May 18, 2024

Chitradurga hoysala

Kannada news portal

SJS ಆಂಗ್ಲ ಮಾದ್ಯಮ ಪ್ರೌಢ ಶಾಲೆಗೆ ಪ್ರಥಮ ವರ್ಷ 100% ಫಲಿತಾಂಶ

1 min read

ಚಿತ್ರದುರ್ಗ: ನಗರದ ಎಸ್.ಜೆ.ಎಸ್. ಆಂಗ್ಲ ಮಾದ್ಯಮ ಪ್ರೌಢಶಾಲೆಗೆ ಪ್ರಥಮ ವರ್ಷ ಶೇ.100 ಫಲಿತಾಂಶ
ನಗರದ ಭೋವಿಗುರುಪೀಠದ ಆವರಣದಲ್ಲಿ ನಡೆಯುತ್ತಿರುವ ಎಸ್.ಜೆ.ಎಸ್. ಆಂಗ್ಲ ಮಾದ್ಯಮ ಪ್ರೌಢಶಾಲೆಗೆ ಪ್ರಥಮ ವರ್ಷವೇ ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ದಾಖಲೆಯನ್ನು ನಿರ್ಮಿಸಿದೆ.
2019-20ನೇ ಸಾಲಿಗೆ ಪ್ರಥಮವಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಬರೆದ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದಾರೆ. ಎನ್.ಐಶ್ವರ್ಯ, ಶೇ.85.4% ರಷ್ಟು ಫಲಿತಾಂಶ ಪಡೆಯುವುದರ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಿಇಒ ಗೌನಹಳ್ಳಿ ಗೋವಿಂದಪ್ಪ, ಪ್ರಾಚಾರ್ಯರಾದ ಹೆಚ್.ಕನಕದಾಸ್,  ಸಂಸ್ಥೆಯ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. 

About The Author

Leave a Reply

Your email address will not be published. Required fields are marked *