May 15, 2024

Chitradurga hoysala

Kannada news portal

ಬುದ್ಧ, ಬಸವ, ಏಸು ಮೊದಲಾದವರು ಸಂಸಾರದಲ್ಲಿದ್ದುಕೊಂಡು ತತ್ವವನ್ನು ಆಚರಿಸಿದರು. ಯಾರು ಜೀವನದಲ್ಲಿ ತತ್ವವನ್ನು ಆಚರಿಸುತ್ತಾರೋ ಅವರಿಗೆ ಒತ್ತಾಗಿ ಇರುವೆ ಎಂದು ಬಸವಣ್ಣ ಹೇಳುತ್ತಾರೆ.ಮುರುಘಾಶರಣರು

1 min read

ಬುದ್ಧ, ಬಸವ, ಏಸು ಮೊದಲಾದವರು ಸಂಸಾರದಲ್ಲಿದ್ದುಕೊಂಡು ತತ್ವವನ್ನು ಆಚರಿಸಿದರು. ಯಾರು ಜೀವನದಲ್ಲಿ ತತ್ವವನ್ನು ಆಚರಿಸುತ್ತಾರೋ ಅವರಿಗೆ ಒತ್ತಾಗಿ ಇರುವೆ ಎಂದು ಬಸವಣ್ಣ ಹೇಳುತ್ತಾರೆ.ಶರಣರು

ನಾವು ಒಂದು ಪರ್ವಕಾಲದಲ್ಲಿ ಹುಟ್ಟಿದ್ದೇವೆ. 12ನೇ ಶತಮಾನದಲ್ಲಿ ಬಂದ ಕಲ್ಯಾಣ 21ನೇ ಶತಮಾನದಲ್ಲಿ ಮತ್ತೊಮ್ಮೆ ಪ್ರಾರಂಭವಾಗಿದೆ ಮಾದರ ಚನ್ನಯ್ಯ ಶ್ರೀ

ಚಿತ್ರದುರ್ಗ ಆ. 9 -ಆಧ್ಯಾತ್ಮಿಕ ಚಿಂತನ ಮಂಥನಕ್ಕೆ ಒಳಗಡೆಯಾದಾಗ ಅದು ನಮ್ಮ ಬದುಕನ್ನು ಎತ್ತರಿಸುತ್ತದೆ. ಬದುಕಿನ ಎಲ್ಲ ಬೇಸರನ್ನು ಚಂಚಲತೆಯನ್ನು ಗೊಂದಲವನ್ನು ಆಶಾಂತಿ ಅಸಹನೆಯನ್ನು ನಿವಾರಣೆ ಮಾಡುವಂಥ ಶಕ್ತಿ ಅನುಭವಾಮೃತಕ್ಕಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್ ಅವರ ನಿವಾಸದಲ್ಲಿ ನಡೆದ 2021ರ ಶ್ರಾವಣಮಾಸದ ವಿಶೇಷ ಕಾರ್ಯಕ್ರಮ ನಿತ್ಯ ಕಲ್ಯಾಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ದೈನಂದಿನ ಜೀವನದಲ್ಲಿ ತತ್ವಾಚರಣೆ ಆಗುವುದೆ? ವಿಷಯ ಕುರಿತು ಶ್ರೀಗಳು ಮಾತನಾಡಿದರು.

ಕಲ್ಯಾಣ ಜೀವನದ ಅಂಗವಾಗಬೇಕು. ಮೊಸರಿನಲ್ಲಿ ಬೆಣ್ಣೆ ತೇಲಿ ಬರುವಂತೆ ನಮ್ಮೊಳಗೆ ಜಿಜ್ಞಾಸುಗಳು ತೇಲಿ ಬರಬೇಕು. ಇಲ್ಲಿ ಬರುವ ನವನೀತ ಅನುಭವಾಮೃತ ಎನ್ನುವ ಬೆಣ್ಣೆ. ಅದು ಬದುಕಿಗೆ ಚೈತನ್ಯವುಂಟು ಮಾಡುತ್ತದೆ. ಚಿಂತನ ಮಂಥನ ಬದುಕನ್ನು ಎತ್ತರಿಸುತ್ತದೆ. ಇದು ಎಲ್ಲ ಗೊಂದಲವನ್ನು ನಿವಾರಿಸಿ ಮನಸ್ಸಿಗೆ ಮುದ ನೀಡುತ್ತದೆ. ಸ್ವಲ್ಪ ತಿಂದರೆ ಚೈತನ್ಯ ಬಹಳ ತಿಂದರೆ ಅದು ರೋಗ. ಚಿಂತನದಿಂದ ಆಧ್ಯಾತ್ಮಿಕವಾಗಿರುವ ಶಕ್ತಿ ದೊರೆಯುತ್ತದೆ. ಶರೀರ, ಇಂದ್ರಿಯ, ಬುದ್ಧಿ ಇವುಗಳನ್ನು ವಿಕಸನಗೊಳಿಸುತ್ತ ಹೋಗುತ್ತದೆ ಎಂದು ಹೇಳಿದರು.

ಜೀವನಾವಶ್ಯಕ ವಸ್ತುಗಳಿಗಾಗಿ ಚಿಂತಿಸುವವರು -ಸದಾ ಕಾಲ ಚಿಂತಿಸುವವರಿಗೆ ಜೀವನಾಶ್ಯಕ ವಸ್ತುಗಳು ಬೇಕು. ನಮ್ಮದು ಶ್ರಮ ಸಂಸ್ಕøತಿ. ನಾವು ಅವುಗಳನ್ನು ಆಚರಿಸಬೇಕು. ತತ್ವ ಅನುಸರಿಸುವವರ ಸಂಖ್ಯೆ ಬಹಳ ಕಡಿಮೆ. ಅವುಗಳನ್ನು ತತ್ವಜ್ಞಾನಿಗಳು, ಸಮಾಜ ಚಿಂತಕರು ಜಿಜ್ಞಾಸುಗಳು ಅನುಸರಿಸುತ್ತಾರೆ. ನಮ್ಮ ದೇಹದಲ್ಲಿ ತಾತ್ವಿಕ ಜಿಜ್ಞಾಸೆ ನಡೆಯಬೇಕು. ಆಗ ಜೀವನ ಬೇರೆಯಲ್ಲ ತತ್ವ ಬೇರೆಯಾಗುವುದಿಲ್ಲ. ತತ್ತ್ವಕ್ಕಾಗಿ ಜೀವನ ಇಲ್ಲ. ತತ್ತ್ವವನ್ನು ಉಸಿರಾಟದಷ್ಟೆ ಸರಾಗವಾಗಿ ನಡೆಸಬೇಕು. ಮಾನವನ ಮುಂದೆ ಸಾಕಷ್ಟು ಆಮಿಷಗಳಿವೆ. ಒತ್ತಡಗಳು, ಪ್ರಲೋಭನೆಗಳು ಬಂದಾಗ ಆಮಿಷಗಳಿಗೆ ಒಳಗಾಗಬಾರದು. ಬುದ್ಧ, ಬಸವ, ಏಸು ಮೊದಲಾದವರು ಸಂಸಾರದಲ್ಲಿದ್ದುಕೊಂಡು ತತ್ವವನ್ನು ಆಚರಿಸಿದರು. ಯಾರು ಜೀವನದಲ್ಲಿ ತತ್ವವನ್ನು ಆಚರಿಸುತ್ತಾರೋ ಅವರಿಗೆ ಒತ್ತಾಗಿ ಇರುವೆ ಎಂದು ಬಸವಣ್ಣ ಹೇಳುತ್ತಾರೆ. ತತ್ವ ಬಿಟ್ಟ ಬದುಕು ಯಕಶ್ಚಿತವಾದುದು.

ದಾರ್ಶನಿಕರು ನಂಬಿದ ತತ್ವವನ್ನು ಬಿಟ್ಟುಕೊಡಲಿಲ್ಲ. ಇಂದು ತತ್ವಗಳಿವೆ ಆದರೆ ತತ್ವ ಸಾಧಕರು ಸಿಗುತ್ತಿಲ್ಲ. ನಮ್ಮ ಬದುಕನ್ನು ವಿಮರ್ಶೆಗೆ ಒಡ್ಡಿಕೊಳ್ಳಬೇಕು. ತಪ್ಪು ಒಪ್ಪುಗಳನ್ನು ಸಮರ್ಪಣೆ ಮಾಡಿಕೊಳ್ಳಬೇಕು. ಅವರು ನಿಜವಾಗಿ ಭಕ್ತರಾಗುತ್ತಾರೆ. ಅಂತಹವರ ಸಂಖ್ಯೆ ಹೆಚ್ಚಾಗಬೇಕು. ಸಾಮಾನ್ಯನು ತತ್ವವನ್ನು ತಿಳಿದುಕೊಳ್ಳುವ ಮಟ್ಟಕ್ಕೆ ಏರಬೇಕು. ಕಾಯಕ ಮಾಡುವವರು ತತ್ವವನ್ನು ಉಸಿರಾಡಬೇಕು. 12ನೇ ಶತಮಾನದ ಜನರು ತತ್ವಕ್ಕೆ ತಮ್ಮ ಪ್ರಾಣ ತ್ಯಜಿಸಿದರು. ಇಂದು ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ. ಶರಣರು ತತ್ವನಿಷ್ಠರಾದರು. ನಾವು ಸಹ ಹಾಗೆ ಸಾಗಬೇಕಿದೆ. ತಪ್ಪುಗಳನ್ನು ಸರಿ ಮಾಡಿಕೊಂಡರೆ ಅದುವೆ ನಿಜವಾದ ತತ್ವ. ತತ್ವದ ಸಂಗ ಮಾಡಿದರೆ ಅವರ ತಪ್ಪುಗಳು ಕಡಿಮೆ ಆಗುತ್ತವೆ ಎಂದರು.

ಡಾ. ಶಿವಮೂರ್ತಿ ಮುರುಘಾ ಶರಣರ ಅನುಭವ ಯಾನ ಕೃತಿ ಬಿಡುಗಡೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಈ ಕಾರ್ಯಕ್ರಮ ನಾಡಿನ ಬೇರೆ ಕಡೆಯು ನಡೆದು ಬಂದಿದೆ. ನಿತ್ಯ ಕಲ್ಯಾಣ ಕಾರ್ಯಕ್ರಮ ಅಂದಿನ ಅನುಭವ ಮಂಟಪದ ನೆನಪನ್ನು ತರುತ್ತದೆ. ಅಂದಿನ ಶರಣರನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನೋಡಬಹುದು. ನಾವು ಒಂದು ಪರ್ವಕಾಲದಲ್ಲಿ ಹುಟ್ಟಿದ್ದೇವೆ. 12ನೇ ಶತಮಾನದಲ್ಲಿ ಬಂದ ಕಲ್ಯಾಣ 21ನೇ ಶತಮಾನದಲ್ಲಿ ಮತ್ತೊಮ್ಮೆ ಪ್ರಾರಂಭವಾಗಿದೆ. ಅದಕ್ಕೆ ಮುರುಘಾ ಶರಣರು ಭದ್ರ ಬುನಾದಿ ಹಾಕಿದ್ದಾರೆ. ಇವರು ಸಹಜವಾಗಿ ಎಲ್ಲರಿಗು ನಿಲುಕುವಂತಹವರು. ಮುರುಘಾಮಠ ಉತ್ತಮ ಪರಂಪರೆಯನ್ನು ಹೊಂದಿದೆ. ಇದಕ್ಕೆ ರಾಜಪರಂಪರೆಯು ಇದೆ.

ನಿತ್ಯ ಕಲ್ಯಾಣದಲ್ಲಿ ಅನೇಕ ಬದಲಾವಣೆಗಳನ್ನು ಪೂಜ್ಯರು ತಂದಿದ್ದಾರೆ. ಅವರ ಚಿಂತನ ನುಡಿಗಳು, ಬರಹಗಳು ಚಿಂತನೆಗೆ ಗ್ರಾಸ ಮಾಡುತ್ತವೆ. ಬುದ್ಧ, ಮಹಾವೀರ, ಬಸವಣ್ಣನವರು ಬಂದಂತೆ ಇಂದು ಮುರುಘಾ ಶರಣರು ಬಂದಿದ್ದಾರೆ. ನಾವು 12ನೇ ಶತಮಾನದ ಕಲ್ಯಾಣ ನೋಡಿಲ್ಲ. ಆದರೆ 21ನೇ ಶತಮಾನದಲ್ಲಿ ಮುರುಘಾಮಠದಲ್ಲಿ ಕಲ್ಯಾಣವನ್ನು ನೋಡುತ್ತಿz್ದÉೀವೆ. ದಲಿತರಿಗೆ ಎಲ್ಲೆಲ್ಲಿ ತುಳಿತಕ್ಕೆ ಒಳಗಾಗಿದ್ದರೊ ಅಲ್ಲಿಗೆ ಮುರುಘಾ ಶರಣರು ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. 12ನೇ ಶತಮಾನದಲ್ಲಿ ಸತ್ಯಕ್ಕ, ಮುಕ್ತಾಯಕ್ಕ ಮೊದಲಾದವರಿಗೆ ಅವಕಾಶ ಇತ್ತು. ಅದರಂತೆ ಮುರುಘಾಮಠದಲ್ಲಿ ಗರ್ಭಗುಡಿಗೆ ಮಹಿಳೆಯರು ಹೋಗಬಹುದು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್ ದಂಪತಿಗಳು ವೇದಿಕೆಯಲ್ಲಿದ್ದರು.

ವಕೀಲರಾದ ಫಾತ್ಯರಾಜನ್, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ರಾಜು ಫಾದರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಕಾರ್ಯಕ್ರಮದಲ್ಲಿದ್ದರು.

ಶ್ರೀಮತಿ ಮಮತ ಎನ್. ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply

Your email address will not be published. Required fields are marked *