May 3, 2024

Chitradurga hoysala

Kannada news portal

ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ರವರು ಮುಂದಿನ ದಿನಮಾನದಲ್ಲಿ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಿದ್ದು ಇವರು ಜಿಲ್ಲೆಗೆ ಭಗೀರಥನಾಗಲಿದ್ದಾರೆ: ಬಾಜಪ ರೈತ ಮೂರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್

1 min read


ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ರವರು ಮುಂದಿನ ದಿನಮಾನದಲ್ಲಿ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಿದ್ದು ಇವರು ಜಿಲ್ಲೆಗೆ ಭಗೀರಥನಾಗಲಿದ್ದಾರೆ: ಬಾಜಪ ರೈತ ಮೂರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್

ಚಿತ್ರದುರ್ಗ ಜು. 08
ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿ ರವರು ಮುಂದಿನ ದಿನಮಾನದಲ್ಲಿ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಿದ್ದು ಇವರು ಜಿಲ್ಲೆಗೆ ಭಗೀರಥನಾಗಲಿದ್ದಾರೆ ಎಂದು ಬಾಜಪ ರೈತ ಮೂರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್ ತಿಳಿಸಿದ್ದಾರೆ.
ನಾರಯಣಸ್ವಾಮಿಯವರು ಕೇಂದ್ರ ಸಚಿವರಾದ ಹಿನ್ನಲೆಯಲ್ಲಿ ಇಂದು ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪಟಾಕಿ ಸಿಡಿಸಿ ಸಿಹಿಯನ್ನು ಹಂಚಿ ಸಂಭ್ರಮಾಚರಣೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಯಾದವ್, ಮಧ್ಯ ಕರ್ನಾಟಕದ ಬಯಲು ಸೀಮೆ, ಬರÀದ ನಾಡಾದ ಚಿತ್ರದುರ್ಗಕ್ಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಾರಾಯಣಸ್ವಾಮಿಯವರಿಗೆ ಸಚಿವ ಸ್ಥಾನವನ್ನು ನೀಡುವುದರ ಮೂಲಕ ಪ್ರಾತಿನಿಧ್ಯವನ್ನು ನೀಡಿದ್ದಾರೆ. ನಾರಾಯಣಸ್ವಾಮಿಯವರು ಸಚಿವರಾಗಿ ಚಿತ್ರದುರ್ಗ ಜಿಲ್ಲೆಯ ಸಮಸ್ಯೆಗಳಾದ ಅಪ್ಪರ್ ಭದ್ರಾ ಯೋಜನೆ, ದಾವಣಗೆರೆ- ತುಮಕೂರು ನೇರ ರೈಲು ಮಾರ್ಗ ಹಾಗೂ ಚಿತ್ರದುರ್ಗ ನಗರದಲ್ಲಿ ಸರ್ಕಾರದವತಿಯಿಂದ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಲು ಮುಂದಾಗಬೇಕಿದೆ ಎಂದು ತಿಳಿಸಿದರು
ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಎ. ನಾರಾಯಣಸ್ವಾಮಿ ಅವರು ಕೇಂದ್ರ ಸಚಿವರಾಗುವ ಮೂಲಕ ಚಿತ್ರದುರ್ಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ ಸಂಸದ ನಾರಾಯಣಸ್ವಾಮಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದದ್ದಂತೆ ಅವರ ಅಪಾರ ಅಭಿಮಾನಿ ಬಳಗದವರು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಇದಕ್ಕೂ ಮುನ್ನಾ ನಗರದ ಭಾಜಪ ಕಚೇರಿಯ ಬಳಿಯೂ ಸಹಾ ಪಟಾಕಿಯನ್ನು ಸಿಡಿ ಸಂತೋಷವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಭದರಿನಾಥ ,ಉಪಾಧ್ಯಕ್ಷರಾದ ಚಂದ್ರಿಕಾ ಲೋಕನಾಥ್ ವಕ್ತಾರ ನಾಗರಾಜ್ ಬೇಂದ್ರೆ ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ನಗರ ಪ್ರಧಾನಕಾರ್ಯದರ್ಶಿ ಬಾನು ಮೂರ್ತಿ ಕಾರ್ಯದರ್ಶಿ ಯಶವಂತ್ ಕಿರಣ್ ,ಶಂಭು, ಯುವಮೋರ್ಚದ ಚಂದ್ರು ವೆಂಕಟೇಶ್, ಹರೀಶ್, ಬಾರ್ಗವಿ ದ್ರಾವೀಡ್, ಅನೂಸಯಮ್ಮ, ವೀಣಾ,ಸೋಮು, ಇನ್ನೂ ಮುಂತಾದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು

About The Author

Leave a Reply

Your email address will not be published. Required fields are marked *