April 26, 2024

Chitradurga hoysala

Kannada news portal

ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನನ್ನು ಗುರುತಿಸುವುದು ಬಿಜೆಪಿ ಪಕ್ಷದ ಉದ್ದೇಶ…

1 min read

ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಜ್ಜಾಗಿ, ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನನ್ನು ಗುರುತಿಸುವುದು ಬಿಜೆಪಿ ಪಕ್ಷದ ಉದ್ದೇಶ…

ಚಿತ್ರದುರ್ಗ:
ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಗ್ರಾಮಾಂತರ ಮಂಡಲ ವತಿಯಿಂದ ಲಕ್ಷ್ಮಿಸಾಗರ ಗ್ರಾಮದಲ್ಲಿ ಬೂತ್ ಅಧ್ಯಕ್ಷ ಟಿ.ಎಸ್.ವಸಂತಕುಮಾರ್‌ರವರ ನಿವಾಸಕ್ಕೆ ನಾಮಫಲಕ ಅಳವಡಿಕೆಗೆ ಚಾಲನೆ ನೀಡಲಾಯಿತು.
ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿ ಮಾತನಾಡಿ ನಮ್ಮ ಪಕ್ಷದಲ್ಲಿ ಯಾವ ನಾಯಕರ ಮನೆಗೂ ನಾಮಫಲಕ ಅಳವಡಿಸಿಲ್ಲ. ಆದರೆ ಬೂತ್ ಅಧ್ಯಕ್ಷರುಗಳನ್ನು ಗುರುತಿಸಿ ನಾಮಫಲಕ ಜೋಡಿಸಲಾಗಿದೆ. ಇದರಿಂದ ಕಟ್ಟಕಡೆಯ ಕಾರ್ಯಕರ್ತನನ್ನು ಗುರುತಿಸುವುದು ಇದರ ಉದ್ದೇಶ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವಲ್ಲಿ ಬೂತ್ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತಗಳು ಸಿಗಬೇಕಾಗಿರುವುದರಿಂದ ಬೂತ್ ಅಧ್ಯಕ್ಷರುಗಳ ಪಾತ್ರ ಮುಖ್ಯ. ಕೋವಿಡ್ ವಿರುದ್ದ ಉಚಿತ ಲಸಿಕೆ, ಗರೀಭ್ ಕಲ್ಯಾಣ್ ಅನ್ನಭಾಗ್ಯ ಯೋಜನೆ, ಆಯುಷ್ಮಾನ್ ಭಾರತ, ವೃದ್ದಾಪ್ಯ ವೇತನ ಹೀಗೆ ಪಕ್ಷದ ಸಾಧನೆಗಳನ್ನು ಗ್ರಾಮೀಣ ಭಾಗದಲ್ಲಿ ಜನರಿಗೆ ತಿಳಿಸಿ ತಳಮಟ್ಟದಿಂದ ಪಕ್ಷವನ್ನು ಸಶಕ್ತಗೊಳಿಸಬೇಕಿದೆ ಎಂದು ಬೂತ್ ಅಧ್ಯಕ್ಷ ಟಿ.ಎಸ್.ವಸಂತ್‌ಕುಮಾರ್‌ಗೆ ಸೂಚಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‌ ಯಾದವ್ ಮಾತನಾಡಿ ಪಕ್ಷದ ವರಿಷ್ಟರು ಬೂತ್ ಅಧ್ಯಕ್ಷರುಗಳ ಶಕ್ತಿಯನ್ನು ಗುರುತಿಸಿ ಮನೆಗಳಿಗೆ ನಾಮಫಲಕ ಅಳವಡಿಸಲು ಅವಕಾಶ ನೀಡಿದ್ದಾರೆ. ಇಂತಹ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಮುಂಬರುವ ಎಲ್ಲಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಗೆಲುವು ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದರು.
ಬಿಜೆಪಿ ಚಿತ್ರದುರ್ಗ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ವೀರೇಶ್ ಜಾಲಿಕಟ್ಟೆ, ಮಹಾಶಕ್ತಿ ಮತ್ತು ಶಕ್ತಿ ಕೇಂದ್ರದ ಪ್ರಮುಖರು, ಸಾಮಾಜಿಕ ಜಾಲತಾಣದ ಸಂಚಾಲಕ ವೆಂಕಟೇಶ್, ಬೂತ್ ಸಮಿತಿ ಸದಸ್ಯರು, ಪಂಚರತ್ನ ಸಮಿತಿ ಪ್ರಮುಖರು, ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿದ್ದರು.

About The Author

Leave a Reply

Your email address will not be published. Required fields are marked *