April 27, 2024

Chitradurga hoysala

Kannada news portal

ಸಮಗ್ರ ಕೃಷಿಗೆ ಒತ್ತು ನೀಡಿ : ಸಹಾಯಕ ನಿರ್ದೇಶಕ ಡಾ. ಮೋಹನ್ ಕುಮಾರ್ ಸಲಹೆ

1 min read

ಚಳ್ಳಕೆರೆ: ಸಮಗ್ರ ಬೆಳೆ ನಿರ್ವಹಣೆ ಮೂಲಕ ಬೆಳೆಯನ್ನು ನಾವು ರಕ್ಷಿಸಿಕೊಂಡು ಉತ್ತಮ ಇಳುವರಿ ಪಡೆದು ಕೃಷಿಯನ್ನ ಲಾಭದಾಯಕವಾಗಿ ಉದ್ದಿಮೇಯಾಗಿಸಿಕೊಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಹೇಳಿದರು.

ಇತ್ತಿಚಿನ ದಿನಗಳಲ್ಲಿ ಸೈನಿಕ ಹುಳು ಗಳು ಮೆಕ್ಕೆ ಜೋಳ ತಿಂದು ಬೆಳೆ ಹಾಳು‌ ಮಾಡುತ್ತಿರುವುದ ನಾವೆಲ್ಲಾ ನೋಡಿದ್ದೇನೆ ವೆ ಈ ಸೈನಿಕ ಹುಳು ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ರೈತರಿಗೆ ಹಲವು ತಾಂತ್ರಿಕ ಸಲಹೆಗಳನ್ನು ನೀಡಿದ್ದಾರೆ.
ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಹಲವು ರೈತರ ಜಮೀನಿಗೆ ಬೇಟಿ ನೀಡಿ ರೈತರಿಗೆ ಹಲವಾರು ತಾಂತ್ರಿಕ ಸಲಹೆಗಳನ್ನು ನೀಡಿದ್ದಾರೆ..

ರೈತರಾದ ನರಸಿಂಹಮೂರ್ತಿ .ಮಹಾಲಿಂಗಪ್ಪ,ಎ.ನಾಗರಾಜ
ಋತಕ್. ದರ್ಶನ, ಹರೀಶ,
ಮೆಕ್ಕೆ ಜೋಳದ ಬೆಳೆಯಲ್ಲಿ ಸೈನಿಕ ಹುಳುಗಳ (ಸ್ಪೊಡೊಪ್ಟೆರಾ ಫ್ರುಗಿಪೆರ್ಡಾ) ಸಮಗ್ರ ಕೀಟ ನಿರ್ವಹಣೆ

ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮೆಕ್ಕೆ ಜೋಳದ ಬೆಳೆಯಲ್ಲಿ ಸೈನಿಕ ಹುಳುಗಳ (ಸ್ಪೊಡೊಪ್ಟೆರಾ ಫ್ರುಗಿಪೆರ್ಡಾ) ಸಮಗ್ರ ಕೀಟ ನಿರ್ವಹಣೆ
ಸೈನಿಕ ಹುಳು ಮೆಕ್ಕೆ ಜೋಳದ ಬೆಳೆಗೆ ತುಂಬಾ ಪರಿಣಾಮ ಬೀರಿದೆ ಮತ್ತು ಕಳೆದ ವರ್ಷ ಜೂನ್ನಲ್ಲಿ ದಕ್ಷಿಣ ಭಾರತದಲ್ಲಿ ಏಕಾಏಕಿ ಸೈನಿಕ ಹುಳುಗಳ ಹಾವಳಿ ಕಂಡುಬಂದಿದೆ. ಈ ಕೀಟವು ಕಳೆದ ವರ್ಷದಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ತೀವ್ರ ಹಾನಿಯನ್ನುಂಟು ಮಾಡಿತು. ದೇಶಾದ್ಯಂತ ಮಳೆ ವಿಳಂಬದಿಂದಾಗಿ ಮೆಕ್ಕೆಜೋಳ ಬೇಸಾಯವನ್ನು ಪ್ರಸ್ತುತ ಮುಂದೂಡಲಾಗಿದೆ. ಮುಂಬರುವ ಹಂಗಾಮಿನಲ್ಲಿ, ಮಹಾರಾಷ್ಟ್ರ ಸೇರಿದಂತೆ ಎಲ್ಲಾ ಮೆಕ್ಕೆಜೋಳ ಉತ್ಪಾದಿಸುವ ರಾಜ್ಯಗಳು ಗಮನಾರ್ಹ ಬೆಳೆ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಈ ಕೀಟಗಳ ನಿರ್ವಹಣೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಕ್ರಮಗಳನ್ನು ಸಾಮೂಹಿಕವಾಗಿ ಸಂಯೋಜಿಸುವ ಸಮಯವಿದು.
ಸಮಗ್ರ ಕೀಟ ನಿರ್ವಹಣೆ: ಮೆಕ್ಕೆ ಜೋಳಕ್ಕೆ ಬಲೆ ಬೆಳೆಯಾಗಿ ನೇಪಿಯರ್ ಹುಲ್ಲನ್ನು ಬಿತ್ತನೆ ಮಾಡಬೇಕು. ಮೆಕ್ಕೆಜೋಳದ ಬೆಳೆ ಬಿತ್ತಿದ ಕೂಡಲೇ ಎಕರೆ ಜಮೀನಿಗೆ 10 ಟಿ ಬೇಲಿಯನ್ನು ಕೂಡ ಮಾಡಬೇಕು. ಮೆಕ್ಕೆ ಜೋಳದ ಬೆಳೆಯ ಎಲೆಗಳಲ್ಲಿ ಆರಂಭಿಕ ಹಂತದಲ್ಲಿ ಮರಿಹುಳು ಕಾಣಿಸಿಕೊಂಡಾಗ ಮೊಟ್ಟೆಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಕೀಟದ ಮಾಹಿತಿಗಾಗಿ, ಬಿತ್ತನೆ ಮಾಡುವ ಮೊದಲು 5 ಬಲೆಗಳನ್ನು ಮತ್ತು ನಂತರ 15 ಫೆರೋಮೋನ್ ಬಲೆಗಳನ್ನು ಸ್ಥಾಪಿಸಬೇಕು. ಮರಿಹುಳುಗಳನ್ನು ನಿಯಂತ್ರಿಸಲು 10 ಲೀಟರ್ ನೀರಿಗೆ 5 ಪ್ರತಿಶತದಷ್ಟು ಬೇವಿನ ಕಷಾಯ ಅಥವಾ 1500 ಪಿಪಿಎಂ ಆಜಾಡೈರೆಕ್ಟಿನ್@ 50 ಮಿಲಿ ಸಿಂಪಡಿಸಿ. ನೊಮುರಿಯಾ ರಿಲೇ 50 ಗ್ರಾಂ ಅಥವಾ ಮೆಥೆರಿಜಿಯಂ ಅನಿಸೊಪಿಲೇ@ 50 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಾವಯವ ಕೀಟನಾಶಕಗಳಿಂದ ಸಿಂಪಡಿಸಬೇಕು. ಸೈನಿಕ ಕೀಟಗಳ ನಿಯಂತ್ರಣಕ್ಕೆ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (ಬಿಟಿ) ಸಿಂಪಡಿಸುವುದು ಸಹಾಯಕವಾಗಿದೆ. ಕೀಟನಾಶಕಗಳನ್ನು ಸಿಂಪಡಿಸುವಾಗ, ಜಾಗರೂಕರಾಗಿರಿ ಮತ್ತು ಉದ್ದೇಶಿತ ವಿಧಾನವನ್ನು ಅನುಸರಿಸುವುದು ಅವಶ್ಯಕ. ಇಮಾಮೆಕ್ಟಿನ್ ಬೆಂಜೊಯೇಟ್ 5% ಎಸ್‌ಜಿ @ 4 ಗ್ರಾಂ ಅಥವಾ ಥಿಯೋಮೆಥಾಕ್ಸಮ್ 12.6% + ಲ್ಯಾಂಬ್ಡಾ ಸಿಹೆಲೋಥ್ರಿನ್ 9.5 C ಡ್‌ಸಿ @ 5 ಮಿಲಿ ಅಥವಾ ಸ್ಪಿನೊಟೋರಮ್ 11.7 ಎಸ್‌ಸಿ @ 4 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಯೆಲ್ 18.5 ಎಸ್‌ಸಿ @ 4 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಮೂಲ: ಶ್ರೀ ತುಷಾರ್ ಉಗಳೆ, ಕೀಟಶಾಸ್ತ್ರಜ್ಞ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ ಎಂದರು.ಈ ಸಂದರ್ಭ ದಲ್ಲಿ ತೋಟಗಾರಿಕೆ‌ ಸಹಾಯಕ‌ ನಿರ್ದೇಶಕ ಆರ್. ವಿರುಪಾಕ್ಷಪ್ಪ,ಕೃಷಿ‌ ಅಧಿಕಾರಿಗಳಾದ ರವಿ,ಎಸ್. ಆರ್.ಜೀವನ್ ಪ್ರತಾಪ ರೆಡ್ಡಿ ಇದ್ದರು.

About The Author

Leave a Reply

Your email address will not be published. Required fields are marked *