November 10, 2024

Chitradurga hoysala

Kannada news portal

ಅಂದು ಮದಕರಿನಾಯಕ ಇಂದು ಶ್ರೀರಾಮುಲು

1 min read

53 ಕೆರೆಗಳಿಗೆ ನೀರುಣಿಸಲು ಡೆಟ್ ಫಿಕ್ಸ್  

ಚಿತ್ರದುರ್ಗ:   ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕರ ಕಾಲದಲ್ಲಿ ಈ ನಾಡನ್ನು ಸಂರಕ್ಷಣೆ ಮಾಡುತ್ತ ನಾಡಿನ ಜನರ ಅಭಿವೃದ್ಧಿ  ಜಲ ಮೂಲಗಳಿಂದ ಸಾಧ್ಯ ಎಂದು ಅರಿತು ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿ  ಜನರ ಹಿತ ಕಾಯುವ ಕೆಲಸವನ್ನು ಪಾಳೇಗಾರರ ಕಾಲದಲ್ಲಿ ನಿರಂತರವಾಗಿ ನಡೆಯುತ್ತ ಬಂದಿತ್ತು. ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ,ಮತ್ತಿ ತಿಮ್ಮಣ್ಣ ನಾಯಕ, ಮದಕರಿನಾಯಕ ಹೀಗೆ ಅನೇಕರು ಕೆರೆಗಳನ್ನು ಕಟ್ಟಿಸಿ ಜತ್ಯಾತೀತವಾಗಿ ಜನರ ಏಳ್ಗೆಗೆಗೆ ಶ್ರಮಿಸಿದರು. ಅದೇ ರೀತಿಯಲ್ಲಿ ರಾಜ್ಯದ ಆರೋಗ್ಯ ಸಚಿವರು ಹಾಗೂ  ಮೊಳಕಾಲ್ಮುರು ಕ್ಷೇತ್ರದ ಶಾಸಕರಾದ ಬಿ‌.ಶ್ರೀರಾಮುಲು ಅವರು ಮೊಳಕಾಲ್ಮುರು   ಆಧುನಿಕ ಯುಗದ ಮದಕರಿನಾಯಕನಂತೆ ಕ್ಷೇತ್ರದಲ್ಲಿ  ಶಾಶ್ವತ ಕೆಲಸಗಳಿಗೆ ಒತ್ತು ನೀಡುವ ಜೊತೆಗೆ ಬರದ ನಾಡನ್ನು ಹಸಿರು ನಾಡಗಿಸಲು ಪಣ ತೊಟ್ಟಿದ್ದಾರೆ

ಬರದ ನಾಡಿನ ಭಗೀರಥ ರಾಮುಲು: ಮೊಳಕಾಲ್ಮುರು ಎಂದ ತಕ್ಷಣ ಕಲ್ಲು ಬಂಡೆಗಳ ಸುತ್ತಲೂ ಬರಡು ಭೂಮಿ ಕಾಣುತ್ತದೆ . ಆದರೆ ಸಚಿವರು  ಭದ್ರ ಮೇಲ್ದಂಡೆ ಯೋಜನೆಯಲ್ಲಿ ಹಿಂದುಳಿದ ಬರ ಪೀಡಿತ ಮೊಳಕಾಲ್ಮುರಿಗೆ  52  ಕೆರೆಗೆ ನೀರು ಹರಿಸುವ ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ಬಹುತೇಕ ಹಳ್ಳಿಗಳು ಈ ಯೋಜನೆ ಲಾಭ ಪಡೆಯಲಿದ್ದು ಲಕ್ಷಾಂತರ ಬೋರವೆಲ್ ನೀರಿನ ಮಟ್ಟ ಹೆಚ್ಚುವ ಜೊತಗೆ ಹಸಿರು ಪಟ್ಟಣವಾಗಿಸುವ ಶಪಥ ಮಾಡಿದಂತೆ ಜಲ ಮೂಲಗಳ ದಾರಿಗೆ ಸರ್ಕಾರದ ಹಂತದಲ್ಲಿ ದಿನಗಳ ಮರೆತು  ಗಂಟೆಗಳ ಸಮಯದಲ್ಲಿ ಯೋಜನೆಗಳನ್ನು ತರುವ ಮೂಲಕ ರಾಮುಲು ಈಸ್ ಹಾರ್ಡ್  ವರ್ಕರ್  ಎಂಬ ಮಾತು ಕೇಳಿ ಬರುತ್ತಿದೆ. 

ಮೊಳಕಾಲ್ಮುರು ಕ್ಷೇತ್ರದ 40 ಕೆರೆಗಳು ಮತ್ತು ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ 19 ಕೆರೆಗಳಿಗೆ ನೀರುಣಿಸುವ ಪೈಪ್‌ಲೈನ್ ಕಾಮಗಾರಿಗೆ ಅ.3ರಂದು ಭೂಮಿಪೂಜೆ ನೆರವೇರಿ
ಸಲು ಸಿದ್ಧತೆ ಕೈಗೊಳ್ಳಲಾಗಿದೆ.

‘ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ ಭದ್ರಾಮೇಲ್ದಂಡೆ ಯೋಜನೆಯಲ್ಲಿ ಬಯಲು ಸೀಮೆಯ ಕೆರೆಗಳಿಗೆ
ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಅಂತಿಮ
ಗೊಂಡಿದೆ. ಚಿತ್ರದುರ್ಗದ ಬೆಳಗಟ್ಟ ಗ್ರಾಮದ ಮುಖ್ಯ ಕಾಲುವೆಯಿಂದ ದೊಡ್ಡಗ್ರಾಮದ ಒಂದು ಕೆರೆ, ಚಳ್ಳಕೆರೆ ತಾಲ್ಲೂಕಿನ ಮೊಳಕಾಲ್ಮುರು ಕ್ಷೇತ್ರದ 18 ಕೆರೆಗಳು, ಮೊಳಕಾಲ್ಮುರು ಕ್ಷೇತ್ರದ 40 ಕೆರೆಗಳಿಗೆ ನೀರುಣಿಸಲು ಯೋಜನೆ ಸಿದ್ಧವಾಗಿದೆ. ಒಟ್ಟು 59 ಕೆರೆಗಳಿಗೆ 
₹ 580.35 ಕೋಟಿ ವೆಚ್ಚವಾಗಲಿದ್ದು, ಅಂದಾಜು 330 ಕಿ.ಮೀ ದೂರದ ಪೈಪ್‌ ಲೈನ್ ಅಳವಡಿಸಲಾಗುತ್ತದೆ.

ಪೈಪ್‌ಲೈನ್ ಕಾಮಗಾರಿಯನ್ನು ಮಂಗಳೂರು ಮೂಲದ ಓಷನ್ ಕನ್‌ಸ್ಟ್ರಕ್ಷನ್ ಕಂಪನಿಯು ತೆಗೆದುಕೊಂಡಿದೆ. ಪೈಪ್‌ಲೈನ್ ಅಳವಡಿಸಲು 2 ವರ್ಷಗಳ ಸಮಯ ನಿಗದಿಗೊಳಿಸಲಾಗಿದೆ. ಪ್ರಸ್ತುತ ರೈತರ ಜಮೀನುಗಳಲ್ಲಿ ಬೆಳೆಯಿದ್ದು, ಬೆಳೆಗಳ ಕಟಾವಿನ ನಂತರ ಪೈಪ್‌ಲೈನ್  ವೇಗ ಹೆಚ್ಚಿಸಲಾಗುವುದು. ಅಲ್ಲಿಯವರೆಗೂ ಎಲ್ಲೆಲ್ಲಿ ಖಾಲಿ ಸ್ಥಳವಿರುತ್ತದೆ ಅಲ್ಲಲ್ಲಿ  ಕೆಲಸ ಮಾಡಲಾಗುವುದು ಹಾಗೂ ಅದಕ್ಕಾಗಿ ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆಯಲ್ಲಿ ಅ. 3ರಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭೂಮಿಪೂಜೆ  ನೇರವೇರಿಸಲಿದ್ದಾರೆ’  ಅಧಿಕಾರಿಗಳು ಮಾಹಿತಿ  ಎಂದಿದ್ದಾರೆ

24 ಗಂಟೆಯಲ್ಲಿ ನೀರು ಹರಿಸಿದ ಚಲಗಾರ: 
ಮೊಳಕಾಲ್ಮುರು ಕ್ಷೇತ್ರಕ್ಕೆ ಅನೇಕರು ಶಾಸಕರಾಗಿ ಆಯ್ಕೆಯಾದರು ಸಹ ನಿರೀಕ್ಷಿತ ಮಟ್ಟದಲ್ಲಿ ಶಾಶ್ವತ  ಅಭಿವೃದ್ಧಿ ಕಾರ್ಯ ಆಗಿರಲಿಲ್ಲ.ನೀರಾವರಿಗೆ ಒತ್ತು ನೀಡುವ ಕೆಲಸ ಆಗುತ್ತಿಲ್ಲ ಎಂಬ ದೊಡ್ಡ ಕೊರಗನ್ನು ನೀಗಿಸಲು ರಾಮುಲು ಪಣ ತೊಟ್ಟಿದ್ದಾರೆ. ವಾಣಿವಿಲಾಸ ಸಾಗದಿಂದ ಚಳ್ಳಕೆರೆಗೆ 0.25 ಟಿಎಂಸಿ ನೀರು ಹರಿದ ತಕ್ಷಣ ಮೊಳಕಾಲ್ಮುರು ಕ್ಷೇತ್ರದ ನೂರಾರು ಹಳ್ಳಿಗಳು ಮತ್ತು ಸಾವಿರಾರು ಬೊರವೆಲ್ , ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಅರಿತು ಒಂದೇ ದಿನದಲ್ಲಿ ಚಳ್ಳಕೆರೆಯಿಂದ ಮುಂದಕ್ಕೆ ಮೊಳಕಾಲ್ಮುರು ಕ್ಷೇತ್ರಕ್ಕೆ 0.25 ಟಿಎಂಸಿ ನೀರು ಹರಿಸುವ ಮೂಲಕ ರೈತರ, ಬಡವರ, ಹಿಂದುಳಿದವರ, ನೊಂದವರ ಪರ ಸದಾ ಶ್ರೀರಾಮುಲು ಇರುತ್ತಾರೆ ಎಂಬುದನ್ನು  ಮಾತಡದೆ ಕೆಲಸದ ಮುಖಾಂತರ ತೋರಿಸಿ ರೈತರ ಮನ ಗೆದ್ದಿದ್ದಾರೆ.  

About The Author

Leave a Reply

Your email address will not be published. Required fields are marked *