April 27, 2024

Chitradurga hoysala

Kannada news portal

ಅಪ್ಪು ಜನ್ಮ‌ದಿನವನ್ನು ಕೋಟೆ ನಾಡಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ ಹೇಗೆ ಗೊತ್ತೆ.

1 min read

ಚಿತ್ರದುರ್ಗ: ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮ‌ದಿನ‌. 46ನೇ ವಸಂತಕ್ಕೆ ಕಾಲಿಟ್ಟಿರೋ ಪುನೀತ್ ಗೆ ಸ್ನೇಹಿತರು, ಗಣ್ಯರು, ಅಭಿಮಾನಿಗಳಿಂದ ಶುಭಾಶಯದ ಮಹಾಪುರವೇ ಹರಿದು ಬಂದಿದೆ. ಇದೇ ರೀತಿ ಕೋಟೆ ನಾಡು ಚಿತ್ರದುರ್ಗದಲ್ಲೂ ನಟ ಪುನೀತ್ ರಾಜ್ ಕುಮಾರ್ ಜನ್ಮ ದಿನವನ್ನು ಅಭಿಮಾನಿಗಳು ವಿಶೇಷವಾಗಿ ಸಂಭ್ರಮಿಸಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಬರ್ತಡೇ ಪ್ರಯುಕ್ತ ಚಿತ್ರದುರ್ಗದಲ್ಲಿ ಸಂಭ್ರಮಿಸಿದ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ. ಇನ್ನು ವಿಶೇಷ ಅಂದ್ರೆ ನಗರದ ಗಾಂಧಿವೃತ್ತದಲ್ಲಿ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಪ್ಪು ಯೂತ್ ಬ್ರಿಗೇಡ್ ಎಂಬ ಯುವಕರ ಸಂಘ ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಜಾಗೃತಿ ಮೂಡಿಸುವ ಮೂಲಕ ವಿಭಿನ್ನವಾಗಿ ಆಚರಿಸಿದೆ.

Puneeth Rajkumar birthday

ಉಚಿತ ಹೆಲ್ಮೆಟ್ ವಿತರಿಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಅಪ್ಪು ಅಭಿಮಾನಿಗಳು

ಅಪ್ಪು ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಪುನೀತ್​ರ ಹೊಸ ಸಿನಿಮಾಗಳು ಅನೌನ್ಸ್​ ಆಗಿವೆ. ಪೋಸ್ಟರ್​ಗಳು ಬಿಡುಗಡೆ ಆಗಿವೆ. ಅದರ ಜೊತೆ ‘ಯುವರತ್ನ’ ಸಿನಿಮಾದಿಂದ ‘ಫೀಲ್​ ದ ಪವರ್​’ ಪ್ರೋಮೋ ಸಾಂಗ್​ ಹೊರಬಂದಿದೆ. ಕನ್ನಡ ಮತ್ತು ತೆಲುಗಿನಲ್ಲಿ ಇದು​ ರಿಲೀಸ್​ ಆಗಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ನಲ್ಲಿ ನಾಗಾಲೋಟ ಮುಂದುವರಿಸಿದೆ.

ತುಂಬಾನೇ ಡೌನ್ ಟು ಅರ್ಥ್ ನೇಚರ್ ಇರುವ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಪುನೀತ್. ಯಾರನ್ನೇ ಆಗ್ಲಿ ತಮ್ಮ ಸರಳ ಸ್ವಾಭಾವದಿಂದ ಮಾತನಾಡಿಸುತ್ತಾರೆ. ಥೇಟ್ ಅಪ್ಪನ ಗುಣಗಳನ್ನೇ ಅಳವಡಿಸಿಕೊಂಡಿರೋ ಅಪ್ಪು ರಾಜಕುಮಾರನ ಪ್ರತಿರೂಪದಂತೇ ಕಾಣಿಸ್ತಾರೆ. ಇವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇವರ ಡ್ಯಾನ್ಸ್ಗೆ ಮನಸೋಲದ ಜನರಿಲ್ಲ. 1975ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ 6 ತಿಂಗಳ ಮಗುವಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು 1985ರಲ್ಲಿ ಬಂದ ಬೆಟ್ಟದ ಹೂವು ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಮೂಡಿಗೇರಿಸಿಕೊಂಡು ಅತಿ ಚಿಕ್ಕವಯಸ್ಸಿನಲ್ಲೇ ಅವಾರ್ಡ್ ಪಡೆದುಕೊಂಡ ಖ್ಯಾತಿಗೆ ಪಾತ್ರರಾಗಿದ್ದಾರೆ.

About The Author

Leave a Reply

Your email address will not be published. Required fields are marked *