ನನ್ನ ಜೀವ ಇಲ್ಲಿಯೇ ಹೋಗಲಿ, ಜೈಲಿಗೆ ಕಳುಹಿಸಲಿ ಕಾಲೇಜು ಉಳಿಸಿಕೊಳ್ಳತ್ತೇನೆ: ಶಾಸಕ ಟಿ.ರಘುಮೂರ್ತಿ
1 min readಚಿತ್ರದುರ್ಗ: ಯಾವ ಹಂತದ ಹೋರಟ ಮಾಡಲು ನಾನು ಸಿದ್ದ, ನನಗೆ ಯಾವ ಶಿಕ್ಷೆ ನೀಡಿದರು ಸಹ ನನ್ನ ಹೋರಟ ನಿಲ್ಲಿಸುವುದಿಲ್ಲ , ನನ್ನ ಜೀವ ಪಣಕ್ಕಿಟ್ಟು ಕಾಲೇಜು ಉಳಿಸಿಕೊಳ್ಳತ್ತೇನೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಗಡುಗಿದರು.
ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ತುರುವನೂರು ಪ್ರಥಮ ದರ್ಜೆ ಕಾಲೇಜು ಸ್ಥಳಂತರಗೊಂಡಿರುವುದನ್ನು ವಿರೋಧಿಸಿ ಧರತಣಿ ಸತ್ಯಗ್ರಹ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಸರ್ಕಾರ ಆಟವಾಡುತ್ತಿದೆ. ಬರದ ನಾಡಿನ ಜನರು ವಿದ್ಯಾಭ್ಯಾಸ ಮಾಡುವುದೆ ಕಷ್ಟ ಅಂತಹ ಪರಿಸ್ಥಿತಿಯಲ್ಲಿ ಸಾವಿರಾರು ಹಳ್ಳಿಗಳಿಗೆ ಅನುಕೂಲವಾಗುವ ಕಾಲೇಜು ತೆಗೆದು ಸರ್ಕಾರ ರಾಜಕಾರಣ ಮಾಡುತ್ತಿದೆ. ಇಂತು ನೀಚ ರಾಜಕಾರಣ ಯಾರು ಮಾಡಬಾರದು. ಸರ್ಕಾರ ರಾಜಕಾರಣ ನನ್ನ ಮೇಲೆ ಮಾಡಲು ಅದನ್ನು ಬಿಟ್ಟು ಕ್ಷೇತ್ರದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಟವಾಡಬಾರದು ಎಂದು ಕುಟುಕಿದರು.
ನನ್ನ ಅಭಿವೃದ್ಧಿ ಸಹಿಸದೆ ರಾಜಕಾರಣ ಮಾಡುತ್ತಾರೆ.ಆದರೆ ನಾನು ಎಲ್ಲಾ ಸಹಿಸಿಕೊಂಡಿದ್ದೆ ಆದರೆ ಕಾಲೇಜು ಉಳಿಸಲು ನಾನು ಯಾವ ತ್ಯಾಗಕ್ಕೂ ಸಹ ಸಿದ್ದ ಎಂದರು. ಕೋರ್ಟ್ ಮೊರೆ ಸಹ ಹೋಗಿದ್ದು ನ್ಯಾಯ ದೊರಕುವ ವಿಶ್ವಾಸವಿದೆ. ಒಂದು ವೇಳೆ ನ್ಯಾಯ ದೊರಕದಿದ್ದಲ್ಲಿ ನನ್ನ ಮುಂದಿನ ಹೋರಟದ ರೂಪ ಬೇರೆ ಇದೆ ಎಂದರು ಸರ್ಕಾರ ಯಾವ ಕೊರತೆ ಇಲ್ಲದ ಕಾಲೇಜನ್ನು ಏಕೆ ಸ್ಥಳಾಂತರ ಮಾಡುತ್ತಿದೆ. ಇಂತಹ ಕೀಳು ಮಟ್ಟದ ರಾಜಕಾರಣ ಯಾರು ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿ ಕೇಂದ್ರದಲ್ಲಿ ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲರು ಹೆಚ್ಚಾಗಿರುವ ಪ್ರದೇಶವಾಗಿದ್ದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಎಲ್ಲಾ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸಿದ್ದು ಕಲಾ ವಿಭಾಗವನ್ನು ಕಲಿಸಲು ಅನುಮತಿಸಿದ್ದು, ಪ್ರಸ್ತುತ ಸಾಲಿನಲ್ಲಿ ವಾಣಿಜ್ಯ ವಿಷಯ ಸಹ ಅನುಮತಿ ಪಡೆಯುವ ಉದ್ದೇಶ ಸಹ ಹೊಂದಿದೆ ಎಂದರು. ಗ್ರಾಮೀಣ ಭಾಗದ ಈ ಕಾಲೇಜಿಗೆ ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಕಾಲೇಜು ಕಟ್ಟಡ ಕಾಮಗಾರಿ , ಇತರೆ ಸೌಲಭ್ಯಗಳಿಗಾಗಿ 2.80 ಕೋಟಿಗಳ ಅನುದಾನ ನೀಡಿದ್ದು ಕಟ್ಟಡ ಕಾಮಗಾರಿ ಚಾಲನೆಯಲ್ಲಿದೆ. ಈಗ 56 ವಿದ್ಯಾರ್ಥಿಗಳು ಸಹ ವ್ಯಾಸಂಗ ಮಾಡುತ್ತಿದ್ದಾರೆ.2020-21 ಸಾಲಿನಲ್ಲಿ 57 ವಿದ್ಯಾರ್ಥಿಗಳು ಕಾಲೇಜಿಗೆ ಸೇರಲು ಅರ್ಜಿಯನ್ನು ಸಹ ಹಾಕಿದ್ದಾರೆ. ಪ್ರಾಂಶುಪಾಲರು ಸಹ ವಿದ್ಯಾರ್ಥಿಗಳ ವಿವರವನ್ನು ಮಾನ್ಯ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಇವರಿಗೆ ನೀಡಿರುವ ವರದಿಯಲ್ಲಿ ಸಂಪೂರ್ಣ ವಿದ್ಯಾರ್ಥಿಗಳ ವಿವರ ಸಹ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಚಳ್ಳಕೆರೆ , ಮೊಳಕಾಲ್ಮುರು, ದಾವಣಗೆರೆ ಜಿಲ್ಲೆಯ ಜಗಳೂರು ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತ್ತು ಇತರೆ ಜನಾಂಗದ ಹೆಣ್ಣು ಮಕ್ಕಳ ಅಭ್ಯಾಸದ ಹಿತ ದೃಷ್ಟಿಯಿಂದ ಕಾಲೇಜು ಸ್ಥಳಾಂತರ ರದ್ದು ಗೊಳಿಸಿ ಇರುವ ಸ್ಥಳದಲ್ಲಿ ಕಾಲೇಜು ಮುಂದುವರೆಸಲು ಸರ್ಕಾರ ಕೂಡಲೇ ಕ್ರಮ ವಹಿಸಿಕೊಳ್ಳಬೇಕು. ಈ ಕಾಲೇಜಿನ 5 ಜನ ಕಾಯಂ ಉಪಾನ್ಯಾಸಕರಿದ್ದು ಬೇರೆಡೆಗೆ ನಿಯೋಜನೆಗೊಳಿಸಿದ್ದು ಅತಿಥಿ ಉಪನ್ಯಾಸಕರಿಂದ ಬೋಧನೆ ಮಾಡಿಸುತ್ತಿದ್ದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೂ ಸದರಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲಾಗಿರುವ ಆದೇಶ ರದ್ದುಗೊಳಿಸಿ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳದಲ್ಲಿ ಮುಂದುವರೆಸಿದರೆ ಅನುಕೂಲವಾಗುತ್ತದೆ ಉನ್ನತ ಶಿಕ್ಷಣಕ್ಕೆ ನೇರವಾಗಲಿದೆ ಆದ್ದರಿಂದ ಮುಖ್ಯಮಂತ್ರಿ ಮತ್ತು ಸಚಿವರು ಗಮನ ಹರಿಸಿ ನ್ಯಾಯ ದೊರಕಿಸದೆ ಹೋದರೆ ಮುಂದೆ ಯಾವ ದೊಡ್ಡ ಹೋರಟ ರೂಪಿಸಲಾಗುವುದು ಎಂದು ತಿಳಿಸಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಾಬುರೆಡ್ಡಿ, ರೈತ ಸಂಘದ ಭೂತಯ್ಯ, ನುಲ್ಲೆನೂರು ಶಂಕರಪ್ಪ, ಸಂಪತ್ ಕುಮಾರ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.