ಕೋವಿಡ್ ಗೆ ಎದೆಗುಂದದೆ ಜೀವನ ನಡೆಸಿ: ಮಾಜಿ ಗ್ರಾ.ಪಂ. ಸದಸ್ಯ ಉಮೇಶ್
1 min readಹಿರಿಯೂರು: ಕೊರೋನಾ ವೈರಸ್ ಬಗ್ಗೆ ಅಂತಕ ಬೇಡ, ಕೊರೋನಾಗೆ ಹೆದರಬೇಡಿ ಎಚ್ಚರ ವಹಿಸಿ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಕರ್ನಾಟಕ ರಾಜ್ಯಧ್ಯಕ್ಷ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎ. ಉಮೇಶ್ ಹೇಳಿದರು.
ವಾಣಿ ವಿಲಾಸಪುರದಲ್ಲಿ ಮಾತನಾಡಿ ಗಟ್ಟಿಯಾಗಿ ಇರಿ , ಧನಾತ್ಮಕವಾಗಿ ಇರಿ ,ಸುರಕ್ಷಿತವಾಗಿರಿ, ಸೂಕ್ಷ್ಮಾಣು ಮುಕ್ತವಾಗಿರಿ ಮತ್ತು ಆರೋಗ್ಯವಾಗಿರಿ ಎಂದು ಮನವಿ ಮಾಡಿದರು
ಕರೋನ ವಿಶ್ವ ಬಿಟ್ಟು ಹೋಗುವ ತನಕ ಐಕ್ಯತೆ ಹಿಂದ ಒಟ್ಟಿಗೆ ಹೋರಾಡೋಣ.
ಟಕೊರೊನಾ ಸೋಂಕು ಬಂದರೆ ಕಳಂಕವೂ ಅಲ್ಲ, ಮಾರಣಾಂತಿಕವೂ ಅಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಆರೈಕೆ ಕೇಂದ್ರಗಳಲ್ಲಿ ದಾಖಲಾದರೆ ಬಹುಬೇಗ ಗುಣಮುಖರಾಗಿ ಬರಬಹುದು. ಸೋಂಕಿನಿಂದ ಮುಕ್ತರಾದ ಆರೋಗ್ಯವಂತ ವ್ಯಕ್ತಿಗಳಲ್ಲಿ ಅನುಭವದ ಮಾತುಗಳ ಮಾಹಿತಿ ಪಡೆಯಿರಿ.
ಕೋವಿಡ್19 ಸಂದರ್ಭದಲ್ಲಿ ಆರೋಗ್ಯದ ಕಾಳಜಿಗೆ ನಿಯಮಗಳನ್ನು ಪಾಲಿಸಿ, ಸುರಕ್ಷತೆಗೆ ಸಹಕರಿಸಿ.ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಆಗಿಂದಾಗ್ಗೆ ಸೋಪ್ ನಿಂದ ಕೈ ತೊಳೆಯಿರಿ.
ಮುಖ್ಯವಾಗಿ ನಾವು ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸೋಣ. ಕರೋನಾ ಜೊತೆ ನಾವು ನೀವೆಲ್ಲರೂ ಜೊತೆ ಜೊತೆಯಲ್ಲಿ ಜೀವನ ಸಾಗಿಸೋಣ ಎಂದು ಹೇಳಿದರು.