ಹಿಂದುಳಿದ ವರ್ಗಗಳ ನಾಯಕನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ: ಮಹಂತೇಶ್ ನಾಯಕ
1 min readಚಿತ್ರದುರ್ಗ: ಸಚಿವ ರಮೇಶ್ ಜಾರಕಿಹೊಳಿ ಅವರ ವೀಡಿಯೋ ಹಿಂದೆ ಕಾಣದ ದೊಡ್ಡ ಕೈಗಳು ಕೆಲಸ ಮಾಡಿದ್ದು ಪೋಲಿಸ್ ತನಿಖೆ ಮೂಲಕ ಎಲ್ಲಾ ಸತ್ಯ ಹೊರಬರಬೇಕಿದೆ ಎಂದು ನಾಯಕ ಸಮಾಜದ ಮುಖಂಡ ಮಹಂತೇಶ್ ನಾಯಕ್ ಹೇಳಿದರು.
ನ್ಯೂಸ್ 19 ಕನ್ನಡ ಜೊತೆ ಮಾತನಾಡಿ ಸಚಿವರ ವಿಡಿಯೋ ರಷ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಇವರ ವಿಡಿಯೋ ಅಲ್ಲಿಂದ ಬಿಡುಗಡೆ ಮಾಡಿದವರು ಯಾರು? ಯಾವ ಖಾತೆಯಿಂದ ಬಿಡುಗಡೆ ಆಗಿದೆ ಮತ್ತು ವಿಡಿಯೋದ ತುಣುಕುಗಳಲ್ಲಿ ಮಿಕ್ಸಿಂಗ್ ಆಗಿರು ರೀತಿ ಕಾಣುತ್ತಿದೆ. ಜಾಲತಾಣ ಮತ್ತು ತಂತ್ರಜ್ಞಾನ ಮುಂದುವರೆದಿದ್ದು ಯಾರ ಧ್ವನಿಗೆ ಯಾವ ಧ್ವನಿ ಬೇಕಾದರು ಸೇರಿಸಬಹುದು. ಅದಕ್ಕಾಗಿ ಪೋಲಿಸರು ಅದಷ್ಟು ಬೇಗ ತನಿಖೆ ನಡೆಸಿ ಸತ್ಯಸತ್ಯತೆ ಜನರ ಮುಂದೆ ಇಡುವ ಅವಶ್ಯಕತೆ ಇದೆ. ದೂರುದಾರ ನೀಡಿರುವ ದೂರಿನ ಹಿನ್ನಲೆ ಇಷ್ಟೆಲ್ಲ ಬೆಳವಣಿಗೆ ನಡೆದಿದೆ. ರಮೇಶ್ ಜಾರಕಿಹೊಳಿ ಅವರು ಮಹಿಳೆಗೆ ಮೋಸ ಮಾಡಿದ್ದರೆ ಎಂದಾದರೆ ಆ ಮಹಿಳೆ ಇನ್ನು ನೇರವಾಗಿ ಏಕೆ ಬಂದಿಲ್ಲ? ವಂಚನೆಗೆ ಒಳಗಾಗಿರುವ ಮಹಿಳೆ ಮಾತುಗಳಲ್ಲಿ ಆಡಿಯೋ ದಲ್ಲಿ ಅಂತಹ ವಂಚನೆ ಆರೋಪದ ಮಾತುಗಳನ್ನು ಮಹಿಳೆ ಎಲ್ಲೂ ಸಹ ಆಡಿಲ್ಲ. ಆದರೆ ಅವರ ರಾಜಕೀಯವಾಗಿ ಮಣಿಸಲಾಗದವರು ಬೆಳವಣಿಗೆ ಸಹಿಸದೆ ವ್ಯವಸ್ಥಿತ ಸಂಚು ರೂಪಿಸಿ ವೈಯಕ್ತಿಕ ತೇಜೋ ವಧೆ ಮಾಡಿದ್ದಾರೆ. ಮಹಿಳೆ ಸೇರಿ ದೂರುದಾರನ ತನಿಖೆಗೆ ಒಳಪಡಿಸಿ 15 ದಿನದಲ್ಲಿ ಪೋಲಿಸ್ ತನಿಖೆ ಮುಗಿಸಬೇಕು. ಒಬ್ಬ ಹಿಂದುಳಿದ ವರ್ಗಗಳ ನಾಯಕ ಜನಾಂಗದ ಮುಖಂಡ ಅತಿ ಕಡಿಮೆ ಸಮಯದಲ್ಲಿ ವೇಗವಾಗಿ ರಾಜಕೀಯವಾಗಿ ಬೆಳೆದಿರುವುದನ್ನು ಸಹಿಸಲಾಗದೆ ಹಿಂದುಳಿದ ಒಬ್ಬ ನಾಯಕನನ್ನು ತುಳಿಯುವ ಯತ್ನ ನಡೆದಿದೆ ಎಂದು ಆರೋಪಿಸಿದರು. ರಮೇಶ್ ಜಾರಕಿಹೊಳಿ ಸಹ ಈ ಆರೋಪದಿಂದ ಮುಕ್ತವಾಗಿ ಬರುವ ವಿಶ್ವಾಸವಿದೆ ಅವರ. ಜೊತೆಯಲ್ಲಿ ಇಡೀ ನಾಯಕ ಸಮಾಜವಿದೆ ಎಂದು ತಿಳಿಸಿದರು.