May 3, 2024

Chitradurga hoysala

Kannada news portal

ಕೇಂದ್ರ ಸಚಿವ ರಾಗಿ ಎ.ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ಅಪ್ ಗ್ರೇಡ ಸಮಾಜ ಕಲ್ಯಾಣ)ಖಾತೆ

1 min read

ಕೇಂದ್ರ ಸಚಿವ ರಾಗಿ ಎ.ನಾರಾಯಣಸ್ವಾಮಿ,
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ಅಪ್ ಗ್ರೇಡ ಸಮಾಜ ಕಲ್ಯಾಣ)ಖಾತೆ

ನವದೆಹಲಿ :

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2.0 ವಿಸ್ತರ್ಣೆಯಾಗಿದೆ. ಇಂತಹ ನೂತನ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ನೂತನ ಸಚಿವರಾಗಿ ಸಂಸದರಾದಂತ *ರಾಜೀವ್ ಚಂದ್ರಶೇಖರ್,ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೇ,ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ * ಶೋಭಾ ಕರಂದ್ಲಾಜೆ, “*ಎ ನಾರಾಯಣಸ್ವಾಮಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಭಗವಂತ್ ಖೂಬಾ , ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ. ಸಚಿವ ಸ್ಥಾನ ಸಕ್ಕಿದೆ.

ಸಂಸದ ಆನೇಕಲ್ ಎ.ನಾರಾಯಣಸ್ವಾಮಿ.
ಕೇಂದ್ರ ಸಚಿವ ಸಂಪುಟವು ಪುನಾರಚನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ನೂತನ ಸಚಿವರಾಗಿ 43 ಸಚಿವರು ಸೇರ್ಪಡೆಗೊಳ್ಳುತ್ತಿದ್ದಾರೆ. ಇಂತಹ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ಕರ್ನಾಟಕದಿಂದ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೂ ಸ್ಥಾನದೊರೆತಿದೆ. ನೂತನ ಕೇಂದ್ರ ಸಚಿವರಾಗಿ ಸಂಸದ ಎ ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರೇ, ಸಂಸದ ಭಗವಂತ ಖೂಬಾ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದ ನಾಲ್ವರು ಸಂಸದರು, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದಾರೆ.

ಅಂದಹಾಗೇ, ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ರಾಜೀನಾಮೆಯಿಂದ ಈವರೆಗೆ ಒಟ್ಟು 12 ಸಚಿವರು ಮೋದಿ ಸಂಪುಟದಿಂದ ನಿರ್ಗಮಿಸಿದ್ದಾರೆ. ಆರೋಗ್ಯ ಕಾರಣಗಳಿಂದಾಗಿ ಶಿಕ್ಷಣ ಸಚಿವ ರಮೇಶ್ ಪೆÇೀಖ್ರಿಯಾಲ್ ನಿಶಾಂಕ್ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ವ್ಯಕ್ತಪಡಿಸಿದರು. ಅವರು ಇನ್ನು ಮುಂದೆ ಸಂಪುಟದ ಭಾಗವಾಗಿರುವುದಿಲ್ಲ. ಅಲ್ಲದೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಬುಧವಾರ ಕೇಂದ್ರ ಸಚಿವ ಸಂಪುಟದಿಂದ ನಿರ್ಗಮಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *