ನೀರಿನ ಸಂರಕ್ಷಣೆಗೆ ಹೊಂಡಗಳ ನಿರ್ಮಾಣ ಮಾಡಿದ್ದಾರೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಯಲ್ಲಿ ಕೆಎಂಎಫ್ ಮೂಲಕ ನೇರವಾಗಿ ರೈತರ ಮೆಕ್ಕೆಜೋಳವನ್ನು ಖರೀದಿ ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಒತ್ತಾಯಿಸಿದರು.
ನಗರದ ಐತಿಹಾಸಿಕ ಸಂತೇಹೊಂಡ ಪುಷ್ಯಾ ಮಳೆಯಿಂದಾಗಿ ಭರ್ತಿಯಾಗಿದ್ದು, ಇಂದು ಭಾಗಿ ಸಮರ್ಪಿಸಿ ನಂತರ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಭಾರೀ ಬಿದ್ದ ಮಳೆಯಿಂದಾಗಿ ಬಿತ್ತನೆ ಮಾಡಿದ ಬೀಜಗಳು ಉತ್ತಮವಾದ ಇಳುವರಿಯನ್ನು ಕೊಡಲಿದೆ. ಅದರಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಹಿನ್ನಲೆಯಲ್ಲಿ ಮೆಕ್ಕೆಜೋಳವನ್ನು ಕೆಎಂಎಫ್ ಮೂಲಕ ಖರೀದಿ ಮಾಡಬೇಕು. ಅಲ್ಲದೆ ಕಳೆದ ವರ್ಷವು ಕೂಡ ಮೆಕ್ಕೆಜೋಳ ಉತ್ತಮ ಇಳುವರಿ ಬಂದಿತ್ತು. ಅದು ಕೂಡ ಹೆಚ್ಚು ದಾಸ್ತೂನು ಖರೀದಿಯಾಗದೆ ಇದೆ.ಆದ್ದರಿಂದ ಸರ್ಕಾರವೇ ನೇರವಾಗಿ ಖರೀದಿ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈ ವರ್ಷ ಯೂರಿಯಾ ಗಿಬ್ಬರದ ಕೊರತೆ ಉಂಟಾಗಿದ್ದು ಖಾತೆ ಸಚಿವ ಸದಾನಂದಗೌಡ ಹಾಗೂ ರಾಜ್ಯದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದು ಶೀಫ್ರವಾಗಿ ಜಿಲ್ಲೆಗೆ 2500 ಮೆಟ್ರಿಕ್ ಟನ್ ಯೂತಿಯಾ ಗೊಬ್ಬರ ಕಳುಹಿಸುವಂತೆ ಮನವಿ ಮಾಡಲಾಗಿದೆ. ಅದಕ್ಕೆ ಅವರುಗಳು ಸಹ ಸ್ಪಂದಿಸಿದ್ದು ಶೀಫ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಐತಿಹಾಸಿಕ ಕೋಟೆ ನಗರಿಯಲ್ಲಿ ಹಿರಿಯರು ನಿರ್ಮಾಣ ಮಾಡಿದಂತಹ ನೀರಿನ ಸುರಂಗ ಮಾರ್ಗ ತುಂಬಾ ಚೆನ್ನಾಗಿದ್ದು, ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಈ ರೀತಿಯ ಮಾರ್ಗ ನಿರ್ಮಾಣ ಅಸಾಧ್ಯ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಮ್ಮ ಹಿರಿಯರು ಬೆಟ್ಟದ ಮೇಲೆ ಬಿದ್ದ ನೀರಿ ಆಳಾಗದಂತೆ ಉತ್ತಮ ರೀತಿಯಲ್ಲಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋಪಾಲ ಸ್ವಾಮಿ ಹೊಂಡಕ್ಕೆ ಬಂದ ನೀರು ಅಲ್ಲಿಂದ ಅಕ್ಕ-ತಂಗಿ ಹೊಂಡ, ಸಿಹಿನೀರು ಹೊಂಡ ತುಂಬಿದ ಬಳಿಕಾ ಜಲ ಮಾರ್ಗದಲ್ಲಿ ಸಂತೇ ಹೊಂಡವನ್ನು ತಲುಪಲಿದೆ. ಇಂತಹ ಸುರಂಗ ಮಾರ್ಗವನ್ನು ಅಂದಿನ ಕಾಲದಲ್ಲೇ ಪಾಳೆಗಾರರು ನಿರ್ಮಾಣ ಮಾಡಿರುವುದು. ಅವರಲ್ಲಿನ ತಂತ್ರಗಾರಿಕೆ ನೈಪುಣ್ಯತೆಯನ್ನು ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹ್ಮದ್ ಅಹಮದ್ ಪಾಷ್, ವೆಂಕಟೇಶ್, ಹರೀಶ್,ಅನುರಾಧ, ಭಾಗ್ಯಮ್ಮ, ತಾರಕೇಶ್ವರಿ, ಮಾಜಿ ಸದಸ್ಯರಾದ ರವಿಶಂಕರ್, ವೆಂಕಟೇಶ್, ಪೌರಯುಕ್ತ ಹನುಮಂತರಾಜ್ ಇತರರು ಇದ್ದರು.