Recent Posts

October 17, 2021

Chitradurga hoysala

Kannada news portal

ರಕ್ತದಾನ ಮಾಡುವುದು ಶ್ರೇಷ್ಠ ಕಾಯಕ: ಪೊಲೀಸ್ ವರಿಷ್ಟಾಧಿಕಾರಿ ಜಿ. ರಾಧಿಕಾ

1 min read

ರಕ್ತದಾನ ಮಾಡುವುದು ಶ್ರೇಷ್ಠ ಕಾಯಕ: ಜಿ. ರಾಧಿಕಾ
ಜೋಗಿಮಟ್ಟಿ ಗೆಳೆಯರ ಬಳಗ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

ಚಿತ್ರದುರ್ಗ: ಜು:20: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದ್ದು, ಇಂತಹ ಕೋವಿಡ್ ಸಂದರ್ಭದಲ್ಲಿ ರಕ್ತದಾನ ಮಾಡುವ ಯುವಕರದ್ದು ಶ್ರೇಷ್ಠ ಕಾಯಕವಾಗಿದ್ದು, ಜೀವ ಉಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಜಿ. ರಾಧಿಕಾ ಅವರು ಹೇಳಿದರು.
ಅವರು ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಪಟ್ಟದ ಪರಮೇಶ್ವರ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದು ಜೋಗಿಮಟ್ಟಿ ಗೆಳೆಯರ ಬಳಗದ ಉದ್ಘಾಟನಾ ಸಮಾರಂಭದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಬಳಗದ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.
ರಕ್ತದಾನ ಮಾಡುವುದು ಶ್ರೇಷ್ಠ ಕಾಯಕ: ಜಿ. ರಾಧಿಕಾಜೋಗಿಮಟ್ಟಿ ಎಂದರೇ ಅದೊಂದು ವಿಸ್ಮಯ ಅಂತಹ ಹೆಸರಿನ ಮೂಲಕ ನೀವು ಸಂಘಟನೆ ಮಾಡುತ್ತಿರುವುದು ವಿಶೇಷವಾಗಿದೆ. ಇಂದು ಎಲ್ಲರನ್ನು ಕಾಯುವ ಕೆಲಸವನ್ನು ಯುವಸಮೂಹ ಮಾಡಬೇಕು. ನಿಮ್ಮ ಬಳಗದವತಿಯಿಂದ ಮಾಡುವ ಎಲ್ಲಾ ಕಾರ್ಯಗಳು ಚಿತ್ರದುರ್ಗದಲ್ಲಿ ಮಾದರಿಯಾಗಲಿ ಎಂದರು.
ಜೋಗಿಮಟ್ಟಿ ಗೆಳೆಯರ ಬಳಗದ ಸಮಾರಂಭ ಉದ್ಘಾಟನೆ ಮಾಡಿದ ಯುವ ಮುಖಂಡ, ಜಿ.ಎಂ. ಗ್ರೂಪ್ ನಿರ್ದೇಶಕ ಅನಿತ್ ಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವಾ ಕಾರ್ಯಗಳು ಇಂದು ಹೆಚ್ಚು ದೈವಕೃಪೆಗೆ ಪಾತ್ರರಾಗುತ್ತವೆ. ನಾವು ಶಾಶ್ವತವಲ್ಲ ನಾವು ಮಾಡುವ ಕಾರ್ಯ ಶಾಶ್ವತವಾಗಿರುತ್ತವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಂಗನಾಥ್ ಮಾತನಾಡಿ, ನಿಮ್ಮ ಜೋಗಿಮಟ್ಟಿ ಗೆಳೆಯರ ಬಳಗದವತಿಯಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೂ ನಮ್ಮ ಇಲಾಖೆಯ ಸಹಕಾರ ಇರಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜೋಗಿಮಟ್ಟಿ ಗೆಳೆಯರ ಬಳಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮಾತನಾಡಿ, ಜೋಗಿಮಟ್ಟಿ ಗೆಳೆಯರ ಬಳಗದ ನಮ್ಮ ಮಿತ್ರರು ಕಳೆದ ಎಂಟತ್ತು ವರ್ಷಗಳಿಂದ ನಿರಂತರವಾಗಿ ಅನೇಕ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದು ಇಂದಿನಿಂದ ಸಂಘ ಅಧಿಕೃತವಾಗಿ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಸಲಹೆಗಾರರಾದ ಮಾಲತೇಶ್ ಅರಸ್, ಶ್ರೀ ಪಟ್ಟದ ಪರಮೇಶ್ವರ ಶಾಲಾ ಮುಖ್ಯಶಿಕ್ಷಕ ಪ್ರಕಾಶ್, ನಗರಸಭೆ ಸದಸ್ಯ ಶಶಿಧರ್, ಜೋಗಿಮಟ್ಟಿ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾರ್ಯದರ್ಶಿ ಡಿ.ಎಸ್.ಅನಿಲ್ ಕುಮಾರ್ ಮಾತನಾಡಿದರು.
ಖಜಾಂಚಿ ರವಿ, ಉಪಾಧ್ಯಕ್ಷರಾದ ತಿಪ್ಪೇಶ್ ಗರಡಿ, ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆಸಲ್ಲಿಸಿದ ಈ, ಅಶೋಕ್, ಮಂಜುನಾಥ್ ಬೆಸ್ಕಾಂ. ಪ್ರಕಾಶ್, ಕುಮಾರ್ ಅವರನ್ನು ಸನ್ಮಾನಿಸಲಾಯಿತು. 64 ಯುವ ಜನರು ರಕ್ತದಾನ ಮಾಡಿದರು. ಅವರಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ವಿತರಿಸಲಾಯಿತು. ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed