May 2, 2024

Chitradurga hoysala

Kannada news portal

ರಂಧ್ರವಿರೋ N-95 ಮಾಸ್ಕ್‌ನಿಂದ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ: ಕೇಂದ್ರ ಎಚ್ಚರಿಕೆ.

1 min read

ನವದೆಹಲಿ

ಮಾಹಾಮಾರಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ ಉಸಿರಾಡಲು ರಂಧ್ರಗಳಿರುವ N-95 ಮಾಸ್ಕ್ ಬಳಕೆ ಮಾಡುವುದರಿಂದ ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರ ರಾಜೀವ್ ಗರ್ಗ್ ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಂಧ್ರಗಳಿರುವ N-95 ಮಾಸ್ಕ್ ಬಳಕೆ ಮಾಡುವುದರಿಂದ ಕೊರೊನಾದಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮುಖ ಮತ್ತು ಬಾಯಿ ಕವರ್ ಮಾಡುವಂತಹ ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಬಳಸಿ ಎಂದು ಕೂಡ ಪತ್ರದಲ್ಲಿ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ N-95 ಮಾಸ್ಕ್ ಗಳ ಅನುಚಿತ ಬಳಕೆಯನ್ನು ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ರಾಜೀವ್ ಗರ್ಗ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
N-95 ರಂಧ್ರ ಇರುವ ಮಾಸ್ಕ್ ಬಳಕೆ ಮಾಡುವುದರಿಂದ ವೈರಸ್ ದೇಹದೊಳಗೆ ಸೇರುವುದನ್ನು ಹಾಗೂ ಸೋಂಕಿತ ವ್ಯಕ್ತಿಯ ಶರೀರದಿಂದ ಹೊರ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *