May 2, 2024

Chitradurga hoysala

Kannada news portal

*ಬಿಜೆಪಿ ಸರ್ಕಾರದಿಂದ ಸಾಮಾನ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ:ಯೋಗಿಶ್ ಬಾಬು*

1 min read

*ಬಿಜೆಪಿ ಸರ್ಕಾರದಿಂದ ಸಾಮಾನ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ:ಯೋಗಿಶ್ ಬಾಬು*

ಚಿತ್ರದುರ್ಗ : ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ಮುಗೇಶ್ ಅಂಬಾನಿಯನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದ್ದೆ ಕೇಂದ್ರದ ನರೇಂದ್ರ ಮೋದಿ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಡಾ. ಯೋಗೇಶ್ ಬಾಬು ಕಿಡಿಕಾರಿದರು.

ನಾಯಕನಹಟ್ಟಿ ಸಮೀಪದ ಹಿರೇಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ದಿನದಿಂದ ಸಾಮಾನ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಸಚಿವರು ಕಾಂಗ್ರೆಸ್ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡನೆ ಯೋಜನೆಯಲ್ಲಿ ಮಾಜಿ ಲೋಕ ಸಭಾ ಸದಸ್ಯರಾದ ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಎಂ.ಎಲ್.ಸಿ ಜಯಮ್ಮ ಬಾಲರಾಜ್, ಹೋರಾಟ ಮಾಡಿ ತುಂಗ ಭದ್ರಾ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ.

ಈ ಕ್ಷೇತ್ರದಲ್ಲಿ ಸಚಿವರಾದ ಶ್ರೀರಾಮುಲುರವರೆ ನಿಮ್ಮ ಸರ್ಕಾರವಿದೆ ಯಾವುದಾದರು ಒಂದು ಕಾಮಗಾರಿ ತಂದು ಉದ್ಘಾಟನೆ ಮಾಡಪ್ಪ ಎಂದು ಅವರ ವಿರುದ್ದ ಹರಿದಾಯ್ದರು. ಪೆಟ್ರೋಲ್, ಡೀಸಲ್, ಇಂದನ ಬೆಲೆ ಹೆಚ್ಚಾಗಿ ದಿನೆದಿನೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಶ್ರೀ ಸಾಮಾನ್ಯರು ಸಮಾಜದಲ್ಲಿ ಬದುಕುವುದೇ ಕಷ್ಟವಾಗಿದೆ ಎಂದರು.

ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ದಿನದಿಂದ ಕಾರ್ಪರೇಟ್ ಕಂಪನಿಗಳಿಗೆ ಮಾತ್ರ ಮಣೆ ಹಾಕುತ್ತ ಸಣ್ಣಪುಟ್ಟವರನ್ನು ಕಡೆಗಣಿಸಿದೆ. ಹಾಗೂ ಕೋರೋನ ರೋಗವನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಜನರು ತಾವು ಮಾಡುವ ಅನಚಾರಗಳನ್ನು ತುಂಬಾ ಸೂಷ್ಮವಾಗಿ ಗಮನಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲು ಕಾದು ಕುಳಿತ್ತಿದ್ದಾರೆ. ಎಂದು ಅವರು ಮಾತಿನೂದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟ ವ್ಯವಸ್ಥೆಯ ವಿರುದ್ದ ಕಿಡಿಕಾರಿದರು.

ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರ 40 ಕ್ಕೂ ಹೆಚ್ಚು ಬಾರಿ ತೈಲ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಮೇಲೆ ಅನಗತ್ಯ ಹೊರೆಹೊರಿಸಿದೆ. ಇದರ ಭಾಗವಾಗಿ ಗ್ಯಾಸ್ ಅಡುಗೆ ಎಣ್ಣೆ, ಬೇಳೆ, ದಿನಸಲಿ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರು ಕೊಳ್ಳಲು ಹಿಂದುಮುಂದು ನೋಡುವಂತಾಗಿದೆ. ಕಾಂಗ್ರೆಸ್ ಪಕ್ಷ ಹಲವಾರಿ ಬಾರಿ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದರು, ಸರ್ಕಾರದ ದಪ್ಪ ಚರ್ಮದ ವರ್ತನೆಯಲ್ಲಿ ಬದಲಾವಣೆ ಕಂಡಿಲ್ಲ ಆಗಾಗಿ ಬಡವರ ಪರ ಪರವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಈ ಬರುವಂತಹ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಮೋಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಮುಕ್ತ ಆಗುವುದರಲ್ಲಿ ಸಂಶಯವಿಲ್ಲ. ಎಂದು ಸುದ್ದಿಗೊಷ್ಠಿಯೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *