May 6, 2024

Chitradurga hoysala

Kannada news portal

ಛಲ ಒಂದಿದ್ದರೆ ಗೆಲುವು ಸುಲಭ. ಸೋಲೆ ಗೆಲುವಿನ ಮೆಟ್ಟಿಲುಗಳಾಗಲಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

1 min read

ಕ್ರೀಡೆ ವ್ಯಕ್ತಿತ್ವ ಬೆಳವಣಿಗೆಯ ಭಾಗವಾಗಿದೆ. ಕ್ರೀಡೆಯಿಂದ ಆರೋಗ್ಯಕರ ಶರೀರ ಮನಸ್ಸು ಹಾಗೂ ಭಾವ ಪ್ರಾಪ್ತವಾಗುತ್ತದೆ. ಆರೋಗ್ಯಕರ ಮನಸ್ಸಿನಿಂದ ಸ್ವಸ್ತಪರಿಸರ ನಿರ್ಮಾಣವಾಗುತ್ತದೆ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಮಠದಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಜರುಗಿದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕ್ರಿಕೆಟ್ ಕೀಡಾಕೂಟ ಏರ್ಪಡಿಸಲಾಗಿತ್ತು. ಸಾನಿಧ್ಯವಹಿಸಿ ಮಾತನಾಡಿದ ಅವರು  ಸೋಲು ಗೆಲುವು, ಸುಖ ದುಃಖಗಳು ಇದ್ದಂತೆ ಸಮಾನವಾಗಿ ಸ್ವಿಕರಿಸಬೇಕು. ಛಲ ಒಂದಿದ್ದರೆ ಗೆಲುವು ಸುಲಭ. ಸೋಲೆ ಗೆಲುವಿನ ಮೆಟ್ಟಿಲುಗಳಾಗಲಿ. ಪ್ರತಿಭಾವಂತ ತಂಡ ಸೋತಾಗ ಈ ದಿನ ಮಾತ್ರ ತಂಡದಾಗಿರಲಿಲ್ಲ ಎಂದು ಭಾವಿಸಬೇಕು. ಕ್ರೀಡೆ ಮಕ್ಕಳು ಮತ್ತು ಯುವಕರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ  ಬಹಳ ಮುಖ್ಯವಾಗಿದೆ. ಕ್ರೀಡೆ ನಮ್ಮ ಮನಸ್ಸಿನ ಸಮತೋಲಿತ ಬೆಳವಣಿಗೆಗೆ ಕಾರಣವಾಗುತ್ತದೆ. ಮನುಷ್ಯನನ್ನು ಆತ್ಮವಿಶ್ವಾಸ ಮೂಡಿಸುತ್ತದೆ.

ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮಿದುಳು ಅಭಿವೃದ್ಧಿಗೊಳ್ಳುತ್ತದೆ, ಆರೋಗ್ಯಕರ ಜೀವನವೇ ಯಶಸ್ಸಿನ ಕೀಲಿಯಾಗಿದೆ. ಕ್ರೀಡೆ ನಮ್ಮ ಜೀವನವನ್ನು ಯಶಸ್ವಿಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕ್ರೀಡಾಕೂಡದಲ್ಲಿ  ಐ.ಎಸ್.ಎಸ್ ಗ್ರೂಪ್ಸ್ , ರಾಹುಲ್ ಕ್ರಿಕೆಟರ್ಸ್, ಕಾರ್ಗಿಲ್ ತಂಡ, ಭಜರಂಗಿ, ನ್ಯೂಸ್ಟಾರ್ ತಂಡ, ರಾಕರ್ ತಂಡಗಳು ಭಾಗವಹಿಸಿದ್ದವು. ವಿನ್ನರ್ ಆಗಿ ಜೈಭೀಮ್ ತಂಡ, ರನ್ನರ್ ಆಗಿ ಆರ್ಕೊನಿಷ್ಟ್ ತಂಡ ಹೊರಹೊಮ್ಮಿದವು,  ವಿಜೇತ ತಂಡಕ್ಕೆ ಪಾರಿತೋಷಕದೊಂದಿಗೆ ಹತ್ತುಸಾವಿರ ರೂಪಾಯಿ, ರನ್ನರ್ ಅಪ್ ತಂಡಕ್ಕೆ ಪಾರಿತೋಷಕದೊಂದಿಗೆ ಐದುಸಾವಿರ ರೂಪಾಯಿಗಳನ್ನು ಭೋವಿ ಗುರುಪೀಠದಿಂದ ವಿತರಿಸಲಾಯಿತು.

ಸಮಾರಂಭದಲ್ಲಿ ಪಿಡಿಒ ಪಾತಣ್ಣ, ಈ ಸಂದರ್ಭದಲ್ಲಿ ಕೆಂಚಪ್ಪ ಮಾಸ್ಟರ್, ಬಯ್ಯಣ್ಣ, ತಿಮ್ಮರಾಜು, ಶ್ರೀಮತಿ ಮಂಜುಳ, ಶ್ರೀಮತಿ ಪಾಲಕ್ಷಮ್ಮ, ಅಧ್ಯಕ್ಷರಾದ ಶ್ರೀಮತಿ ಗೀತಾ, ಉಪಾಧ್ಯಕ್ಷರಾದ ನಿಂಗಪ್ಪ, ಸದಸ್ಯರುಗಳಾದ ರಾಮಾಂಜನೇಯ, ಗಣೇಶ, ವಿಜಯಕುಮಾರ್ ಕಲ್ಲೇಶಪ್ಪ ಹನುಮಂತಪ್ಪ, ಮಲ್ಲಿಕಾರ್ಜುನ, ಮಾರುತಿ, ಗಿರೀಶ,  ಪೂಜಾರಿ ನಾಗರಾಜು ಇನ್ನಿತರರು ಉಪಸ್ಥಿತಿಯಿದ್ದರು.

About The Author

Leave a Reply

Your email address will not be published. Required fields are marked *