May 1, 2024

Chitradurga hoysala

Kannada news portal

ನಾಳೆ ನಿಮ್ಮ ಕಡೆ ಪವರ್ ಕಟ್ ಆಗುತ್ತಾ ಇಂದೇ ನೋಡಿ.

1 min read

ಮಾರ್ಚ್ 21 ರಂದು ವಿದ್ಯುತ್ ವ್ಯತ್ಯಯ
***
ಚಿತ್ರದುರ್ಗ,ಮಾರ್ಚ್19:
ಚಿತ್ರದುರ್ಗ ನಗರದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ  ಮಾರ್ಚ್ 21 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೊಳಪಡುವ  ಪ್ರದೇಶಗಳು: 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಹೊರಹೋಗುವ 66ಕೆವಿ. ಪಂಡರಹಳ್ಳಿ ಮಾರ್ಗ-1ಮತ್ತು2, 66ಕೆವಿ. ಎನ್.ಇ.ಜಿ. ಮೈಕಾನ್ ಮಾರ್ಗ-1 ಮತ್ತು 2 ಮತ್ತು 11ಕೆವಿ. ಜಿಂದಾಲ್ ಮತ್ತು ಎನಾರ್ಕನ್ ಮಾರ್ಗಗಳು ಹಾಗೂ 11ಕೆವಿ. ಮಾರ್ಗ ಮತ್ತು  ಸುತ್ತಮುತ್ತಲಿನ ಪ್ರದೇಶಗಳು.
ಎಫ್1-ನಗರ ಮಾರ್ಗ: ಆರ್.ಟಿ.ಓ ಕಚೇರಿ, ಬಿಎಲ್ ಗೌಡ ಲೇಔಟ್, ತಿಪ್ಪಾಜ್ಜಿ ಸರ್ಕಲ್, ಬಸವೇಶ್ವರ ಚಿತ್ರಮಂದಿರ, ದೊಡ್ಡಪೇಟೆ, ಗಾಂಧಿ ಸರ್ಕಲ್, ಬಿ.ಡಿ ರಸ್ತೆ. ಎಫ್2- ಕೆಳಗೋಟೆ ಮಾರ್ಗ: ಎಸ್.ಆರ್ ಲೇಔಟ್, ಮುನಿಸಿಪಲ್ ಕಾಲೋನಿ, ಕೆಳಗೋಟೆ, ಪೊಲೀಸ್ ಬಾರ್ ಲೈನ್ ರಸ್ತೆ, ನ್ಯಾಯಾಲಯದ ಸುತ್ತ ಮುತ್ತಲಿನ ಪ್ರದೇಶಗಳು. ಎಫ್3- ಬ್ಯಾಂಕ್ ಕಾಲೋನಿ ಮಾರ್ಗ: ಹೌಸಿಂಗ್ ಬೋರ್ಡ್, ಮದಕರಿಪುರ, ಬಸವೇಶ್ವರ ಆಸ್ಪತ್ರೆ. ಎಫ್4-ಬೆಳಗಟ್ಟ, ಎಫ್5-ಗೊನೂರು, ಎಫ್6-ಜಿ.ಆರ್ ಹಳ್ಳಿ, ಎಫ್9-ಸಿಬಾರ, ಎಫ್11-ಸಿ.ಜೆ.ಹಳ್ಳಿ, ಎಫ್12- ಜೆ.ಸಿ ಆರ್ ಮಾರ್ಗ: ಜೆ.ಸಿ.ಆರ್ ಬಡಾವಣೆ, ವಿ.ಪಿ.ಬಡಾವಣೆ, ಎಫ್13-ಚಂದ್ರವಳ್ಳಿ ಮಾರ್ಗ: ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಮೇದೆಹಳ್ಳಿ ರಸ್ತೆ, ಬಿ.ವಿ.ಕೆ.ಎಸ್. ಬಡಾವಣೆ, ಧವಳಗಿರಿ ಬಡಾವಣೆ, ನೆಹರು ನಗರ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ. ಎಫ್14-ಪಿಳ್ಳೇಕೆರೆನಹಳ್ಳಿ ಮಾರ್ಗ: ಪಿಳ್ಳೇಕೆರೆನಹಳ್ಳಿ, ಗ್ರಾಮಂತರ ಆರಕ್ಷಕ ಠಾಣೆ, ಎಸ್.ಆರ್.ಎಸ್. ಕಾಲೇಜ್. ಎಫ್15-ಮಿಲ್‍ಏರಿಯಾ ಮಾರ್ಗ: ದಾವಣಗೆರೆ ರಸ್ತೆ, ಎಪಿಎಂಸಿ ಮಾರುಕಟ್ಟೆ, ಚೋಳುಗುಡ್ಡ, ಅಗಸನಕಲ್ಲು, ಮಹಾವೀರ ನಗರ, ಆದರ್ಶನಗರ ಸೇರಿದಂತೆ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೀ.ವೋ. ವಿದ್ಯುತ್ ಮಾರ್ಗಗಳಿಂದ ಸಂಪರ್ಕಗೊಂಡಿರುವ ಎಲ್ಲಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *