May 2, 2024

Chitradurga hoysala

Kannada news portal

ಚಾರಿತ್ರ್ಯದಂತೆ ಚರಿತ್ರೆ. ಚರಿತ್ರೆ ಸದ್ಚಾರಿತ್ರ್ಯವಾದರೆ ಕಳಸಪ್ರಾಯವಾಗಿರುತ್ತದೆ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. .

1 min read

ಚಾರಿತ್ರ್ಯದಂತೆ ಚರಿತ್ರೆ. ಚರಿತ್ರೆ ಸದ್ಚಾರಿತ್ರ್ಯವಾದರೆ ಕಳಸಪ್ರಾಯವಾಗಿರುತ್ತದೆ.ಮಾನವ ತನ್ನ ವ್ಯಕ್ತಿತ್ವವನ್ನು ಮಾದರಿ ಹಾಗೂ ಆದರ್ಶ ಗುಣಗಳಿಂದ ಸಂಯೋಜನೆ ಗೊಳಿಸಿಕೊಂಡಿದ್ದರೆ ಅಂತವರ ಬದುಕು ಕಳಸಪ್ರಾಯವಿದ್ದಂತೆ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಮಠದಹಟ್ಟಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೋಡೆನಹಟ್ಟಿಯಲ್ಲಿ ಗೌರಸಮುದ್ರ ಮಾರಮ್ಮ ದೇವಾಲಯದ ಕಳಾಸರೋಹಣ ಸಾನಿಧ್ಯ ವಹಿಸಿ ಮಾತನಾಡಿದ ಅವರು  ಮನಸು ಆಸೆ ತುಂಬಿದ ಕಣಜ. ಕಾರಣ ದುಃಖವು ಸಹಜ. ನಶ್ವರ ಕಾಯದಿಂದ, ಈಶ್ವರ ಸ್ಥಿತಿ ಬರಲು ಆಧ್ಯಾತ್ಮ ಸಹಕಾರಿ. ಭೌತಿಕಾಚಾರಣೆಯಾದ ಮಣ್ಣ ಕಣಕಣದಲ್ಲಿ, ಗುಡಿಯಲ್ಲಿ, ಮಡಿಯಲ್ಲಿ, ಧೂಪ ದೀಪದಲ್ಲಿ, ಮಂತ್ರದಲ್ಲಿ, ಯಾಗಯಜ್ಞಗಳಲ್ಲಿ, ಜಪತಪವ್ರತದಲ್ಲಿ, ಕೇವಲ ಭಗವಂತನಿಲ್ಲ.  ಜೀವಜೀವಗಳಲ್ಲಿ, ಅಂತರಂಗದಲ್ಲಿ ಭಗವಂತನ ಇದ್ದಾನೆ. ಅರಿವಿನ ಕಣ್ಣಿಗೆ ಮಾತ್ರವೇ ಜಾಗೃತಗೊಳ್ಳುತ್ತದೆ. ಮೇಲುಕೀಳು, ಕುಲವ್ಯಾಕುಲ, ರೋಷದ್ವೇಷ, ಲೋಭ ಮೋಸದ ನಡತೆ, ಜಡತೆಯಿಂದ ಜೀವನ ಕೂಡಿರಬಾರದು. ಕರುಣೆ ಪ್ರೇಮ ಉಲ್ಲಾಸ, ನಿರ್ಮಲ ಚಿತ್ತ, ಸಂತೋಷ, ನೀತಿ ಮಾರ್ಗದಿಂದ ಜನಸೇವೆಯೇ ಜನಾರ್ಧನ ಸೇವೆ ಎಂಬ ನಾಡ್ನುಡಿಯಿಂದ ಭಗವಂತನನ್ನು ಕಾಣೋಣ ಎಂದರು.

ಈ ಸಂದರ್ಭದಲ್ಲಿ ಕೆಂಚಪ್ಪ ಮಾಸ್ಟರ್, ತಾ.ಪಂ.ಮಾಜಿ ಸದಸ್ಯ ಪರಮೇಶ್ವರಪ್ಪ, ಬಯ್ಯಣ್ಣ, ತಿಮ್ಮರಾಜು, ಶ್ರೀಮತಿ ಮಂಜುಳ, ಶ್ರೀಮತಿ ಪಾಲಕ್ಷಮ್ಮ, ಅಧ್ಯಕ್ಷರಾದ ಶ್ರೀಮತಿ ಗೀತಾ, ಉಪಾಧ್ಯಕ್ಷರಾದ ನಿಂಗಪ್ಪ, ಸದಸ್ಯರುಗಳಾದ ರಾಮಾಂಜನೇಯ, ಶ್ರೀಮತಿ ಸವಿತಾ, ಗಣೇಶ, ಶ್ರೀಮತಿ ಯಶೋಧಮ್ಮ, ಗಣೇಶ, ವಿಜಯಕುಮಾರ್ ಕಲ್ಲೇಶಪ್ಪ ಹನುಮಂತಪ್ಪ, ಮಲ್ಲಿಕಾರ್ಜುನ, ಮಾರುತಿ, ಶ್ರೀಮತಿ ಶಂಕರಮ್ಮ, ಶ್ರೀಮತಿ ರೇಷ್ಮಾ ಭಾನು, ಶ್ರೀಮತಿ ಮುಲಾನಭಿ, ಗಿರೀಶ,  ಪೂಜಾರಿ ನಾಗರಾಜು ಇನ್ನಿತರರು ಉಪಸ್ಥಿತಿಯಿದ್ದರು.

About The Author

Leave a Reply

Your email address will not be published. Required fields are marked *