ಕಾಲುವೇಹಳ್ಳಿಯಲ್ಲಿ ರಾಮುಲು ಜನ್ಮದಿನಕ್ಕೆ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ
1 min readಚಳ್ಳಕೆರೆ ತಾಲೂಕಿ ಕಾಲುವೇಹಳ್ಳಿ ಗ್ರಾಮದ ಶ್ರೀ ಬಂಡೇ ಬಸವೇಶ್ವರ ದೇವಸ್ಥಾನದಲ್ಲಿ ರಾಜ್ಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಜನ್ಮ ದಿನದ ಪ್ರಯುಕ್ತವಾಗಿ ರಾಮುಲು ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದರು.
ಶ್ರೀರಾಮುಲು ಅಭಿಮಾನಿ ಬಳಗದಿಂದ ನೂರಾರು ಜನರಿಗೆ ಮೈಸೂರು ಪಾಕ್, ಗೋಧಿ ಪಾಯಸ ಮತ್ತು ಚಿತ್ರನ್ನ ಬಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಎಲ್ಲಾರೂ ತಮ್ಮ ಆರೋಗ್ಯ ಲೆಕ್ಕಿಸದೆ ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿರುವ ಆರೋಗ್ಯ ಸಚಿವರಾದ ಶ್ರೀರಾಮುಲು ಅವರಿಗೆ ದೇವರು ಜನರನ್ನು ರಕ್ಷಿಸಲು ಇನ್ನಷ್ಟು ಶಕ್ತಿ ನೀಡಲಿ, ಮುಂದಿನ ದಿನಗಳಲ್ಲಿ ಆರೋಗ್ಯ, ಅಧಿಕಾರ ನೀಡಿ ರಾಜ್ಯದ ಜನರ ಹಿತಕಾಯಲು ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಮತ್ತು ದೇಶದಿಂದ ಮತ್ತು ರಾಜ್ಯದಿಂದ ಕೋವಿಡ್ ಅದಷ್ಟು ಬೇಗ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರ ಅಪ್ತ ಸಹಾಯಕ ಪಾಲಯ್ಯ ಮಾತನಾಡಿ ನಮ್ಮಸಚಿವರು ಬಡವರ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಉಳ್ಳವರು,ತಾಳ್ಮೆಯ ಪ್ರತಿರೂಪ ಕರ್ನಾಟಕದ ಈ ನಮ್ಮ ನಂದಾದೀಪ ಎಂದರೆ ತಪ್ಪಗಲಾದು
ರಾಮುಲು ಸಾಹೇಬರು ಒಂದು ಅಗಾಧ ಶಕ್ತಿ, ಛಲ ಮತ್ತು ನಂಬಿಕೆ, ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಬೆಳೆದು ನಿಂತಿರುವುದು ತುಂಬಾ ಸಂತೋಷವಿದೆ
ಸದಾ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ ಅವರ ನಗುವಿನಲ್ಲಿ ಸುಖವನ್ನು ಕಾಣುವ ಧೀಮಂತ ನಾಯಕ, ಸರಳತೆ, ತಾಳ್ಮೆ, ಜನಸೇವೆಯೊಂದಿಗೆ ಕರುನಾಡಿನ ಜನತೆಯ ಮನೆ ಮಾತಾಗಿರುವುದು ಅವರ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಮತ್ತು ರಾಜ್ಯದ ಮುಖ್ಯಮಂತ್ರಿ ಆಗಿ ಅವರನ್ನು ನೋಡಲು ರಾಜ್ಯದ ಜನರು ಬಯಸುತ್ತಿದ್ದಾರೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ರಂಗಸ್ವಾಮಿ ಬಿಜೆಪಿ, ಸೊಪ್ಪಿನ ಮಂಜಣ್ಣ, ರಂಗಸ್ವಾಮಿ ಎನ್, ಕೃಷ್ಣಮೂರ್ತಿ ಪೂಜಾರಿ, ರವಿಕುಮಾರ್ ಓ, ಗಾದ್ರಿಪಾಲಯ್ಯ ಪೂಜಾರಿ, ಭೋತೇಶ್, ಹೊನ್ನೂರ್ ಸ್ವಾಮಿ, ಪ್ರಭಾಕರ್, ಸೊಪ್ಪಿನ ರಾಘವೇಂದ್ರ, ಮಹಂತೇಶ್ ನಾಯಕ, ಮಂಜುನಾಥ್, ರಂಗಸ್ವಾಮಿ, ಹಾಗೂ ಬಂಡೆ ಬಸವೇಶ್ವರ ಯುವಕರು ಬಳಗ, ಜೈ ಭೀಮ್ ಯುವಕರ ಬಳಗ, ಹಾಗೂ ಶ್ರೀರಾಮುಲು ಅಭಿಮಾನಿಗಳ ಬಳಗ, ಸಮಸ್ತ ಗ್ರಾಮದ ಮುಖಂಡರು ಇದ್ದರು,