ಕುರುಮರಡಿಕೆರೆ ಚಕ್ ಡ್ಯಾಂ ಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಾಗಿನ ಅರ್ಪಣೆ
1 min readಚಿತ್ರದುರ್ಗ: ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ನೂತನವಾಗಿ ನಿರ್ಮಾಣವಾಗಿದ್ದ ಚಕ್ ಡ್ಯಾಂ ಗೆ ಭಾನುವಾರ ಬೆಳಗ್ಗೆ ಬಾಗಿನ ಅರ್ಪಣೆ ಮಾಡಿದರು. ಕುರುಮರಡಿಕೆರೆಯ ಜನರು ಸಂಪ್ರದಾಯದ ಪ್ರಕಾರ ಪೂಜಾ ವಿಧಿ ವಿಧಾನ ಮೂಲಕ ನೇರೆವೇರಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ತಾಲೂಕಿನ ಅನೇಕ ಕಡೆಗಳಲ್ಲಿ ನೂತನವಾಗಿ ನೀಡಿದ್ದ ಎಲ್ಲಾ ಚಕ್ ಡ್ಯಾಂ ಗಳು ನೀಡಿದ್ದು ಎಲ್ಲಾ ತುಂಬಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಈ ಬಾರಿ ಉತ್ತಮ ಮಳೆಯಾಗುವಂತೆ ಕಾಣುತ್ತಿದ್ದು ಚಕ್ ಡ್ಯಾಂ ಗಳಿಂದ ಸುತ್ತಮುತ್ತಲಿನ ಪ್ರದೇಶದ ನೂರಾರು ಬೋರ್ ವೆಲ್ ನೀರಿನ ಮಟ್ಟ ಹೆಚ್ಚಲು ಸಹಕಾರಿಯಾಗಿಲಿದೆ ಎಂದು ಹೇಳಿದರು. ಗ್ರಾಮದ ಮುಖಂಡರಾದ ಉಮೇಶ್, ಪ್ರಕಾಶ್, ಮಲೇಶ್, ಗೋಪಲ್, ಮಾದನಾಯ್ಕ, ನರಸನಾಯ್ಕ, ಪ್ರಸನ್ನ, ವಂಕಟೇಶ್, ಮಹಂತೇಶ್, ಹನುಂತಪ್ಪ, ತಿಮ್ಮಣ್ಣ, ನಿಂಗಪ್ಪ ಇದ್ದರು.