ಗಗನಕ್ಕೆ ಏರುತ್ತಿರುವ ಬಂಗಾರ
1 min readನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಬುಧವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 950 ರೂಪಾಯಿ ಏರಿಕೆಗೊಂಡು 53,500 ರೂಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 54,700 ರೂಪಾಯಿಗೆ ಜಿಗಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 6,450 ರೂಪಾಯಿ ಹೆಚ್ಚಾಗಿ 71,500 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 05: 51,800-56,500 (970 ರೂಪಾಯಿ ಏರಿಕೆ)
ಆಗಸ್ಟ್ 04: 50,900-55,530
ಆಗಸ್ಟ್ 03: 50,760-55,370
ಆಗಸ್ಟ್ 02: 50,660-55,260