ಷಡಕ್ಷರಿ ದೇವರ ಗದ್ದುಗೆ ಅಭಿವೃದ್ಧಿಗೆ ಸೂಕ್ತ ಕ್ರಮ: ತಹಶೀಲ್ದಾರ್ ಶಾಲಂ ಹುಸೇನ್
1 min read
ಯಳಂದೂರು :- 17 ನೇ ಶತಮಾನದ ಕನ್ನಡ ಮತ್ತು ಸಂಸ್ಕೃತ ಮಹಾಕವಿ ಅವರ ಗದ್ದುಗೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಬೇಕು ಎಂದು ತಹಶೀಲ್ದಾರ್ ಶಾಲಂ ಹುಸೇನ್ ಹೇಳಿದರು.
ಪಟ್ಟಣದ ನಿರ್ಲಕ್ಷಿತ ತಾಣ ಉಭಯ ವಿಷಾರದ ಷಡಕ್ಷರದೇವರ ಗದ್ದುಗೆಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಕನ್ನಡಕ್ಕೆ ಅಪೂರ್ವ ಕಾವ್ಯಗಳನ್ನು ಸೃಷ್ಟಿಸಿ ಕೊಟ್ಟ ಕವಿ,ಪಂಡಿತ ಪಾಮರರಿಂದ ಗೌರವಿಸಿಕೊಂಡ ವಿದ್ವಕ್ ಪೂರ್ಣ ಗ್ರಂಥಕರ್ತ ಇಲ್ಲಿನ ಮಠಾಧಿಪತಿ ಷಡಕ್ಷರದೇವ ಇವರು ಬದುಕಿದ್ದ ಸ್ಥಳ ಈಗ ಅವನತಿ ಯುತ್ತ ಸಾಗಿದೆ ದಾರಿ ಹೋಕರ ತಾಣವಾಗಿದೆ ಹಾಗಾಗಿ ಇವರ ಸಮಾಧಿಗೆ ಸಾಂಸ್ಕೃತಿಕ ಸ್ಪರ್ಶ ನೀಡಿ ಅಭಿವೃದ್ಧಿಪಡಿಸ ಬೇಕಿದೆ ಇಲ್ಲಿರುವ ಅನುಪಯುಕ್ತ ಗಿಡಗೆಂಟೆಗಳನ್ನು ತೆರವುಗೊಳಿಸಿ ಮನುವನ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ವರದಿ :- ಪ್ರದೀಪ್.ಎಸ್
ಯಳಂದೂರು ತಾಲ್ಲೂಕು
ಚಾಮರಾಜನಗರ ಜಿಲ್ಲೆ.