ಶ್ರೀಕ್ಷೇತ್ರ ನಾಯಕನಹಟ್ಟಿ ಜಾತ್ರೆ ಯಾವ ರೀತಿ ಇರುತ್ತೆ.ದೊಡ್ಡ ರಥೋತ್ಸವ ಇರುತ್ತಾ? ಡಿಸಿ ಹೇಳಿದ್ದೇನು.
1 min readಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಫೆಬ್ರವರಿ 25 ರಂದು ನಡೆದ ಜಾತ್ರಾ ಮಹೋತ್ಸವ ಸಿದ್ಧತಾ ಸಭೆಯಲ್ಲಿ ತೀರ್ಮಾನ. ಈ ವರ್ಷ ನಾಯಕನಹಟ್ಟಿ ಜನರ ಜಾತ್ರೆ ರದ್ದು ವಿಧಿ, ವಿಧಾನ ಮತ್ತು ಸಾಂಪ್ರದಾಯಿಕವಾಗಿ ಪೂಜೆ, ಪುನಸ್ಕಾರಕ್ಕೆ ಅವಕಾಶ ಹಾಗೂ ಜಾತ್ರೆಯಲ್ಲಿ ಸ್ಥಳೀಯರು ಭಾಗವಹಿಸಲು ಅವಕಾಶ, ಕೋವಿಡ್ ನಿಯಮಾವಳಿ ಉಲ್ಲಂಘಿಸುವಂತಿಲ್ಲ. ಜಾತ್ರೆಯಲ್ಲಿ
ದೊಡ್ಡ ರಥೋತ್ಸವ ಇರಲ್ಲ. ಅಂಗಡಿ, ಮುಂಗಟ್ಟಿರಲ್ಲ ಮತ್ತು, ಹೊರಗಿನ ವಾಹನಗಳಿಗೆ ಅವಕಾಶ ಇಲ್ಲ ಹಾಗೂ ಯಾವುದೇ ವಿಶೇಷ ಸಾರಿಗೆ ವ್ಯವಸ್ಥೆ ಇಲ್ಲ. ಭಕ್ತರೆಲ್ಲರೂ ತಮ್ಮ ಮನೆಯಲ್ಲಿಯೇ ತಿಪ್ಪೇಸ್ವಾಮಿಗೆ ಭಕ್ತಿಯಿಂದ ನಮಿಸಲು ಮನವಿ ಮಾಡಲಾಯಿತು.