April 28, 2024

Chitradurga hoysala

Kannada news portal

ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವರನ್ನು ಗುರು ಸಮಾನರೆಂದೇ ತಿಳಿಯಬೇಕು: ಎಸ್.ಜಿ.ರಂಗನಾಥ್

1 min read

ಪ್ರಜಾಪ್ರಭುತ್ವ ವ್ಯವಸ್ಥೆಯ ನಮ್ಮ ರಾಷ್ಟ್ರದಲ್ಲಿ ಮೌಲ್ಯಗಳು ಕುಸಿಯುತ್ತಿವೆ.ಡಿ.ಡಿ.ಪಿ.ಐ, ರವಿಶಂಕರ್ ರೆಡ್ಡಿ.

ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವರನ್ನು ಗುರು ಸಮಾನರೆಂದೇ ತಿಳಿಯಬೇಕು:
ಎಸ್.ಜಿ.ರಂಗನಾಥ್

ಚಿತ್ರದುರ್ಗ, ಜು,24, ಪ್ರಜಾಪ್ರಭುತ್ವ ವ್ಯವಸ್ಥೆಯ ನಮ್ಮ ರಾಷ್ಟ್ರದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸಂತೋಷ, ನೆಮ್ಮದಿ, ಆರೋಗ್ಯಕ್ಕೆ ಕುತ್ತು ಬಂದಿದೆ. ಇವಾವನ್ನು ಶೇಖರಣೆ ಮಾಡಲು ಅಥವಾ ಶೇರ್ ಮಾಡಲು ಬರುವುದಿಲ್ಲ.ಅವನ್ನು ಮನುಷ್ಯ ಸಾಧನೆ ಮುಖಾಂತರವೇ ಪಡೆಯಬೇಕು. ಅದಕ್ಕೆ ಗುರುವಿನ ಮಾರ್ಗದರ್ಶನ ಅಗತ್ಯವಿದೆ ಎಂದು ಚಿತ್ರದುರ್ಗ  ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರವಿಶಂಕರ್ ರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ನೀಲಕಂಠೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ,ವೀರಶೈವ ಸಮಾಜ,   ಶ್ರೀಗುರು ಯೋಗ ತರಬೇತಿ ಸಂಸ್ಥೆ, ಚಿತ್ರದುರ್ಗ ರೋಟರಿ ಪೋರ್ಟ್ ಹಾಗೂ ಇನ್ನರ್ ವೀಲ್ ಕ್ಲಬ್  ಚಿತ್ರದುರ್ಗ ಪೋರ್ಟ್ ಇವರುಗಳ ಸಹಯೋಗದಲ್ಲಿ  ಏರ್ಪಡಿಸಿದ್ದ  ಗುರುಪೂರ್ಣಿಮಾ ಪ್ರಯುಕ್ತ ಗುರು ವಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾಡುತ್ತಾ ಇಂದಿನ ದಿನಮಾನಕ್ಕೆ ಕೌಶಲ್ಯಯುತ ಜೀವನ ಕಲೆ ರೂಢಿಸಿಕೊಳ್ಳುವಲ್ಲಿ ಪ್ರಯತ್ನ ಪಟ್ಟರೆ ನೆಮ್ಮದಿ ಸಾಧ್ಯ. ಅಂತಹ ಜೀವನ ಪಾಠ ಹೇಳುವ ಗುರುವಿನ ಮಾರ್ಗದರ್ಶನ ಬೇಕು. ಗುರು ಶಿಷ್ಯರ ನಡುವಿನ ಬಾಂಧವ್ಯ ಗುರು ಪೂರ್ಣಿಮಾದಂತಹ ಆಚರಣೆ ಪ್ರತಿ ಶಾಲಾ ಕಾಲೇಜುಗಳಲ್ಲಿ ಆಚರಿಸಲು ಆದೇಶಿಸಿದರೆ ಮೌಲ್ಯಗಳ ಮರುಸ್ಥಾಪನೆಗೆ ಅವಕಾಶ ನೀಡಿದಂತಾಗುತ್ತದೆಂದು ಹೇಳಿದ ಅವರು ಕೋವಿಡ್ ಪ್ರಕೃತಿ ವಿಕೋಪದಿಂದ ಬಂದಿದೆ. ಗುರು, ತಂದೆ ತಾಯಿ ಮತ್ತು ಸಮಾಜದ ಋಣ ತೀರಿಸುವ ಅವಕಾಶ ನಮ್ಮ ಮೇಲಿದೆ ಎಂದರು. ಮಕ್ಕಳಿಗೆ ಇಂದು ನೀತಿ ಪಾಠದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಮತ್ತೋರ್ವ ಅತಿಥಿಗಳಾದ ವೀರಶೈವ ಸಮಾಜದ ಕಾರ್ಯದರ್ಶಿ ಹಾಗೂ ವಕೀಲರು ಆದ ಎನ್. ಬಿ.ವಿಶ್ವನಾಥ್ ಮಾತನಾಡಿ ಇದೊಂದು ಅರ್ಥ ಪೂರ್ಣ ಸಮಾರಂಭವಾಗಿದ್ದು ನಮ್ಮ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯವಿದೆ. ತಾಯಿ ತಂದೆ ಜನ್ಮದಾತರು,ಗುರು ಸಂಸ್ಕೃತಿ, ಸನ್ಮಡತೆಯನ್ನ ಕಲಿಸುವವರಾಗಿದ್ದು.ಇಂದಿನ ಯುವ ಜನಾಂಗಕ್ಕೆ ಗುರುವಿನ ನಿರ್ದೇಶನ ಬೇಕೆಂದು ಹೇಳಿದರು. ರೋಟರಿ ಪೋರ್ಟ್ ನ ಅಧ್ಯಕ್ಷರಾದ ಶಿವಕುಮಾರ್ ಮಾತನಾಡಿ ಸರ್ವ ರೋಗಗಳಿಗೂ ಯೋಗ ಮದ್ದು. ಅದರಿಂದಲೇ ಸರ್ಕಾರ ಯೋಗದಿನಾಚರಣೆಗೆ ಅವಕಾಶ ಕಲ್ಪಿಸಿದೆ ಎಂದರೆ ತಪ್ಪಲ್ಲ ಎಂದರು. ಇನ್ನೋರ್ವ ಅತಿಥಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಸಭೆ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್.ಜಿ.ರಂಗನಾಥ್ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಯಾರೇ ಯಾವ ಕ್ಷೇತ್ರದವರಾದರೂ ಅವರು ಗುರು ಸಮಾನರೆಂದೇ ತಿಳಿಯಬೇಕೇಂದರು.
ಸಮಾರಂಭದ ಕೇಂದ್ರ ಬಿಂದು ಮತ್ತು ಮಾರ್ಗದರ್ಶಕರೂ ಆದ ಯೋಗ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಎಲ್ .ಎಸ್.  ಚಿನ್ಮಯಾನಂದ ಅವರು ಮಾತನಾಡಿ ಕಳೆದ 25ವರ್ಷಗಳಿಂದ ಚಿತ್ರದುರ್ಗಲ್ಲಿ ಯೋಗ ಶಿಕ್ಷಣ ನೀಡುತ್ತಾ, ಇದೀಗ ನಗರದ ವಿವಿಧ ಬಡಾವಣೆಗಳಲ್ಲಿ  7-8 ಶಾಖೆಗಳನ್ನು ಪ್ರಾರಂಭಿಸಲಾಗಿದೆ. ನಾವು ದೂರದೂರಿನಿಂದ ಮಲ್ಲಾಡಿಹಳ್ಳಿಗೆ ಬಂದು ಯೋಗ ಕಲಿತೆ.ಈಗ ಆ ಸ್ಥಿತಿ ಇಲ್ಲ ನಿಮ್ಮ ಬಳಿಗೆ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಾರ್ವಜನಿಕರು ಆಸಕ್ತಿ ತೋರಬೇಕು.ವೈದ್ಯರು ಹೇಳುವಂತೆ ಕೋವಿಡ್-19 ಕ್ಕೆ  ನಿಖರ ಔಷಧ ಇಲ್ಲ. ಪರ್ಯಾಯವಾಗಿ ನಮಗೆ ಯುಮಿನಿಟಿ ಪವರ್ ಹೆಚ್ಚಿಸುವ ವ್ಯಾಕ್ಸಿನ್ ಬಂದಿದೆ. ಯೋಗದಿಂದಲೇ ಅಂತಹ ಶಕ್ತಿಯನ್ನು ಪಡೆಯಬಹುದಾಗಿದೆ ಎಂದ ಅವರು ಪ್ರಾಣಾಯಾಮ ನಮ್ಮ ಒಳಗಿನ ಅಂತಃಶಕ್ತಿಯನ್ನ ಹೆಚ್ಚು ಮಾಡಲು ಸಹಕಾರಿ, ಆಸನ ಬಾಹ್ಯ 64 ಜಾಯಿಂಟ್ ಗಳು ಸುಗಮವಾಗಿ ಸಾಗಲು ಪ್ರೇರಣೆ ನೀಡಿದರೆ,ಇನ್ನು ಧ್ಯಾನ ನಮ್ಮ ಅರಿವನ್ನ ಉದ್ದೀಪನಗೊಳಿಸಿ ಜ್ಞಾನದ ಬೆಳಕನ್ನು ನೀಡುತ್ತದೆಂದು ವಿವರಿಸಿದರು.
.ಈ ಸಂದರ್ಭದಲ್ಲಿ ನಗರದ ಯೋಗ ಶಾಖೆಗಳ ತರಬೇತಿ ಶಿಕ್ಷಕರಾದ ರಾಜಣ್ಣ ,ವೆಂಕಟೇಶ್, ರಂಗಸ್ವಾಮಿ, ಓಂಪವನ ಪ್ರಿಯ,ತನುಜಾ ಹಾಗೂ ಎಸ್. ಜಿ.ರಂಗನಾಥ್ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.ಹಾಗೆಯೇ ಗೃಹರಕ್ಷದಳದ ಕಮಾಂಡರ್ ಆಗಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಮುಖ್ಯ ಮಂತ್ರಿಗಳ ಪದಕಕ್ಕೆ ಭಾಜನರಾದ ಯೋಗ ವಿದ್ಯಾರ್ಥಿಯೂ ಆದ ನಗರದ  ಸಿ.ಎನ್. ಕಾಂತರಾಜು ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಯೋಗ ವಿದ್ಯಾರ್ಥಿಗಳು ಆದ ತಿಮ್ಮಾರೆಡ್ಡಿ,ಮಹಡಿಶಿವಮೂರ್ತಿ,ವಾಸವಿಲ್ಯಾಬ್ ಶ್ರೀನಿವಾಸಶೆಟ್ಟಿ,ರೀನಾವೀರಭದ್ದಪ್ಪ,ಟಿ.ಸ್ವಾಮಿ, ಶಂಭಣ್ಣ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಮಲ್ಲಾಡಿಹಳ್ಳಿ ರಾಘವೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಸಭೆ ಉದ್ಘಾಟನೆ ನೆರವೇರಿತು.ಶ್ರೀಮತಿ ಕೋಕಿಲಾ ಪ್ರಾರ್ಥನೆ ಹಾಡಿದರು. ಪವನಪ್ರಿಯ ಸ್ವಾಗತಿಸಿದರು.ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು, ನಾಗಚೇತನ್ ಶರಣು ಸಮರ್ಪಣೆ ಮಾಡಿದರು.

About The Author

Leave a Reply

Your email address will not be published. Required fields are marked *