ಒಂಭತ್ತು ತಿಂಗಳಲ್ಲಿ ನೂತನ ಸ್ಥಳೀಯ ಲೆಕ್ಕ ಪರಿಶೋಧನೆ ಕಛೇರಿ ಕಾಮಗಾರಿ ಪೂರ್ಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.
1 min readಚಿತ್ರದುರ್ಗ: ಒಂಭತ್ತು ತಿಂಗಳಲ್ಲಿ ನೂತನ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಛೇರಿಯ ಕಟ್ಟಡ ಕಾಮಗಾರಿ ಪೂರ್ಣ ಎಂದು ಶಾಸಕ ಜಿ. ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಹಿಂಭಾಗದಲ್ಲಿನ ನೂತನ ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.
ಸ್ಥಳೀಯ ಲೆಕ್ಕ ಪರಿಶೋಧಕನೆ ಇಲಾಖೆಯ ಬಹು ದಿನಗಳ ಬೇಡಿಕೆಯಂತೆ ಇಂದು ಭೂಮಿ ಪೂಜೆ ಮಾಡಿದ್ದು 9 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯುವ ವಿಶ್ವಾಸವಿದೆ ಎಂದರು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಅರ್ಬನ್ ಡೆವೆಲಪ್ಮೆಂಟ್ ಅಧ್ಯಕ್ಷರಾಗಿದ್ದಾಗ ಈ ಇಲಾಖೆಗೆ 8 ಸಾವಿರ ಅದರ ಸ್ಕೋಯರ್ ಫಿಟ್ ಹಸ್ತಾಂತರ ಮಾಡಿದ್ದರು. ಕಟ್ಟಡ ನಿರ್ಮಾಣಕ್ಕೆ 2.5 ಕೋಟಿ ರೂ ಅನುದಾನ ಸರ್ಕಾರದಿದ ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ 1 ಕೋಟಿ ರೂ ಬಿಡುಗಡೆ ಸಹ ಮಾಡಲಾಗಿದೆ. ಪಿಡ್ಲೂಡಿ ಇಲಾಖೆಗೆ ಗುತ್ತಿಗೆ ನೀಡಲಾಗಿದೆ. ಉತ್ತಮ ಸ್ಥಳ ಮತ್ತು ವಾತವರಣದಲ್ಲಿ ಕಟ್ಟದ ನಿರ್ಮಾಣವಾಗುತ್ತಿದೆ. ಸಿಬ್ವಂದಿಗಳು ಸುಸಜ್ಜಿತ ಕಟ್ಟಡದಲ್ಲಿ ತಮ್ಮ ಇಲಾಖೆಯ ಕೆಲಸ ಕಾರ್ಯ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ಅಂತ ವಿಶೇಷವಾಗಿ ರಾಜ್ಯ ಲೆಕ್ಕಪರಿಶೋಧಕನೆ ಇಲಾಖೆ ಅಪರ ನಿರ್ದೇಶಕರಾದ ಕುಪ್ಪೂರಲಿಂಗಯ್ಯ ಬಂದಿದ್ದಾರೆ ಅವರಿಗೆ ಸಹ ಅಭಿನಂದನೆ ಸಲ್ಲಿಸುತ್ತೇನೆ. ಸುಂದರವಾದ ಕಟ್ಟಡ ನಿರ್ಮಾಣವಾಗುತ್ತದೆ ಮತ್ತು ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಬಾಲಮ್ಮ, ಜಿಲ್ಲಾ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಮಂಜುನಾಥ್, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಅಧಿಕಾರಿ ಶ್ರೀನಿವಾಸ್,ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಧಿಕಾರಿ ಕೆ.ಹೆಚ್.ಓಂಕಾರಪ್ಪ, ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶ್ಯಾಮಸುಂದರ್ ರೆಡ್ಡಿ, ಎಲ್.ರಮೇಶ್ ರಾವ್, ಟಿ.ಮಲಯ್ಯ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತಲ ಉಪ ನಿರ್ದೇಶಕ ಎಸ್.ಸಿ. ದಾಕ್ಷಾಯಿಣಿ ಮತ್ತು ಇತರೆ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.