ಬಾಕಿ ಉಳಿದ ಸಕಾಲ ಅರ್ಜಿ ಶೀಘ್ರ ವಿಲೇವಾರಿ ಮಾಡಿ:ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಸೂಚನೆ.
1 min readಚಿತ್ರದುರ್ಗ,ಮಾರ್ಚ್01:
ಕಾಲಮಿತಿಯಲ್ಲಿ ನಾಗರಿಕರಿಗೆ ಸೇವೆ ಒದಗಿಸಲು ಸಕಾಲ ಸೇವೆಗಳ ಅಧಿನಿಯಮ ಜಾರಿಗೆ ತರಲಾಗಿದ್ದು, ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಕಾಲ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಕಾಲ ಯೋಜನೆ 2011ರಲ್ಲಿ ಜಾರಿಗೆ ಬಂದಿದ್ದು, ಈ ಯೋಜನೆಯಡಿ ನಾಗರಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಲೇವಾರಿ ಮಾಡುವುದರ ಮೂಲಕ ನಾಗರಿಕರಿಗೆ ಸೇವೆ ಒದಗಿಸಬೇಕು ಎಂದರು.
ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಸಮನ್ವಯ ಸಮಿತಿ ರಚನೆಗೆ ಸರ್ಕಾರ ಸೂಚನೆ ನೀಡಿದೆ. ಈ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆಯ ಗ್ರೂಪ್ “ಎ” ವೃಂದದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಹಾಗೂ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರು ಸಂಚಾಲಕರಾಗಿತ್ತಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ತಮ್ಮ ಹಂತದಲ್ಲಿ ಅಧಿಕಾರಿಗಳ ಸಭೆ ಕರೆದು, ಇ-ಮೇಲ್ ಮೂಲಕ ಸಕಾಲ ಮಿಷನ್‍ಗೆ ವರದಿ ಕಳುಹಿಸಬೇಕು. ಪರಿಶೀಲನಾ ತಂಡವು ಪ್ರತಿ ಶನಿವಾರ ತಮ್ಮ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು ಎಂದರು.
ಫೆಬ್ರುವರಿ ತಿಂಗಳ ಅಂತ್ಯಕ್ಕೆ ಒಟ್ಟು 3990 ಅರ್ಜಿಗಳ ವಿಲೇವಾರಿ ಬಾಕಿ ಉಳಿದಿದ್ದು, ಅವುಗಳನ್ನು ಎರಡು ದಿನಗಳೊಳಗೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲಾಖಾವಾರು ಬಾಕಿಉಳಿದಿರುವ ಅರ್ಜಿಗಳು: ಕೆಎಸ್‍ಆರ್‍ಟಿಸಿ ನಿಗಮದಲ್ಲಿ ಒಟ್ಟು 2421 ಅರ್ಜಿಗಳು ಬಾಕಿ ಉಳಿದಿದ್ದು, ಚಳ್ಳಕೆರೆ ತಾಲ್ಲೂಕಿನಲ್ಲಿ 323, ಚಿತ್ರದುರ್ಗದಲ್ಲಿ 1854, ಹೊಸದುರ್ಗದಲ್ಲಿ 244 ಅರ್ಜಿಗಳು ಬಾಕಿ ಉಳಿದಿವೆ. ಕಾರ್ಮಿಕ ಇಲಾಖೆಯಲ್ಲಿ 1054 ಅರ್ಜಿಗಳು ವಿಲೇವಾರಿ ಮಾಡಬೇಕಿದ್ದು, ಚಳ್ಳಕೆರೆಯಲ್ಲಿ 216, ಚಿತ್ರದುರ್ಗದಲ್ಲಿ 247, ಹಿರಿಯೂರಿನಲ್ಲಿ 312, ಹೊಸದುರ್ಗದಲ್ಲಿ 279 ಅರ್ಜಿಗಳು ಬಾಕಿ ಉಳಿದಿವೆ. ಕಂದಾಯ ಇಲಾಖೆಯಲ್ಲಿ ಒಟ್ಟು 241 ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಚಳ್ಳಕೆರೆಯಲ್ಲಿ 14, ಚಿತ್ರದುರ್ಗದಲ್ಲಿ 115, ಹಿರಿಯೂರು 31, ಹೊಳಲ್ಕೆರೆ 55, ಹೊಸದುರ್ಗ 21, ಮೊಳಕಾಲ್ಮೂರು 5 ಅರ್ಜಿಗಳು ಬಾಕಿ ಉಳಿದಿವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 124 ಅರ್ಜಿಗಳು ಬಾಕಿಯಿದ್ದು, ಚಳ್ಳಕೆರೆ 03, ಚಿತ್ರದುರ್ಗ 94, ಹಿರಿಯೂರು 05, ಹೊಳಲ್ಕೆರೆ 08, ಹೊಸದುರ್ಗ 13, ಮೊಳಕಾಲ್ಮೂರು 01 ಅರ್ಜಿ ವಿಲೇವಾರಿ ಬಾಕಿ ಇದೆ. ಬೆಸ್ಕಾಂನಲ್ಲಿ ಒಟ್ಟು 46 ಅರ್ಜಿಗಳು ಬಾಕಿಯಿದ್ದು, ಚಿತ್ರದುರ್ಗ 01, ಹೊಳಲ್ಕೆರೆ 16, ಹೊಸದುರ್ಗ 22, ಮೊಳಕಾಲ್ಮೂರು 07 ಅರ್ಜಿಗಳು ಬಾಕಿ ಇವೆ. ಸಾರಿಗೆ ಇಲಾಖೆಯಲ್ಲಿ ಒಟ್ಟು 33 ಅರ್ಜಿಗಳು ಚಿತ್ರದುರ್ಗದಲ್ಲಿಯೇ ಬಾಕಿ ಉಳಿದಿವೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 15 ಅರ್ಜಿಗಳು ಬಾಕಿ ಉಳಿದಿದ್ದು, ಚಳ್ಳಕೆರೆಯಲ್ಲಿ 03, ಚಿತ್ರದುರ್ಗದಲ್ಲಿ 05, ಹಿರಿಯೂರು 01, ಹೊಳಲ್ಕೆರೆ 05, ಮೊಳಕಾಲ್ಮೂರು 01 ಅರ್ಜಿ ಬಾಕಿ ಇದೆ. ನಗರ ಸಭೆಯಲ್ಲಿ ಒಟ್ಟು 13 ಅರ್ಜಿಗಳು ಬಾಕಿ ಉಳಿದಿದ್ದು, ಚಳ್ಳಕೆರೆ 07, ಚಿತ್ರದುರ್ಗ 04, ಹಿರಿಯೂರು 02 ಅರ್ಜಿಗಳು ವಿಲೇವಾರಿ ಬಾಕಿ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 10 ಅರ್ಜಿಗಳು ಬಾಕಿ ಉಳಿದಿದ್ದು, ಚಳ್ಳಕೆರೆಯಲ್ಲಿ 02, ಚಿತ್ರದುರ್ಗ 02, ಹಿರಿಯೂರು 01, ಹೊಳಲ್ಕೆರೆ 05 ಅರ್ಜಿಗಳು ಬಾಕಿ ಇವೆ. ಕರ್ನಾಟಕ ರಾಜು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಒಟ್ಟು 10 ಅರ್ಜಿಗಳು ಬಾಕಿ ಇವೆ. ಚಿತ್ರದುರ್ಗದಲ್ಲಿ 09, ಹೊಳಲ್ಕೆರೆಯಲ್ಲಿ 01 ಅರ್ಜಿ ಬಾಕಿ ಇದೆ. ಪಟ್ಟಣ ಪಂಚಾಯತ್‍ನಲ್ಲಿ ಒಟ್ಟು 09 ಅರ್ಜಿಗಳು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬಾಕಿ ಉಳಿದಿವೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ 05 ಅರ್ಜಿಗಳು ಬಾಕಿಯಿದ್ದು, ಚಿತ್ರದುರ್ಗದಲ್ಲಿ 03, ಹಿರಿಯೂರು 01, ಹೊಸದುರ್ಗ 01 ಅರ್ಜಿ ಬಾಕಿ ಇದೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಒಟ್ಟು 04 ಅರ್ಜಿಗಳು ಚಿತ್ರದುರ್ಗದಲ್ಲಿ ಬಾಕಿ ಇವೆ. ವಿಕಲಚೇತನ ಮತ್ತು ಹಿರಿಯ ನಾಗರಿಕ ಇಲಾಖೆಯಲ್ಲಿ ಒಟ್ಟು 02 ಅರ್ಜಿಗಳು ಚಿತ್ರದುರ್ಗದಲ್ಲಿ ಬಾಕಿ ಇವೆ. ಕೃಷಿ ಇಲಾಖೆಯಲ್ಲಿ ಚಿತ್ರರ್ದುದಲ್ಲಿ ಒಂದು ಅರ್ಜಿ ವಿಲೇವಾರಿ ಬಾಕಿ ಇದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಒಂದು ಅರ್ಜಿ ಚಿತ್ರದುರ್ಗದಲ್ಲಿ ವಿಲೇವಾರಿ ಬಾಕಿ ಇದೆ. ಭೂಮಾಪನ ಮತ್ತು ಭೂ ದಾಖಲೆ ಇಲಾಖೆಯಲ್ಲಿ ಒಂದು ಅರ್ಜಿ ಚಳ್ಳಕೆರೆಯಲ್ಲಿ ಬಾಕಿ ಇದೆ.
ಸಕಾಲ ಯೋಜನೆಯಡಿ ಶೇ. 7.68ರಷ್ಟು ಅರ್ಜಿಗಳು ತಿರಸ್ಕøತಗೊಂಡಿವೆ. ಅಧಿಕಾರಿಗಳು ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ವಿಲೇವಾರಿ ಮಾಡಬೇಕು ಮತ್ತು ಅರ್ಜಿಗಳು ತಿರಸ್ಕøತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥತರಿದ್ದರು.