ಕೋಟೆನಾಡಿನ ಕೋವಿಡ್ ಸಂಖ್ಯೆ
1 min readಚಿತ್ರದುರ್ಗ: (ಜು. 27):ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ ಮತ್ತೆ 30 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 457 ಕ್ಕೆ ಏರಿಕೆಯಾದಂತಾಗಿದೆ.
ಸೋಮವಾರದ ವರದಿಯಲ್ಲಿ ಚಿತ್ರದುರ್ಗ ತಾಲ್ಲೂಕು-02, ಚಳ್ಳಕೆರೆ-04, ಹೊಸದುರ್ಗ 09, ಹಿರಿಯೂರು 04, ಹೊಳಲ್ಕೆರೆ 04, ಮೊಳಕಾಲ್ಮೂರು-07 ಸೇರಿದಂತೆ ಒಟ್ಟು 30 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ 90 ವರ್ಷದ ಮಹಿಳೆ ಹಾಗೂ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಮೊಳಕಾಲ್ಮೂರು ತಾಲ್ಲೂಕಿನ ಒಬ್ಬರು ಮೃತರಾದ ಪ್ರಕರಣ ವರದಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ 24 ವರ್ಷದ ಪುರುಷ, 34 ವರ್ಷದ ಮಹಿಳೆ. ಚಳ್ಳಕೆರೆ ತಾಲ್ಲೂಕಿನಲ್ಲಿ 75,52,65 ವರ್ಷದ ಪುರುಷರು, 55 ವರ್ಷದ ಮಹಿಳೆ. ಹೊಸದುರ್ಗ ತಾಲ್ಲೂಕಿನ 36,33,28,29,32 ವರ್ಷದ ಪುರುಷರು ಹಾಗೂ 75,45,22,35 ವರ್ಷದ ಮಹಿಳೆಯರು, ಹಿರಿಯೂರಿನ 68,40 ವರ್ಷದ ಪುರುಷರು. 07, 37 ವರ್ಷದ ಮಹಿಳೆಯರು. ಹೊಳಲ್ಕೆರೆಯ 50 ವರ್ಷದ ಪುರುಷ. 18,90,45 ವರ್ಷದ ಮಹಿಳೆಯರು. ಮೊಳಕಾಲ್ಮೂರು ತಾಲ್ಲೂಕಿನ 45,37,54,32,33,08,40 ವರ್ಷದ ಪುರುಷರು ಸೇರಿದಂತೆ ಒಟ್ಟು 30 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ,ಹೊಳಲ್ಕೆರೆಯ 90 ವರ್ಷದ ಮಹಿಳೆ ಹಾಗೂ ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಳಕಾಲ್ಮೂರು ತಾಲ್ಲೂಕಿನ 68 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣ ವರದಿಯಾಗಿದೆ