April 27, 2024

Chitradurga hoysala

Kannada news portal

ಒಂದೇ ಪಂಚಾಯಿತಿಗೆ ಏಳು ಮದ್ಯದ ಅಂಗಡಿಗಳು* ( ರೈತ ಸಂಘಆರೋಪ, ಪರವಾನಗಿಯನ್ನು ಕೊಟ್ಟು ಜನತೆಯ ಬದುಕನ್ನು ಆಳು ಮಾಡುತ್ತಿದ್ದಾರೆ) _________________ಚಿತ್ರದುರ್ಗ ; ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿನ ಗಡಿ ಭಾಗದಲ್ಲಿ ಮದ್ಯಮಾರಾಟ ಮಾಡುವ ಅಂಗಡಿಗಳನ್ನು ರದ್ದುಪಡಿಸಿ, ಜಿಲ್ಲಾ ಅಬಕಾರಿ ಅಧೀಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

1 min read

*ಒಂದೇ ಪಂಚಾಯಿತಿಗೆ ಏಳು ಮದ್ಯದ ಅಂಗಡಿಗಳು* ( ರೈತ ಸಂಘಆರೋಪ, ಪರವಾನಗಿಯನ್ನು ಕೊಟ್ಟು ಜನತೆಯ ಬದುಕನ್ನು ಆಳು ಮಾಡುತ್ತಿದ್ದಾರೆ)
_________________ಚಿತ್ರದುರ್ಗ ;
ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿನ ಗಡಿ ಭಾಗದಲ್ಲಿ ಮದ್ಯಮಾರಾಟ ಮಾಡುವ ಅಂಗಡಿಗಳನ್ನು ರದ್ದುಪಡಿಸಿ, ಜಿಲ್ಲಾ ಅಬಕಾರಿ ಅಧೀಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕೋವಿಡ್-19 ಇರುವ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗಡಿ ಭಾಗದಲ್ಲಿನ ಉಡೇವು, ಬಸಾಪುರ ಗ್ರಾಮ ಮತ್ತು ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಏಳು ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟಿರುತ್ತಾರೆ. ತಿಪ್ಪರೆಡ್ಡಿಹಳ್ಳಿಯ ಬಳಿ ಎರಡು ಮದ್ಯದಂಗಡಿಗಳಿಗೆ ಅನುಮತಿ ಕೊಡಲಾಗಿದ್ದು, ಈ ಮದ್ಯಮಾರಾಟದಿಂದ ಆಂಧ್ರದಿಂದ ನೂರಾರು ಬೈಕ್ ಗಳಲ್ಲಿ ಮದ್ಯಪ್ರಿಯರು ಹಾಗೂ ಕರ್ನಾಟಕ ರಾಜ್ಯದ ಗಡಿಭಾಗದ ನೂರಾರು ಮದ್ಯಪ್ರಿಯರು ಗುಂಪು ಸೇರುತ್ತಿದ್ದಾರೆ. ಇದರಿಂದ ಕೊರಾನ ರೋಗ ಹತೋಟಿಗೆ ಬರಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚಿತ್ರದುರ್ಗ ಜಿಲ್ಲಾ ಅಬಕಾರಿ ಅಧೀಕ್ಷಕರು ಒಂದೇ ಪಂಚಾಯಿತಿಗೆ ಏಳು ಅಂಗಡಿಗಳಿಗೆ ಪರವಾನಗಿಯನ್ನು ಕೊಟ್ಟು ಜನತೆಯ ಬದುಕನ್ನು ಆಳು ಮಾಡುತ್ತಿದ್ದಾರೆ. ಬಡವರು, ಕೂಲಿಕಾರ್ಮಿಕರು ಮದ್ಯ ಸೇವನೆಗೆ ದಾಸರಾಗಿ, ದುಡಿದ ಹಣವನ್ನೆಲ್ಲಾ ಮದ್ಯಪಾನಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಅವರ ಕುಟುಂಬದವರೆಲ್ಲಾ ಉಪವಾಸ ಇರಬೇಕಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಯ ಮೇಲೆ ಕ್ರಮ ಕೈಗೊಂಡು ಅಬಕಾರಿ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕೆಂದು ಆದೇಶ ಮಾಡಿದ್ದರೂ ಸಹ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಮದ್ಯದಂಗಡಿಗಳನ್ನು ತಡೆಹಿಡಿಯಲು ಮತ್ತು ಹೊಸದಾಗಿ ಯಾವುದೇ ಮದ್ಯದಂಗಡಿಗಳನ್ನು ತೆರೆಯದಿರಲು ಸಚಿವರು, ಲೋಕಸಭಾ ಸಚಿವರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿರುತ್ತಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದರು.

ಕೂಡಲೇ ಅಬಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸಚಿವರಿಗೆ ಘೇರಾವ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸುವ ಮೂಲಕ ರೈತ ಸಂಘ ಮತ್ತು ಮಹಿಳಾ ಸಂಘಗಳು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ವಹಿಸಿದ್ದರು.

About The Author

Leave a Reply

Your email address will not be published. Required fields are marked *