ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್’: ಮೈಲಾರಲಿಂಗೇಶ್ವರ ಕಾರಣಿಕ
1 min readಹೂವಿನಹಡಗಲಿ (ವಿಜಯನಗರ): ‘ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್,’ ಇದು ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಸೋಮವಾರ ಮೊಳಗಿದ ಮೈಲಾರಲಿಂಗೇಶ್ವರ ಕಾರಣಿಕ ಉಕ್ತಿ.
ಪೌರಾಣಿಕ ಹಿನ್ನೆಲೆಯ ಮೈಲಾರದಲ್ಲಿ ಲಕ್ಷಾಂತರ ಭಕ್ತರ ಜಯಘೋಷ, ಹರ್ಷೋದ್ಗಾರದ ಮೂಲಕ ದೇವರ ಕಾರಣಿಕ ಜರುಗಿತು.
ಜಯಘೋಷಗಳ ನಡುವೆ ಸಂಜೆ 5.30ಕ್ಕೆ ಬಿಲ್ಲು ಏರಿದ ಗೊರವಯ್ಯ ರಾಮಣ್ಣ, ಶೂನ್ಯವನ್ನು ದಿಟ್ಟಿಸಿ ಬಳಿಕ ಮೇಲಿನಂತೆ ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.