ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಮುಖಂಡರ ಮನವಿ
1 min readಹಿರಿಯೂರು: ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಯಲ್ಲಿನ ಹಿಂದುಳಿದ ವರ್ಗಗಳ ಹಾಗೂ ಜಾತೀಯ ಅಲ್ಪಸಂಖ್ಯಾತರ ಮುಖಂಡರು ಸಭೆ ನಡೆಸಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು,ಹಾಗೂ ಬಿಜೆಪಿ,ರಾಜ್ಯದ್ಯಕ್ಷರಾದ ಸನ್ಮಾನ್ಯ ಶ್ರೀ ನಳೀನ್ ಕುಮಾರ್ ಕಟೀಲ್ ರವರುಗಳಿಗೆ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು ಎಂ.ಎಸ್. ರಾಘವೇಂದ್ರ, ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷರು ಕೇಶವ ಮೂರ್ತಿ, ದೇವಾಂಗ ಸಮಾಜದ ಅಧ್ಯಕ್ಷರು ಹೆಚ್. ವೆಂಕಟೇಶ್, ಬೆಸ್ತರ್ ಸಂಘದ ಅಧ್ಯಕ್ಷರು ಡಿ.ಗಂಗಾದರ್, ಅರ್ಯವೈಶ್ಯ ಸಮಾಜದ ಮುಖಂಡರು ಎ.ರಾಘವೇಂದ್ರ, ಕುರುಬರ ಸಂಘದ ಮುಖಂಡರು ಹೆಚ್. ನಟರಾಜ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರು ಮಂಜುನಾಥ ಘಾಗರವಳೆ,ಪ್ರಧಾನ ಕಾರ್ಯದರ್ಶಿ ಎಂ.ವಿ.ಹರ್ಷರವರು ವಿಶ್ವಕರ್ಮ ಸಮಾಜದ ಅಧ್ಯಕ್ಷರು ಸಿ.ನಾರಾಯಣಚಾರ್ ಹಾಗೂ ಸಮಾಜ ಭಾಂದವರು,ಆದಿ ದ್ರಾವಿಡ ಸಮಾಜದ ಮುಖಂಡರು ಕೃಷ್ಣ ಮೂರ್ತಿ, ಉಪ್ಪಾರ ಸಮಾಜದ ಮುಖಂಡ ರು ಮಸ್ಕಲ್ ಶ್ರೀನಿವಾಸ್ ಹಾಗೂ ಅನೇಕ ಬಿಜೆಪಿ ಕಾರ್ಯಕರು ಸಭೆಯಲ್ಲಿ ಉಪಸ್ಥಿತರಿದ್ದರು.