ಶ್ರೀಕೂಡಲಿ ಶೃಂಗೇರಿ ಮಠದಲ್ಲಿ ಆಶೀರ್ವಾದ ಪಡೆದ ಸಚ್ಚಿದಾನಂದಮೂರ್ತಿ
1 min readಚಿತ್ರದುರ್ಗ ಮಾ. ೧೦
ನಗರದ ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ ಹಾಗು ಸದಸ್ಯರು ಭೇಟಿ ನೀಡಿ ಶ್ರೀಗಳ ಆರ್ಶೀವಾದವನ್ನು ಪಡೆದರು.
ಇತ್ತೀಚಿನ ದಿನಗಳಲ್ಲಿ ಶ್ರೀ ಮಠದ ವಿರುದ್ಧ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಚ್ಚಿದಾನಂದ ಮೂರ್ತಿಯವರು ಚರ್ಚಿಸಿ ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸಿ, ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯು ಶ್ರೀ ಮಠದ ಪರವಾಗಿರುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಆಪ್ತ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್.ಹೆಚ್.ಎಸ್ ಹಾಗು ಭಾಸ್ಕರ್ ಶಾಸ್ತ್ರಿ ಮತ್ತು ದಾವಣಗೆರೆ ಅರ್ಚಕರ ಸಂಘದ ಅಧ್ಯಕ್ಷರು ಪವನ್ ಪಾಂಡೆ, ಶ್ರೀ ಮಠದ ಪ್ರದಾನ ಅರ್ಚಕರು ಶ್ರೀನಾಥ ಅವಧಾನಿ, ವ್ಯವಸ್ಥಾಪಕರು ಮಂಜುನಾಥ ಹಾಗೂ ಶ್ರೀಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಶ್ರೀನಿವಾಸ.ಕೆ.ಸಿ ಎಂಬ ಶ್ರೀ ಮಠದ ಭಕ್ತರಿಗೆ ಮಹಾಸಂಸ್ಥಾನದ ಜಮೀನಿನ ಕಾರ್ಯನಿರ್ವಹಿಸಲು ಹಾಗೂ ಸಂಬಂಧಪಟ್ಟ ಕಛೇರಿ, ನ್ಯಾಯಾಲಯಗಳಲ್ಲಿ ವ್ಯವಹರಿಸಲು ಲಿಖಿತ ಪತ್ರವನ್ನು ನೀಡಿದ್ದರು. ಆದರೆ ಕಾರಣಾಂತರಗಳಿಂದ ತಮ್ಮನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕೋರಿ ರಾಜಿನಾಮೆ ಪತ್ರವನ್ನು ಚಿತ್ರದುರ್ಗದ ಶಾಖಾ ಮಠದಲ್ಲಿ ಮೊಕ್ಕಾಂನಲ್ಲಿರುವ ಶ್ರೀಗಳವರು ಸಲ್ಲಿಸಿರುತ್ತಾರೆ. ಶ್ರೀಗಳವರು ಕೆ.ಸಿ.ಶ್ರೀನಿವಾಸ್‌ರವರ ರಾಜಿನಾಮೆ ಪತ್ರವನ್ನು ಅಂಗೀಕರಿಸಿ ಶ್ರೀಮಠದ ಸೇವೆಯಿಂದ ನಿವೃತ್ತಿಗೊಳಿಸಿರುತ್ತಾರೆ ಎಂದು ಶ್ರೀ ಮಠದ ಆಪ್ತ ಕಾರ್ಯದರ್ಶಿ ಕೇಶವ ಪ್ರಸಾದ್.ಹೆಚ್.ಎಸ್ ತಿಳಿಸಿದ್ದಾರೆ.