ಮಾ.04ರಂದು ವಿದ್ಯುತ್ ವ್ಯತ್ಯಯ
1 min readಚಿತ್ರದುರ್ಗ, ಮಾರ್ಚ್03:
ಕಾರ್ಯ ಮತ್ತು ಪಾಲನ ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ರಸ್ತೆಯ ಪಕ್ಕದಲ್ಲಿರುವ ಮರ ಗಿಡಗಳನ್ನು ಕಡಿಸಲು
ಪಿ.ಡಬ್ಯೂ.ಡಿ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ವಿದ್ಯುತ್ ಸಂಪರ್ಕವನ್ನು ತೆಗೆಯಲು ಕೋರಿದ್ದು, ಮಾಚ್4 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ನಿಲುಗಡೆಗೆ ಒಳಪಡುವ ಪ್ರದೇಶಗಳು: ಸರಸ್ವತಿಪುರಂ, ಕೆಎಸ್‍ಆರ್‍ಟಿಸಿ ಡಿಪೋ ರಸ್ತೆ, ಐಯುಡಿಸಿ ಲೇಔಟ್, ಬೀಮಪ್ಪ ನಾಯಕ ರಸ್ತೆ, ಜೋಗಿಮಟ್ಟಿ ರಸ್ತೆ, ಸರ್ಕಾರಿ ಆಸ್ಪತ್ರೆ ಹಿಂಭಾಗ, ಕರುವಿನಕಟ್ಟೆ ಸರ್ಕಲ್, ಕಾಮನಬಾವಿ ರಸ್ತೆ, ಫಿಲ್ಟರ್‍ಹೌಸ್ ರಸ್ತೆ, ಜೆಸಿಆರ್ ಮತ್ತು ಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
========