Recent Posts

October 17, 2021

Chitradurga hoysala

Kannada news portal

*ಒಗ್ಗಟ್ಟು!ಒಬ್ಬಟ್ಟು?*

1 min read


*ಒಗ್ಗಟ್ಟು!ಒಬ್ಬಟ್ಟು?* ________________

ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ತರಹದ ಟಿಫನ್ ಮಾಡೋಕೆ ಹೇಳಿದ್ರು!

ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ… ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು.

ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು

ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕದ್ರು

ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡಿದ್ರು… ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು

18 ಜನ ದೋಸಾ, 16 ಜನ ಪರೋಟ, 14 ಜನ ರೊಟ್ಟಿ, 12 ಜನ ಬ್ರೆಡ್ ಬಟರ್, 10 ಜನ ನೂಡಲ್ಸ್, 10 ಜನ ಇಡ್ಲಿಗೆ ವೋಟ್ ಮಾಡಿಬಿಟ್ರು,

ಈಗ ಯೋಚನೆ ಮಾಡಿ ಏನಾಗಿರಬಹುದು ?

ಆ ಹಾಸ್ಟೆಲ್ಲಿನ ಕ್ಯಾಂಟಿನ್ ‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ರು.

ನೀತಿ ಪಾಠ: ಎಲ್ಲಿಯವರೆಗೆ 80 ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ ಆಟ ನಡಿಯತ್ತೆ ಅಂತ.

ಒಗ್ಗಟ್ಟಾಗಿ, ಉತ್ತಮರಾಗಿ, ಶಿಕ್ಷಿತರಾಗಿ, ಸಂಘಟಿತರಾಗಿ ಇಲ್ಲಾಂದ್ರೆ ಚಿತ್ರಾನ್ನಾನೇ ಆಗ್ತೀರ.!?

__________ ಸಂಗ್ರಹ:ಸರಸ್ವತಿ ಚಿಕ್ಕತರಹಳ್ಳಿ ಮಂಡ್ಯ

Leave a Reply

Your email address will not be published. Required fields are marked *

You may have missed