May 5, 2024

Chitradurga hoysala

Kannada news portal

ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿ ಭಾಜಪ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಕಿವಿ ಮಾತು

1 min read

ಚಿತ್ರದುರ್ಗಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿ ಭಾಜಪ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಕಿವಿ ಮಾತು 

ಚಿತ್ರದುರ್ಗ:

ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿ ಅದರಂತೆ ಕೆಲಸವನ್ನು ಮಾಡಿಕೊಂಡು ಹೋಗಿ ಮುಂದಿನ ದಿನದಲ್ಲಿ ಪಕ್ಷ ನಿಮ್ಮ ಕಾರ್ಯವನ್ನು ಗುರುತಿಸಿ ಹುದ್ದೆಗಳನ್ನು ನೀಡಲಿದೆ ಯಾವುದಕ್ಕೂ ಆತುರ ಪಡಬೇಡಿ ಎಂದು ಭಾಜಪ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಕಿವಿ ಮಾತು ಹೇಳಿದ್ದಾರೆ.

ಚಿತ್ರದುರ್ಗ ನಗರದ ಅಕ್ಕಮಹಾದೇವಿ ಸಮಾಜದ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ವಹಿಸಿದ ಜವಾಬ್ದಾರಿಯನ್ನು ತಪ್ಪದೆ ಕೆಲಸವನ್ನು ಮಾಡಿದಾಗ ಪಕ್ಷದ ಮುಖಂಡರು ನಿಮ್ಮ ಕಾರ್ಯವನ್ನು ಗುರುತಿಸುತ್ತಾರೆ. ನಾವು ಕೆಲಸ ಮಾಡುತ್ತೇವೆ ನಮನ್ನು ಯಾರು ಸಹಾ ಗುರುತಿಸುವುದಿಲ್ಲ ಎಂದು ಕೂರಗಬೇಡಿ ನಿಮ್ಮ ಬಗ್ಗೆ ಕೇಂದ್ರ ಮತ್ತು ರಾಜ್ಯ ನಾಯಕರು ನಿಗಾವಹಿಸಿರುತ್ತಾರೆ, ನಿಮ್ಮ ಚಲನ-ವಲನದ ಬಗ್ಗೆ ಅವರು ಗಮನ ನೀಡಿರುತ್ತಾರೆ ಎಂದರು.

ಈಗಾಗಲೇ ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ಸಚಿವ ಸಂಪುಟವನ್ನು ಯಾವುದೇ ಗೊಂದಲ ಇಲ್ಲದೆ ವಿಸ್ತರಣೆ ಮಾಡಿದ್ದಾರೆ. ಎಲ್ಲಿಯೂ ಸಹಾ ಅಪಸ್ವರ ಕಂಡು ಬಂದಿಲ್ಲ, ಪ್ರಭಾವಿ ವ್ಯಕ್ತಿಗಳನ್ನು ತೆಗೆದು ಎರಡನೇ ಹಂತದ ನಾಯಕರನ್ನು ಗುರುತಿಸಿ ಅವರಿಗೆ ಸರ್ಕಾರದಲ್ಲಿ ಸ್ಥಾನವನ್ನು ನೀಡಿದ್ದಾರೆ. ಇದು ಭಾಜಪ ಪಕ್ಷದ ಕಾರ್ಯವಾಗಿದೆ ಇದೇ ರೀತಿ ರಾಜ್ಯದಲ್ಲಿಯೂ ಸಹಾ ನಡೆಯಲಿದೆ ಎಂದು ªಮಹೇಶ್ ತಿಳಿಸಿ, ಜಿಲ್ಲಾ ಮಟ್ಟದಲ್ಲಿ ಇರುವ ಪದಾಧಿಕಾರಿಗಳಲ್ಲಿ ಕೆಲವರು ಬರೀ ಪೋಟೋಗಾಗಿ ಇದ್ದಾರೆ. ಇಂತಹರನ್ನು ತೆಗೆದು ಬೇರೆ ಹುದ್ದೆಯನ್ನು ನೀಡಿ ಕ್ರೀಯಾಶೀಲರಾಗಿ ಕೆಲಸ ಮಾಡುವವರಿಗೆ ಆ ಹುದ್ದೆಯನ್ನು ನೀಡುವಂತೆ ಜಿಲ್ಲಾಧ್ಯಕ್ಷರಿಗೆ ಮಹೇಶ್ ತೆಂಗಿನಕಾಯಿ ಸೂಚನೆ ನೀಡಿದರು.

ಮುಂದಿನ 2 ವರ್ಷದಲ್ಲಿ ವಿಧಾನಸಭೆಯ ಚುನಾವಣೆ ಬರಲಿದೆಅದಕ್ಕೂ ಮುನ್ನಾ ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಚುನಾವಣೆ ಬರುವ ಸೂಚನೆಗಳಿಗೆ ಸರ್ಕಾರ ಕರೋನಾ ಹಿನ್ನಲೆಯಲ್ಲಿ ಆರು ತಿಂಗಳು ಯಾವ ಚುನಾವಣೆಯು ಬೇಡ ಎಂದು ತಿಳಿಸಿದ್ದರು ಸಹಾ ಆಯೋಗ ಈಗಾಗಲೆ ಸರ್ಕಾರದ ಆದೇಶವನ್ನು ಮೀರಿ ಮೀಸಲಾತಿಯನ್ನು ಪ್ರಕಟಿಸಿದೆ ಈ ಹಿನ್ನಲೆಯಲ್ಲಿ ಚುನಾವಣೆ ಯಾವಾಗ ಬೇಕಾದರು ಘೋಷಣೆಯಾಗಬಹುದು ಅದಕ್ಕೆ ಎಲ್ಲರು ಸಿದ್ದರಾಗಿರಬೇಕಿದೆ ಎಂದು ತಿಳಿಸಿ, ಮೀಸಲಾತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ತಿಳಿಸುವಂತ ಕಾರ್ಯವನ್ನು ಮಾಡುವಂತೆ ಪಕ್ಷದ ಮುಖಂಡರಿಗೆ ಕಿವಿ ಮಾತು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿಯಾದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಗುತ್ತಿದೆ ಇದು 15ನೇ ಜಿಲ್ಲೆಯಾಗಿದೆ. ಈಗ ಇದನ್ನು ವೆಬಿನಾರ್ ಮೂಲಕ ಸಭೆಯನ್ನು ಮಾಡಲಾಗುತ್ತಿದೆ ಉಳಿದ ಜಿಲ್ಲೆಗಳನ್ನು ಸಹಾ ಶೀಘ್ರವಾಗಿ ಮುಗಿಸಲಾಗುವುದು ಎಂದು ತಿಳಿಸಿ, ಮುಂದಿನ ದಿನದಲ್ಲಿ ಎರಡನೇ ಸುತ್ತಿನ ಮಂಡಲಾಧ್ಯಕ್ಷರ ಸಭೆಯನ್ನು ನೇರವಾಗಿ ಮಾಡಲಾಗುವುದು. ಇದಾದದ ನಂತರ ಆ.1 ರಿಂದ 15ರವರೆಗೆ ಬೂತ್ ಅಧ್ಯಕ್ಷರ ನಾಮಫಲಕ ಆನಾವರಣ ಕಾರ್ಯಕ್ರಮವನ್ನು ರಾಜ್ಯ 60 ಸಾವಿರ ಬೂತ್‍ಗಳಲ್ಲಿಯೂ ಸಹಾ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕವನ್ನು ಹಾಕಲಾಗುವುದು ಇದರಿಂದ ಅವರನ್ನು ಗುರುತಿಸುವ ಕೆಲಸವನ್ನು ಮಾಡಿದಂತೆ ಆಗುತ್ತದೆ ಹಾಗೇಯೇ ಅವರನ್ನು ಚುನಾವಣೆಗೆ ಸಿದ್ದರನ್ನಾಗಿ ಮಾಡುವ ಕೆಲಸವಾಗುತ್ತದೆ ಇದಾದ ನಂತರ ಬೂತ್ ಅಧ್ಯಕ್ಷರ ಸಮಾವೇಶವನ್ನು ಸಹಾ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು ಎಂದು ಈ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಗೆಲವು ಸಾಧಿಸಿದ್ದಾರೆ. ಇದರಲ್ಲಿ ಹಲವಾರು ಜನತೆ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದಾರೆ. ಮುಂದಿನ ದಿನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮಾವೇಶವನ್ನು ಅಕ್ಟೋಬರ್‍ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿ ರಾಜಕೀಯ ಪಕ್ಷ ಎಂದರೆ ಬರೀ ಚುನಾವಣೆ ಸಮಯದಲ್ಲಿ ಬರುತ್ತಾರೆ, ಮತ ಕೇಳುತ್ತಾರೆ, ನಂತರ ಸಿಗುವುದಿಲ್ಲ ಎಂಬ ಮಾತಿದೆ ಆದರೆ ಬಿಜೆಪಿ ಈ ರೀತಿ ಅಲ್ಲ ಸದಾ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಸಿಗುವಂತ ಪಕ್ಷವಾಗಿದೆ. ಚುನಾವಣೆ ಇರಲಿ, ಇಲ್ಲದಿರಲಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸದಾ ಕ್ರಿಯಾಶೀಲರಾಗಿರಬೇಕಿದೆ ಸರ್ಕಾರಗಳ ಕಾರ್ಯ ಯೋಜನೆಯನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ ಅದಕ್ಕೂ ಮುನ್ನಾ ನೀವುಗಳು ಅದರ ಬಗ್ಗೆ ಸರಿಯಾಗಿ ತಿಳಿಯಬೇಕಿದೆ ಇದಕ್ಕೆ ಈ ರೀತಿಯಾದ ಕಾರ್ಯಕಾರಿಣಿಗಳು ಸಹಾಯವಾಗಲಿದೆ ಮಹೇಶ್ ಎಂದರು.

ಮತ್ತೋರ್ವ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್.ನವೀನ್ ಮಾತನಾಡಿ, ಬಿಜೆಪಿ ಪಕ್ಷ ತತ್ವ ಸಿದ್ದಾಂತದ ಪಕ್ಷವಾಗಿದೆ ಏಕೆಂದರೆ ಇದನ್ನು ಸ್ಥಾಪನೆ ಮಾಡಿದವರು ಅದರ ಅಧಾರದ ಮೇಲೆಯೇ ಪಕ್ಷವನ್ನು ಸಂಘಟಿಸಿದ್ದಾರೆ. ಪ್ರಪಂಚದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಹೊಂದಿದ ಪಕ್ಷ ಬಾಜಪ ಎಂದು ತಿಳಿಸಿ ಕಳೆದ ವಾರದಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿಯವರ ಸ್ಮರಣೆಯನ್ನು ಮಾಡಲಾಗಿದೆ. ಅವರ ತತ್ವ ಸಿದ್ಧಾಂತಗಳನ್ನು ಸಾಧ್ಯವಾದಷ್ಟು ಜೊತೆಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕಾರಿಣಿಯ ಅಧ್ಯಕ್ಷತೆವಹಿಸಿದ ಜಿಲ್ಲಾಧ್ಯಕ್ಷ ಮುರುಳಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಬರುವ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಭಾವುಟವನ್ನು ಹಾರಿಸಬೇಕಿದೆ ಇದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಬೇಕಿದೆ. ಕೇಂದ್ರದಿಂದ ಹಿಡಿದು ಬೂತ್ ಮಟ್ಟದವರೆಗೂಸಹಾ ಪಕ್ಷವನ್ನು ಸಂಘಟಿಸುವ ಕಾರ್ಯವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶೀ ಪಡಿವಾಳ, ವಿಭಾಗೀಯ ಪ್ರಬಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲಯ್ಯ, ರಾಜೇಶ್ ಬಂಡೆಕಟ್ಟೆ, ಸುರೇಶ್ ಸಿದ್ದಾಪುರ ಭಾಗವಹಿಸಿದ್ದರು.
.

About The Author

Leave a Reply

Your email address will not be published. Required fields are marked *