May 5, 2024

Chitradurga hoysala

Kannada news portal

ಕಸಾಪ ಚುನಾವಣೆಯ ಕೆಲ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಕೈಬಿಡಲು ಒತ್ತಾಯ*

1 min read

*ಕಸಾಪ ಚುನಾವಣೆಯ ಕೆಲ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಕೈಬಿಡಲು ಒತ್ತಾಯ.*                                                                                          ( ಕೋವಿಡ್ ಪರಿಸ್ಥಿತಿಯನ್ನು ಸ್ವಪ್ರತಿಷ್ಟೆಗೆ ಬಳಸಿಕೊಳ್ಳುತ್ತಿರುವವರ ಕೈಬಿಡಬೇಕೆಂದ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜೆ. ತಿಪ್ಪೇಸ್ವಾಮಿ) ____________

ಚಳ್ಳಕೆರೆ: ಕೋವಿಡ್ ಪರಿಸ್ಥಿತಿಯನ್ನು ಸ್ವಪ್ರತಿಷ್ಟೆಗೆ ಬಳಸಿಕೊಳ್ಳುತ್ತಿರುವ ಕಸಾಪ ಚುನಾವಣೆಯ ಕೆಲವು ಅಭ್ಯರ್ಥಿಗಳು ಚುನಾವಣಾ ಕಣದಿಂದ ಕೈಬಿಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜೆ. ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ತುರ್ತಾಗಿ ಮಾಡಬೇಕೆಂದು ಒತ್ತಾಯಿಸುತ್ತಿರುವ ಕಸಾಪ ಚುನಾವಣೆಯ ಕೆಲ ಅಭ್ಯರ್ಥಿಗಳ ವರ್ತನೆ ಖಂಡಿಸಿ ಸೋಮವಾರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು ಕಚೇರಿ ಸಿರಸ್ತೇದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದರು.
ಕೊವಿಡ್-19 ಪರಿಸ್ಥಿತಿಗೆ ಲಕ್ಷಗಟ್ಟಲೇ ಜೀವಗಳು ಬಲಿಯಾಗಿವೆ. ಸಾವಿರಾರು ಕುಟುಂಬಗಳು ಅನಾಥವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮೇ.9ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯನ್ನು ಜನರ ಹಿತಕ್ಕಾಗಿ ಮುಂದೂಡಲಾಗಿದೆ. ಆದರೆ, ಅಭ್ಯರ್ಥಿಯಾಗಿರುವ ಕೆ.ಎಂ. ಶಿವಸ್ವಾಮಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಚುನಾವಣೆ ತುರ್ತಾಗಿ ನಡೆಯಬೇಕೆಂದು ಒತ್ತಾಯಿಸಿರುವುದು ಖಂಡನೀಯ. ಎಂದರು.
ಕಾರ್ಯನಿತರ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಿ.ಈಶ್ವರಪ್ಪ ಮಾತನಾಡಿ ಕೋರೋನಾ ಅಲೆಗಳ ನಡುವ ಸಾಕಷ್ಟು ಜನ ತೊಂದರೆಯಲ್ಲಿ ಸಿಲುಕಿದ್ದಾರೆ. ಈಗಾಗಲೆ ಹಲವರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥತಿಯಲ್ಲು ಚುನಾವಣೆ ಮಾಡಿ ಎನ್ನುತ್ತಿರುವುದು ಸರಿಯಲ್ಲ ಇಂತಹ ಮನಸ್ಥಿತಿ ಇರುವ ಅಭ್ಯರ್ಥಿಯನ್ನು ಕಸಾಪ ಮತದಾರರು ತಿರಸ್ಕಾರ ಮಾಡಬೇಕು. ರಾಜಕೀಯ ಚುನಾವಣೆಯಂತೆ ಕಸಾಪ ಚುನಾವಣೆಯಲ್ಲಿ ಹಣಬಲ ಪ್ರದರ್ಶನ ಮಾಡುತ್ತಿರುವ ಕೆಲ ಅಭ್ಯರ್ಥಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಪಿಲಹಳ್ಳಿ ಚಿತ್ರಲಿಂಗಪ್ಪ ಮಾತನಾಡಿ, ಬೇರೆ ಜಿಲ್ಲೆಯವರಾಗಿ ಸ್ಪರ್ಧಿಸಿರುವ ಮತ್ತುಕೆಲವೇ ದಿನಗಳಲ್ಲಿ ನಿಕಟಪೂರ್ವ ಅಧ್ಯಕ್ಷರಾಗಲಿರುವ ಅಭ್ಯರ್ಥಿಯೊಬ್ಬರು ಚುನಾವಣೆಯನ್ನು ನಾನೇ ಮುಂದೂಡಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಚುನಾವಣೆಯಲ್ಲಿ ಭಾಗವಹಿಸಿರುವ ಶಿಕ್ಷಕ ಳು ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಲಿಯಬೇಕು. ಈಗಾಗಲೇ ಸುಮಾರು ಲಕ್ಷಗಟ್ಟಲೇ ಮೌಲ್ಯದ ಡೈರಿ, ಪೆನ್ನು, ಟೋಪಿ ಪರಿಕರಗಳನ್ನು ಹಂಚಿರುವ ಅಭ್ಯರ್ಥೀಗಳು ಚುನಾವಣೆಗೆ ಆತುರಪಡುತ್ತಿದ್ದಾರೆ. ಇಂತಹ ಅಭ್ಯರ್ಥಿಗಳ ಬಗ್ಗೆ ಸಾಮಾಜಿಕ ಸಂಘಟನೆಗಳು ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೆ. ತಿಪ್ಪೇಸ್ವಾಮಿ ಕೊರ್ಲಕುಂಟೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಈಶ್ವರಪ್ಪ, ಸಾಮಾಜಿಕ ಹೋರಾಟಗಾರ ಯಾದಲಗಟ್ಟೆ ಜಗನ್ನಾಥ, ರುದ್ರಮುನಿ, ಬಿ. ಗೌರೀಶ ಮತ್ತಿತರರು ಇದ್ದರು.

About The Author

Leave a Reply

Your email address will not be published. Required fields are marked *