ರಾಜ್ಯ ಸರ್ಕಾರ ನೇಕಾರರಿಗೆ ನೀಡುತ್ತಿರುವ 2 ಸಾವಿರ ಯಾವುದಕ್ಕೂ ಸಾಲದು:ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು
1 min readನೇಕಾರ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ 2 ಸಾವಿರ ರೂಪಾಯಿ ಯಾವುದಕ್ಕೂ ಸಾಲದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾಸುರೇಶಬಾಬು ಹೇಳಿದರು.
ಅವರು, ಚಳ್ಳಕೆರೆ ಕಂಬಳಿ ಮಾರುಕಟ್ಟೆಗೆ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಿದರು.
ನೇಕಾರರು ಆಂಧ್ರದಲ್ಲಿ ನೇಕಾರ ಪ್ರತಿ ಕುಟುಂಬಕ್ಕೆ ಇಪ್ಪತ್ತೈದು ಸಾವಿರ ನೀಡುತ್ತಿದ್ದು ಕರ್ನಾಟಕ ಸರ್ಕಾರ ಬರೀ ಎರಡು ಸಾವಿರ ನೀಡುತ್ತಿದೆ. ನಮ್ಮ ಕುಟುಂಬದ ಪರಿಸ್ಥಿತಿ ಸಂಕಷ್ಟದಲ್ಲಿದ್ದು, ಎರಡು ಸಾವಿರ ಏನಕ್ಕೂ ಸಾಲದು ನಾವು ಕಷ್ಟಪಟ್ಟು ನೇಯ್ಗೆ ಮಾಡಿ ತಂದಂತಹ ಕಂಬಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಕೊಂಡುಕೊಳ್ಳುವವರು ಇಲ್ಲದಾಗಿದೆ. ಮೊದಲು ಮಹಾರಾಷ್ಟ್ರ ಮತ್ತು ಆಂಧ್ರದಿಂದ ಮಾರುಕಟ್ಟೆಗೆ ಕಂಬಳಿಯನ್ನು ಕೊಂಡುಕೊಳ್ಳಲು ಬರುತ್ತಿದ್ದರು ಕರೋನಾ ದಿಂದ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಕೊಂಡುಕೊಳ್ಳುವವರು ಮಾರುಕಟ್ಟೆಗೆ ಬರುತ್ತಿಲ್ಲ ಹಾಗಾಗಿ ನಾವು ಕಂಬಳಿಯನ್ನು ವಾಪಸ್ಸು ನಮ್ಮ ಊರುಗಳಿಗೆ ತೆಗೆದುಕೊಂಡು ಹೋಗಬೇಕಾಗಿ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ದಿನವೆಲ್ಲ ನೇಯ್ಗೆ ಮಾಡಿದರೂ ಒಂದು ಕಂಬಳಿಯನ್ನು ಮಾಡಲು ಸಾಕಾಗುತ್ತದೆ. ಅದರ ಬೆಲೆಯೂ ಕೇವಲ ಎರಡ್ಮೂರು ರಿಂದ ಐದು ನೂರು ಮಾತ್ರಕ್ಕೆ ಕೇಳುತ್ತಾರೆ. ತಾಲ್ಲೂಕಿನಲ್ಲಿ ಸುಮಾರು ವಿದ್ಯುತ್ ನೇಯ್ಗೆ ಯಂತ್ರಗಳ ಇದ್ದು ಅವು ದಿನಕ್ಕೆ ಹತ್ತರಿಂದ ಹದಿನೈದು ಕಂಬಳಿಗಳನ್ನು ತಯಾರಿ ಮಾಡಿಕೊಂಡು ಬರುತ್ತಾರೆ. ಅದರ ಬೆಲೆ ಒಂದು ಕಂಬಳಿಗೆ ಇನ್ನೂರು ರೂಗಳು ಮಾತ್ರ ಇರುತ್ತದೆ ವಿದ್ಯುತ್ ನೇಯ್ಗೆ ಯಂತ್ರಗಳು ಜೊತೆಗೆ ನಾವು ಪೈಪೋಟಿ ಮಾಡುವುದು ಬಹಳ ಕಷ್ಟವಾಗಿದ್ದು ಕೂಡಲೆ ಅವುಗಳಿಗೆ ಕೊಟ್ಟಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನೇಯ್ಗೆ ಮಾಡುವುದನ್ನು ನಿಲ್ಲಿಸಬೇಕು ಸೊಸೈಟಿಗಳಲಿ ನೇಕಾರರಿಗೆ ಮನೆಗಳು ಹಾಗೂ ಸರಕಾರದಿಂದ ಹಲವಾರು ಯೋಜನೆಗಳನ್ನು ಕೊಡುತ್ತಿದ್ದು ಆಡಳಿತ ಮಂಡಳಿ ಸದಸ್ಯರುಗಳು ಸರಿಯಾದ ಫಲಾನುಭವಿಗಳಿಗೆ ನೀಡದೆ ನೇಕಾರರಿಗೆ ಅದರಲ್ಲಿ ಮೋಸ ಮಾಡುತ್ತಿದ್ದಾರೆ ಕೂಡಲೇ ಕಂಬಳೆ ಸೊಸೈಟಿಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಮೀಟಿಂಗ್ ಕರೆದು ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು ನೇಕಾರರ ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಕೂಡಲೇ ಮೀಟಿಂಗ್ ಕರೆದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಫೆಡರೇಷನ್ ಅಧ್ಯಕ್ಷರಾದ ಮಧುರೆ ಮಲ್ಲಿಕಾರ್ಜುನ್ ಮಾಜಿ ಅಧ್ಯಕ್ಷ ಗೋರ್ಲತ್ತು ಜೈರಾಮ್ ಮಲ್ಲೇಶಪ್ಪ ನಗರಸಭೆ ಸದಸ್ಯರಾದ ರಾಘವೇಂದ್ರ ಪರಸಪ್ಪ ಉಪಸ್ಥಿತರಿದ್ದರು