May 13, 2024

Chitradurga hoysala

Kannada news portal

ನೇಕಾರರ ಅಭಿವೃದ್ಧಿ ‌ನಿ‌ಗಮ ಸ್ಥಾಪಿಸಬೇಕು: ಅಧ್ಯಕ್ಷ ಡಾ.ವಿ.ನಾಗೇಂದ್ರ ಪ್ರಸಾದ್

1 min read

ಚಿತ್ರದುರ್ಗ ಮಾ. ೧೫
ನೇಕಾರರ ಸಮುದಾಯದಲ್ಲಿ ೨೯ ಒಳ ಪಂಗಡಗಳಿದ್ದು, ಪ್ರವರ್ಗ ೨ಎ ಅಡಿಯಲ್ಲಿ ೧೧೨ ಹಿಂದುಳಿದ ಜಾತಿಗಳಿವೆ. ಪ್ರಬಲ ಜಾತಿಗಳು ಪ್ರವರ್ಗ ೨ಎ ಬಂದರೇ ನೇಕಾರರ ಸಮುದಾಯಗಳಿಗೆ ಉಳಿಗಾಲವಿಲ್ಲ. ಆದ್ದರಿಂದ, ವೃತಿ ಆಧಾರದ ಸ್ಥಾಪಿಸಿರುವ ನೇಕಾರ ನಿಗಮ ಬೇಡ, ಬದಲಾಗಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕಲಾ ನೇಕಾರ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಡಾ.ವಿ.ನಾಗೇಂದ್ರ ಪ್ರಸಾದ್, ಒತ್ತಾಯಿಸಿದರು.
ನಗರದ ಕ್ರೀಡಾ ಭವನದಲ್ಲಿ ನಡೆದ ಕಲಾನೇಕಾರ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಕಲಾ ಪ್ರತಿಭೆಗಳು ಹಾಗೂ ನೇಕಾರ ಸಮುದಾಯದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ನೇಕಾರ ಭವನ ಕಟ್ಟುವ ಮೂಲಕ ನೇಕಾರರ ಮಾರುಕಟ್ಟೆ ಸ್ಥಾಪಿಸಬೇಕು. ನೇಕಾರರ ಮಾರುಕಟ್ಟೆ ಸ್ಥಾಪನೆಯಿಂದ ಬೆಳಗಾವಿ ಮತ್ತು ಬೆಂಗಳೂರು ಸೇರಿದಂತೆ ನಾನಾ ಊರುಗಳ ನೇಕಾರರ ನೇಯ್ಗೆ ಉತ್ಪನ್ನಗಳ ಮಾರಾಟಕ್ಕೆ ಅನುಕೊಲವಾಗಲಿದೆ. ಈ ಕಾರ್ಯಕ್ಕೆ ಶಾಸಕರು ಸಹಕಾರ ನೀಡಬೇಕು ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಕುಲಕಸುಬಿನಲ್ಲಿ ಅನುಭವಿರುವ ಸಮುದಾಯದ ಯುವಕರು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯಧನ ಪಡೆದು ರೆಡಿಮೆಡ್ ಗಾರ್ಮೆಂಟ್ಸ್ ಘಟಕ ಸ್ಥಾಪಿಸಲು ಮುಂದಾಗಬೇಕು ಎಂದರು.
ಪ್ರಪಂಚದಲ್ಲಿ ರೆಡಿಮೆಡ್ ಬಟ್ಟೆ ತಯಾರಿಕೆಗೆ ಸಾಕಷ್ಟು ಬೇಡಿಕೆಯಿದ್ದು, ಬಟ್ಟೆಗಳನ್ನು ದೇಶ ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ನೂತನ ಟೆಕ್ಸ್‌ಟೈಲ್ ನೀತಿಯನ್ನು ಜಾರಿಗೆ ತಂದಿದ್ದು, ಗಾರ್ಮೇಂಟ್ಸ್ ಘಟಕ ಸ್ಥಾಪಿಸುವವರಿಗೆ ಅಗತ್ಯ ಸೌಲಭ್ಯಗಳ ಜೊತೆಗೆ ಸರಕಾರ ಸಹಾಯಧನ ನೀಡಲಿದೆ ಮತ್ತು ಬ್ಯಾಂಕುಗಳಿಂದ ಸಾಲದ ನೆರವು ಸಿಗಲಿದೆ. ಘಟಕಗಳ ಸ್ಥಾಪನೆಯಿಂದ ಸಮುದಾಯದವರಿಗೆ ನಾನಾ ಹಂತಗಳಲ್ಲಿ ಉದ್ಯೋಗ ನೀಡಬಹುದು ಎಂದರು.
ಹಿಂದುಳಿದ ವರ್ಗದವರು ಎನ್ನುವ ಮನೋಭಾವ ತೊರೆದು ಸಂಘಟನೆ ಕೈಗೊಳ್ಳುವ ಮೂಲಕ ಸರಕಾರದಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಒಂದೇ ವ್ಯವಹಾರಗಳಿಗೆ ಸೀಮಿತವಾಗದೇ ಎಲ್ಲ ರಂಗಗಳಲ್ಲಿಯು ಪ್ರವೇಶ ಮಾಡಿ ಅಭಿವೃದ್ಧಿ ಕಾಣಬೇಕು ಎಂದು ಸಲಹೆ ನೀಡಿದರು.
ನೇಕಾರ ಕಲಾ ಘಟಕದ ವತಿಯಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿಎ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೇ ಅನುಮೋದನೆ ಕೊಡಿಸಲಾಗುವುದು ಮತ್ತು ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುತ್ತದೆ ಎಂದು ಭರವನೆ ನೀಡಿದರು.
ಕಾರ್ಯಕ್ರಮದಲ್ಲಿ ಕಲಾ ನೇಕಾರ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ನೇಕಾರ ಪದ ಪ್ರವೀಣ ಎನ್ನುವ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುಲಿಂಗ ಸ್ವಾಮೀಜಿ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು.
ಕಲಾ ನೇಕಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ.ಎನ್.ನಾಗೇಶ್, ಸಾಹಿತಿ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ಸಂಭಾಷಣೆಗಾರ ಕೇಶವಾದಿತ್ಯ, ನಿರ್ದೇಶಕ ರವೀಂದ್ರನಾಥ ಸಿರಿವರ, ಹಿನ್ನೆಲೆ ಗಾಯಕ ರಮೇಶ್ ಚಂದ್ರ, ಕಲಾವಿದ ಮೋಹನ್ ಬುನೇಜಾ, ಮುಖಂಡ ಪೋರಾಳ್ ವೆಂಕಟಸ್ವಾಮಿ ಇತರರು ಹಾಜರಿದ್ದರು.

About The Author

Leave a Reply

Your email address will not be published. Required fields are marked *