April 26, 2024

Chitradurga hoysala

Kannada news portal

ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಎಲ್ಲ ಕಡೆಯ ಆಗಲಿ ಡಾ:ಸ್ವಾಮಿ

ಚಿತ್ರದುರ್ಗ:                                                   ಭಕ್ತಿಯ ಜತೆಗೆ ಪರಿಸರದ ಚಿಂತನೆಯೂ ನಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು, ಹಬ್ಬಹರಿದಿನಗಳಲ್ಲಿ, ಪೂಜಾ ಕಾರ್ಯಕ್ರಮಗಳಲ್ಲಿ, ಪರಿಸರ ಸ್ನೇಹಿ ಗಣಪತಿ, ಪರಿಸರಸ್ನೇಹಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

ಅವರು ನಗರದ ತಮಟಕಲ್ಲು ರಸ್ತೆಯಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ “ಪರಿಸರ ಸ್ನೇಹಿ ಗಣಪತಿ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂಜೆ ಮಾಡುವ ಅವಸರದಲ್ಲಿ, ಪರಿಸರ ಚಿಂತನೆ ಮಾಡದೇ, ನಾವು ಪರಿಸರ ಹಾನಿ ಮಾಡಿಕೊಂಡು, ದೇವರನ್ನು ಕಾಣಲು ಸಾಧ್ಯವಿಲ್ಲ. ಗಣಪತಿ ಇಟ್ಟಾಗ ಪ್ಲಾಸ್ಟಿಕ್ ವಸ್ತುಗಳಿಂದ ಅಲಂಕರಿಸುವುದು, ಪ್ಲಾಸ್ಟಿಕ್ ಕವರ್‍ಗಳಲ್ಲಿ ಹೂವು ಹಣ್ಣು ತರಕಾರಿಗಳನ್ನ ಕೊಂಡೊಯ್ದು, ಪೂಜೆ ಮಾಡುವುದು, ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ, ಮಾಲಿನ್ಯ ಹೆಚ್ಚಾಗುತ್ತಿದೆ. ಕಣ್ಣು ಕೋರೈಸುವ ಗಣಪತಿಯನ್ನು ಪೂಜಿಸಬೇಕು ಎಂಬ ಆಸೆಯಲ್ಲಿ, ನಾವು ಹಲವಾರು ವಿಷಕಾರಿ ಬಣ್ಣಗಳನ್ನು ಗಣಪತಿಗೆ ಲೇಪನ ಮಾಡಿ, ವಿಸರ್ಜನೆ ಸಮಯದಲ್ಲಿ ನೀರಿನ ಮಾಲಿನ್ಯವನ್ನುಂಟು ಮಾಡುತ್ತಿದ್ದೇವೆ ಎಂದರು.
ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿಯನ್ನು ಪೂಜಿಸಿ, ಹೂವುಗಳಿಂದ ಅಲಂಕರಿಸಿ, ವಿಸರ್ಜನೆ ಮಾಡುವಾಗ ಅವುಗಳನ್ನೆಲ್ಲ ಬೇರ್ಪಡಿಸಿ, ಬಕೆಟ್‍ಗÀಳಲ್ಲಿ, ನಿರ್ದಿಷ್ಟವಾದ ಜಾಗದಲ್ಲಿ ವಿಸರ್ಜನೆ ಮಾಡಬೇಕಾಗಿದೆ. ಗಣಪತಿ ಇಟ್ಟ ಸಮಯದಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ, ಪಟಾಕಿ ಸಿಡಿಸುವುದು, ಅತಿಯಾದ ಶಬ್ದದಿಂದ, ಕರ್ಕಶ ಶಬ್ದಗಳಿಂದ, ನರ್ತಿಸುವುದು ಮಾಡದೇ, ಕೋಲಾಟ, ಜಾನಪದ ನೃತ್ಯಗಳು, ಭಕ್ತಿಗೀತೆಗಳು, ಹರಿಕಥೆಗಳು, ಮೌಲ್ಯಾಧಾರಿತ ಶಿಕ್ಷಣ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮ. ಗಣಪತಿ ಇಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ನೃತ್ಯ ಮಾಡಲು, ಗಾಯನ ಮಾಡಲು, ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಬಡತನ ನಿವಾರಣೆ ಬಗ್ಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಮಕ್ಕಳು ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸಿ, ಎಂದು ಜೇಡಿಮಣ್ಣಿನಿಂದ ತಯಾರಾದ ಗಣಪತಿ ನ್ನಿಟ್ಟುಕೊಂಡು, ಜನಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕುಮಾರಿ ಎಚ್. ಎಸ್. ಪ್ರೇರಣಾ, ಎಚ್.ಎಸ್. ರಚನ, ಸವಿತ, ಗೌರಮ್ಮ, ಸಿಂಹಾದ್ರಿ, ಶಿವಕುಮಾರ, ರವಿ, ರಕ್ಷಿತ ಶಿವಕುಮಾರ ಹಾಜರಿದ್ದರು.

About The Author

Leave a Reply

Your email address will not be published. Required fields are marked *