿಂದ ೯೦ ಲಕ್ಷ ರೂ.ಗಳನ್ನು ಆಸ್ಪತ್ರ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ. ಈ ಭಾಗದಲ್ಲಿ ಎಲ್ಲಾ ಜನಾಂಗದವರು ಸಹಾ ವಾಸ ಮಾಡುತ್ತಿದ್ದಾರೆ. ಸುತ್ತಾ-ಮುತ್ತಲ್ಲಿನ ೨೨ ಗ್ರಾಮಗಳ ಇದರ ವ್ಯಾಪ್ತಿಗೆ ಬರಲಿದೆ. ಚುನಾವಣೆಯ ಸಮಯದಲ್ಲಿ ಮಾತ್ರವೇ ಪಕ್ಷ,ರಾಜಕೀಯ ನಂತರ ಎನ್ನಿದ್ದರು ಅಭೀವೃದ್ದಿ ಮಾತ್ರ ಇಲ್ಲಿ ಪಕ್ಷ, ರಾಜಕೀಯವನ್ನು ತರಬೇಡಿ, ಶಾಸಕನಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತೇನೆ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಾಗಿ ನಿಮ್ಮ ಪಾಲಿನ ಕಾರ್ಯವನ್ನು ಮಾಡಿ ಇವರು ನನಗೆ ಮತ ಹಾಕಿಲ್ಲ ಇವರು ಹಾಕಿದ್ದಾರೆ ಎಂಬ ಬೇಧವನ್ನು ಮಾಡಬೇಡಿ ಎಂದು ಶಾಸಕರು ನೂತನ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರಿಗೆ ಗ್ರಾಮಕ್ಕೆ ಅಗತ್ಯವಾಗಿ ಬೇಕಾದ ರಸ್ತೆ, ಕೊಳವೆಬಾವಿ, ಟಿ.ಸಿ.ಯನ್ನು ನೀಡುವಂತೆ ಮನವಿ ಮಾಡಿದಾಗ ಇದನ್ನು ಈ ವರ್ಷದ ಅನುದಾನದಲ್ಲಿ ನೀಡಲಾಗುವುದಿಲ್ಲ ಮುಂದಿನ ವರ್ಷದ ಅನುದಾನದಲ್ಲಿ ನೀಡುವುದಾಗಿ ಭರವಸೆ ನೀಡಿದ ಶಾಸಕರು, ಗ್ರಾಮದ ಕಪಳರಂಗಸ್ವಾಮಿಯ ದೇವಾಲಯಕ್ಕೆ ೫ ಲಕ್ಷ ರೂ.ಗಳನ್ನು ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಕರಿಯಪ್ಪ, ಎಪಿಎಂಸಿ ಸದಸ್ಯ ಲಕ್ಷ್ಮೀಸಾಗರದ ರಾಜಣ್ಣ, ಲಕ್ಷ್ಮೀಸಾಗರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವಿತ್ರಮ್ಮ, ಉಪಾಧ್ಯಕ್ಷರಾದ ಸುರೇಶ್, ಸದಸ್ಯರಾದ ರಮೇಶ್, ವಿಜಯಲಕ್ಷ್ಮೀ, ತಿಮ್ಮಣ್ಣ. ಮಂಜುನಾಥ್, ಸುರೇಶ್, ಪವಿತ್ರ, ಮಾಜಿ ಸದಸ್ಯ ತಿಪ್ಪೇಸ್ವಾಮಿ ಮುಖಂಡರಾದ ವೀರಭದ್ರಪ್ಪ, ರಂಗನಾಥಪ್ಪ, ಸ್ವಾಮಿ ವೀರಣ್ಣ, ಶರಣಪ್ಪ ಸೇರಿದಂತೆ ಇತರಗರು ಭಾಗವಹಿಸಿದ್ದರು..

About The Author

Leave a Reply

Your email address will not be published. Required fields are marked *