ಕರ್ನಾಟಕ ಮತ್ತು ಆಂಧ್ರದಲ್ಲಿ ಒಂದು ಲಕ್ಷ ಗಡಿ ದಾಟಿದ ಕರೋನ ಯಾವ ರಾಜ್ಯಗಳಲ್ಲಿ ಎಷ್ಟು?
1 min readದೆಹಲಿ: ಜುಲೈ 28 : ಸೋಮವಾರ ಸಂಜೆ ವೇಳೆಗೆ ಬಂದ ವರದಿ ಬಳಿಕ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಮಹಾರಾಷ್ಟ್ರ, ತಮಿಳುನಾಡು ಹಾಗು ದೆಹಲಿ ಬಳಿಕ ಈಗ ಕರ್ನಾಟಕ ಮತ್ತು ಆಂಧ್ರದಲ್ಲಿ ಒಂದು ಲಕ್ಷ ಕೇಸ್ ದಾಖಲಾಗಿದೆ.ಇಂದು ನಾಲ್ಕು ರಾಜ್ಯಗಳಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಇಂದು ಹೆಚ್ಚು ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲಿ ಎರಡನೇ ಹೆಚ್ಚು ಪ್ರಕರಣ ವರದಿಯಾಗಿದೆ. ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ ಹಾಗೂ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ.
ಕರ್ನಾಟಕದಲ್ಲಿ ಇಂದು 5,324 ಹೊಸ ಕೇಸ್ ದಾಖಲಾಗಿದ್ದು, ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 1,01,465ಕ್ಕೆ ಏರಿದೆ. ಆಂಧ್ರಪ್ರದೇಶದಲ್ಲಿ ಇಂದು 6,051 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಪಾಸಿಟಿವ್ ಕೇಸ್‌ಗಳ ಸಂಖ್ಯೆ 1,02,349ಕ್ಕೆ ಜಿಗಿದಿದೆ.
ಮಹರಾಷ್ಟ್ರದಲ್ಲಿ ಇಂದು 7924 ಜನರಿಗೆ ಕೊರೊನಾ ದೃಢವಾಗಿದೆ.
– ತಮಿಳುನಾಡಿನಲ್ಲಿ 6993 ಕೇಸ್ ಪತ್ತೆಯಾಗಿದೆ
– ಆಂಧ್ರ ಪ್ರದೇಶದಲ್ಲಿ 6051 ಜನರಿಗೆ ಕೊವಿಡ್ ತಗುಲಿದೆ
– ಕರ್ನಾಟಕದಲ್ಲಿ 5324 ಮಂದಿಗೆ ಕೊರೊನಾ ವಕ್ಕರಿಸಿದೆ
– ಉತ್ತರ ಪ್ರದೇಶದಲ್ಲಿ 3505 ಪ್ರಕರಣ ದಾಖಲಾಗಿದೆ
– ಪಶ್ಚಿಮ ಬಂಗಾಳದಲ್ಲಿ 2112 ಜನರಿಗೆ ಸೋಂಕು ಖಚಿತವಾಗಿದೆ