April 26, 2024

Chitradurga hoysala

Kannada news portal

ಮುಂದಿನ ದಿನಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read
ರಸ್ತೆ ಕಾಮಗಾರಿಗೆ ಚಾಲನೆ

ವರದಿ:ಸುರೇಶ್ ಪಟ್ಟಣ್ ಚಿತ್ರದುರ್ಗ ಫೆ. ೨೬
ನಗರದ ರಸ್ತೆಗಳ ನಿರ್ಮಣದ ಕಾಮಗಾರಿ ಬಹುತೇಕ ಪೂರ್ಣಗೊಳ್ಳತ್ತಿದ್ದು ಮುಂದಿನ ದಿನಗಳಲ್ಲಿ ನಗರದ ಉದ್ಯಾನವನಗಳ ಅಭಿವೃದ್ದಿಯ ಕಡೆ ಗಮನ ನೀಡಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದ ಬಳಿಯಲ್ಲಿ ೬೦ ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು. ಚಿತ್ರದುರ್ಗ ನಗರದಲ್ಲಿ ವಿವಿಧ ಕಡೆಗಳಲ್ಲಿ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ, ಮುಂದಿನ ಮಾರ್ಚ ಒಳಗಾಗಿ ಪೂರ್ಣವಾಗಲಿದೆ. ಇದರಿಂದ ಮುಂದಿನ ಹಲವಾರು ವರ್ಷಗಳ ಕಾಲ ರಸ್ತೆ ನಿರ್ಮಾಣ ರೀಪೇರಿ ಎನ್ನುವುದು ಇರುವುದಿಲ್ಲ ಇದರಿಂದ ನಗರಸಭೆಯ ಆಯ್ಯವ್ಯಯದಲ್ಲಿ ಉದ್ಯಾನವನ ಅಭೀವೃದ್ದಿ, ಶುಚಿತ್ವ, ಕುಡಿಯುವ ನೀರು, ಬೀದಿದೀಪ, ಚರಂಡಿಯಂತಹ ಕಾಮಗಾರಿಯ ಕಡೆಗಮನ ನೀಡುವಂತೆ ಸೂಚನೆ ನೀಡಿದರು.
ನಗರದಲ್ಲಿ ಬಹುತೇಕಲ ಉದ್ಯಾನವನಗಳಿದ್ದು ಅವುಗಳು ಸರಿಯಿಲ್ಲದೆ ಇದ್ದರಿಂದ ಹಾಳಾಗಿದೆ, ಇದರಿಂದ ಅವುಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ. ಇದ್ದಲ್ಲದೆ ಸರ್ಕಾರದ್ದು ಮಾತ್ರವಲ್ಲದೆ ಖಾಸಗಿಯಾಗಿ ಬಡಾವಣೆಯನ್ನು ನಿರ್ಮಾಣ ಮಾಡಿದವರು ಸಹಾ ಪಾರ್ಕಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಿಲ್ಲ ಇದರ ಬಗ್ಗೆಯೂ ಸಹಾ ಗಮನ ನೀಡಲಾಗುವುದು ಎಂದ ಅವರು ಈಗಾಗಲೇ ನಗರದ ಯೂನಿಯನ್ ಪಾರ್ಕನ್ನು ನವೀಕರಣ ಮಾಡಿದ್ದು ಅದರಲ್ಲಿ ನೀರಿನ ಕಾರಂಜಿಯನ್ನು ಅಳವಡಿಸಲಾಗಿದೆ. ಮುಂದಿನ ದಿನದಲ್ಲಿ ಅದನ್ನು ಉದ್ಘಾಟನೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಈಗಾಗಲೇ ನಗರದ ದೊಡ್ಡಪೇಟೆ, ಜೋಗಿಮಟ್ಟಿರಸ್ತೆ, ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ, ಜೆಸಿಆರ್ ಬಡಾವಣೆಯ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ, ಮುಂದಿನ ದಿನದಲ್ಲಿ ವಿ.ಪಿ.ಬಡಾವಣೆಯ ರಸ್ತೆ, ನಿಜಲಿಂಗಪ್ಪರವರ ನಿವಾಸದ ಮುಂದಿನ ರಸ್ತೆ, ಅರಣ್ಯ ಇಲಾಖೆಯ ಮುಂದಿನ ರಸ್ತೆ, ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು, ಈಗ ಕರುವಿನ ಕಟ್ಟೆ ವೃತ್ತದ ಕಾಮಗಾರಿಯ ರಸ್ತೆಯೂ ಬೆಟ್ಟವನ್ನು ಸಂಪರ್ಕ ಮಾಡುವ ರಸ್ತೆಯಾಗಿದೆ. ಮುಂದಿನ ಜೋಗಿಮಟ್ಟಿ ರಸ್ತೆಯ ೫ ನೇ ಕ್ರಾಸ್ ಬಳಿಯಲ್ಲಿ ಮತ್ತೋಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಅದು ಸಹಾ ಕೋಟೆಯನ್ನು ಮುಟ್ಟುವ ರಸ್ತೆಯಾಗಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.
ಪುಡ್ ಪಾರ್ಕ ; ನಗರದಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದು ಸರ್ಕಲ್‌ಗಳಲ್ಲಿ ಜನತೆ ಮತ್ತು ಮಾರಾಟಗಾರರಿಗೆ ಅನುಕೂಲವಾಗುವಂತೆ ಪುಡ್ ವೃತ್ತಗಳನ್ನು ನಿರ್ಮಾಣ ಮಾಡಲಾಗವುದು ಇಲ್ಲಿ ಹೈಮಾಚ್ಕ್ ದೀಪಗಳನ್ನು ಅಳವಡಿಸಿ ನಗರಾಭೀವೃದ್ದಿ ಪ್ರಾಧಿಕಾರದಿಂದ ಬೆಂಚುಗಳನ್ನು ಹಾಕುವುದರ ಮೂಲಕ ಉತ್ತಮವಾದ ತಿಂಡಿಯನ್ನು ಸೇವಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು ಈಗಾಗಲೇ ಅರಣ್ಯ ಇಲಾಖೆಯ ಮುಂದಿನ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿಯ ವೃತ್ತ, ಜೆಸಿಆರ್ ವೃತ್ತ ಎಂದು ಈಗ ಗುರುತಿಸಲಾಗಿದೆ ಮುಂದಿನ ದಿನದಲ್ಲಿ ಮತ್ತಷ್ಟು ಸ್ಥಳಗಳನ್ನು ಗುರುತಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು.
ಈ ಸಂದಭದಲ್ಲಿ ನಗರಸಭಾ ಸದಸ್ಯರಾದ ಹರೀಶ್, ಶ್ರೀನಿವಾಸ್, ಚಂದ್ರಶೇಖರ್, ಮಾಜಿ ಸದಸ್ಯರಾದ ವೆಂಕಟೇಶ್, ಮಹೇಶ್, ಸಿ.ಟಿ.ಕೃಷ್ಣಮೂರ್ತಿ ಪೌರಾಯುಕ್ತರಾದ ಹನುಮಂತರಾಜು, ಇಂಜಿನಿಯರ್ ಮನೋಹರ್, ಕಿರಣ್, ಮುಖಂಡರಾದ ವಿರೇಶ್, ಕುಮಾರ್ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *