May 13, 2024

Chitradurga hoysala

Kannada news portal

ಕೋವಿಡ್ ವ್ಯಾಕ್ಸಿನ್ ಪಡೆದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು.

1 min read

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿರುತ್ತಾರೆ.

ವಿಶ್ವದಲ್ಲೆಡೆ ತಲ್ಲಣ ಸೃಷ್ಟಿಸಿದ ಮಹಾಮಾರಿ ಕೊರೊನಾ ಪಿಡುಗನ್ನು ಹೋಗಲಾಡಿಸಲು ಲಸಿಕೆ ಪಡೆಯುವುದೇ ಏಕೈಕ ಮಾರ್ಗವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡಿರುತ್ತಾರೆ.

ಲಸಿಕೆ ಪಡೆಯಲು ಯಾರೂ ಭಯಪಡಬೇಕಾಗಿಲ್ಲ. ಸೂಜಿ ಚುಚ್ಚು ವುದು ಗೊತ್ತೇ ಆಗುವುದಿಲ್ಲ. ಇರುವೆ ಕಚ್ಚಿದಷ್ಟೂ ನೋವು ಆಗುವುದಿಲ್ಲ ಎಂದು ತಮ್ಮ ಸ್ವಾನುಭವದಿಂದ ಹೇಳಿದ ಶ್ರೀ ಜಗದ್ಗುರುಗಳವರು ಭಕ್ತಾದಿಗಳು ಮತ್ತು ಸಾರ್ವಜನಿಕರು ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿರುತ್ತಾರೆ.

“ಮನೆ ಗೆದ್ದು ಮಾರು ಗೆಲ್ಲು” ಎನ್ನುವಂತೆ ನಮ್ಮ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆಯನ್ನು ಕೊಡುವುದಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಯನ್ನು ಪೂರೈಕೆ ಮಾಡುತ್ತಿರುವ ಭಾರತದ ಪ್ರಧಾನಿ ಮೋದಿಯವರ ಮಾನವೀಯ ದೃಷ್ಟಿಯನ್ನು ಶ್ಲಾಘಿಸಿರುತ್ತಾರೆ.

ಇದು ಸಹಸ್ರಾರು ವರ್ಷಗಳ ಹಿಂದೆ “ವಸುಧೈವ ಕುಟುಂಬಕಮ್” ಎಂದು ಬೋಧಿಸಿದ ಉಪನಿಷತ್ತಿನ ಸೂಕ್ತಿಗೆ ಮತ್ತು “ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲಸಂಗನ ಶರಣರೇ ಕುಲಜರು” ಎನ್ನುವ ಬಸವಣ್ಣನವರ ಆಶಯಕ್ಕೆ ಪೂರಕವಾಗಿದೆ. ಮನುಜ ಕುಲವನ್ನು ಸಂರಕ್ಷಿಸಿದ ಮಹಾನ್ ರಾಷ್ಟ್ರ ಭಾರತವಾಗಲಿದೆ ಎಂದು ಬಣ್ಣಿಸಿದ್ದಾರೆ.

About The Author

Leave a Reply

Your email address will not be published. Required fields are marked *