May 12, 2024

Chitradurga hoysala

Kannada news portal

ಸಣ್ಣ ಪುಟ್ಟ ಕೆಲಸಗಳನ್ನು ಸ್ಥಳೀಯವಾಗಿ ಮಾಡಿಸಿಕೊಳ್ಳಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಚಿತ್ರದುರ್ಗ ಮಾ. ೧೪
ಈ ವರ್ಷದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದ್ದು ಮುಂದಿನ ವರ್ಷದ ಅನುದಾನದಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು, ಸುಮ್ಮನೆ ಮಾತನ್ನು ನೀಡುವುದಿಲ್ಲ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ರುಡ್‌ಸೆಟ್‌ನ ಬನಶಂಕರಿ ಬಡಾವಣೆಯಲ್ಲಿ ನಗರಾಭೀವೃದ್ದಿ ಪ್ರಾಧಿಕಾರದವತಿಯಿಂದ ನೂತನವಾಗಿ ನಿರ್ಮಾಣ ಮಾಡಲಿರುವ ಉದ್ಯಾನವನದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ಬಾಗ ಪೂರ್ಣವಾಗಿ ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ನಿಮಗೆ ಸೌಲಭ್ಯಗಳು ಏನೇ ಇದ್ದರು ಸಹಾ ಪಂಚಾಯಿತಿವತಿಯಿಂದಲೇ ಪಡೆಯಬೇಕಿದೆ ಆದರು ಸಹಾ ಮಾನವೀಯತೆಯ ಮೇಲೆ ಮೂಲಭೂತ ಸೌಲಭ್ಯವನ್ನು ನಗರಸಭೆವತಿಯಿಂದ ನೀಡಲಾಗುತ್ತಿದೆ ಎಂದರು.
ಈ ಭಾಗದಲ್ಲಿ ಅನೇಕ ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸಲು ಈ ಸಾಲಿನ ಅನುದಾನದಲ್ಲಿ ಸಾಧ್ಯವಿಲ್ಲ ಮುಂದಿನ ಸಾರಿಯ ಅನುದಾನ ಬಂದಾಗ ಅವುಗಳನ್ನು ಈಡೇರಿಸಲಾಗುವುದು ಎಂದ ಶಾಸಕರು, ಚರಂಡಿ, ನೀರು, ಕಸ ವಿಲೇವಾರಿ ಸೇರಿದಂತೆ ಇತರೆ ಸಣ್ಣ-ಪುಟ್ಟ ಕೆಲಸಗಳನ್ನು ಸಂಬಂಧಪಟ್ಟವರಿಂದ ಮಾಡಿಸಿಕೊಳ್ಳಿ ರಸ್ತೆ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳನ್ನು ನಾನು ಮಾಡಿಸುತ್ತೇನೆ ಎಂದು ತಿಪ್ಪಾರೆಡ್ಡಿ ಜನತೆಗೆ ಭರವಸೆ ನೀಡಿ ಈ ಭಾಗ ಖಾಸಗಿಯವರ ನಿರ್ಮಾಣ ಮಾಡಿದ ಬಡಾವಣೆಯಾಗಿದೆ ಇಲ್ಲಿ ಸರ್ಕಾರದ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ ಆದರೂ ಸಹಾ ನಿಮಗೆ ಅಗತ್ಯವಾಗಿ ಬೇಕಾದ ರಸ್ತೆ ಸೇರಿದಂತೆ ಕೂಳವೆಬಾವಿಯನ್ನು ಕೂರೆಯಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಡಾವಣೆಯವರು ವಿವಿಧ ರೀತಿಯ ಬೇಡಿಕೆಯನ್ನು ಶಾಸಕರ ಮುಂದೆ ಹೇಳುವುದರ ಮೂಲಕ ಪರಿಹಾರ ಮಾಡುವಂತೆ ಮನವಿ ಮಾಡಿದಾಗ ಅಲ್ಲೇ ಇದ್ದ ಪಂಚಾಯಿತಿಯ ಅಧಿಕಾರಿಗೆ ಸೂಚನೆಯನ್ನು ನೀಡಿ ೧೦ ದಿನದೊಳಗೆ ಪೂರ್ಣ ಮಾಡುವಂತೆ ನಿರ್ದೆಶನ ನೀಡಿದರು.
ಈ ಸಂದರ್ಭದಲ್ಲಿ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬದರಿನಾಥ್ ಸದಸ್ಯರಾದ ಓಂಕಾರ್, ಶ್ರೇಣಿಕ್ ಶ್ರೀಮತಿ ರೇಖಾ, ಆಯುಕ್ತರಾದ ವಿಜಯಕುಮಾರ್, ನಗರಸಭಾ ಸದಸ್ಯರಾದ ತಾರಕೇಶ್ವರಿ, ಮದಕರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *