ಕೋಟೆ ನಾಡಲ್ಲಿ ಕೋವಿಡ್ ಹೆಚ್ಚಲು ಕೆಎಸ್ಆರ್ ಟಿಸಿ ರೂಲ್ಸ್ ಬ್ರೇಕ್ ಕಾರಣನಾ
1 min readವಿಶೇಷ ವರದಿ ಚಿತ್ರದುರ್ಗ : ಆ- 10: ಹೌದು ಕರ್ನಾಟಕ ಸಾರಿಗೆ ಬಸ್ ಗಳಲ್ಲಿ 30 ಜನರ ಮೇಲೆ ಹೆಚ್ಚಿಗೆ ಜನರು ಹತ್ತುವಂತಿಲ್ಲ ಎಂಬುದು ಕಡ್ಡಾಯ ಆದರೆ ಯಾವುದೇ ಜೀವದ ಹಂಗಿಲ್ಲದೆ ಜನರು ತಮ್ಮ ಕೆಲಸಗಳಿಗೆ ತೆರಳುವ ಆತುರದಲ್ಲಿ ಯಾವುದೇ ನಿಯಮಾವಳಿ ಸಹಾ ನೋಡದೆ ಕಚೇರಿಗಳಿಗೆ, ಶಾಲೆಯ ಕೆಲಸಗಳಿಗೆ ತೆರಳುವ ದೃಷ್ಟಿಯಿಂದ ಪೂರ್ತಿ ಆಗಿರುವ ಬಸ್ ಗಳಲ್ಲಿ ಹೋಗುತ್ತಿದ್ದಾರೆ. ಆದರೆ ಇದಕ್ಕೆ ಕಾರಣ ಸಾರ್ವಜನಿಕರಲ್ಲ ಜನರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಇರುವ ಕಡೆಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಗಳು ತೆರಳದೆ ಇರುವುದು ಕಾರಣವಾಗಿದೆ. ಇಂದು ಬೆಳಗ್ಗೆ ಚಳ್ಳಕೆರೆ ಕಡೆ ತೆರಳುತ್ತಿದ್ದ ಬಸ್ ನಲ್ಲಿ ಕುರಿಮಂದಿಯಂತೆ ಎಗ್ಗಿಲ್ಲದೆ ತುಂಬಿದ್ದರು. ಆದರೆ ಚಾಲಕ ಮತ್ತು ನಿರ್ವಾಹಕರು ಯಾರನ್ನು ವಿಚಾರಿಸುವ ಗೋಜಿಗೆ ಹೋಗದೆ ಬಸ್ ನಲ್ಲಿದ್ದ ಎಲ್ಲಾರಿಗೂ ಟಿಕೆಟ್ ನೀಡಿದ್ದಾರ. ಜನರನ್ನು ಕೇಳಿದರೆ ಒಂದೆ ಉತ್ತರ ಬಸ್ ಇಲ್ಲ ಸಮಯ ಆಗುತ್ತೆ ಅಂತ ಹೇಳುತ್ತಿದ್ದರು. 3 ಅಡಿ ಅಂತರವಿರಲಿ ಎರಡು ಸೀಟುಗಳಲ್ಲಿ ಸಹ ಜೊತೆ ಜೊತೆಯಲ್ಲಿ ಕುಳಿತುಕೊಂಡು ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಇನ್ನಾದರು ಸರ್ಕಾರಿ ಬಸ್ ಗಳ ಡ್ರೈವರ್, ಕಂಡಕ್ಟರ್ ಗಳು ತಮ್ಮ ಜೀವದ ಜೊತೆಗೆ ಎಲ್ಲಾರಿಗೂ ಕಾನೂನಿನ ಪಾಠ ಹೇಳಲಿ. ಮತ್ತು ಅಗತ್ಯವಿರುವ ಕಡೆ ಒಂದೆರಡು ಬಸ್ ಬೆಳಗ್ಗೆ ಹೆಚ್ಚಾವರಿಯಾಗಿ ಬಿಡಬೇಕು, ಇಲ್ಲದಿದ್ದರೆ ಕೋವಿಡ್ ಪ್ರಕರಣ ಹೆಚ್ಚಲು ಬಸ್ ನಲ್ಲಿ ಅಂತರ ಕಾಯ್ದಕೊಳ್ಳದೆ ಇರುವುದು ಸಹ ಜನರಲ್ಲಿ ಆತಂಕ ಹುಟ್ಟಿಸಿದೆ ಎಂದರೆ ತಪ್ಪಾಗಲಾರದು.