3 ನರಿಗಳನ್ನು ಬೇಟೆಯಾಡಿದ ಬೇಟೆಗಾರರ ಬಂಧನ
1 min readಹಿರಿಯೂರು: ನಿನ್ನೆ ಬೆಳಿಗ್ಗೆ ಹಿರಿಯೂರು ತಾಲ್ಲೂಕಿನ ಕಳ್ಳ ಬೇಟೆಗಾರರು 3 ನರಿಗಳನ್ನು ಸಿಡಿಮದ್ದಿನಿಂದ ಕೊಂದು ಹಾಕಿದ್ದರು.
ವಿಷಯ ತಿಳಿದ ಕೂಡಲೇ ನಮ್ಮ ಚಿತ್ರದುರ್ಗ ಅರಣ್ಯ ಇಲಾಖೆಯು ಕೂಡಲೇ ಕಾರ್ಯ ಕೈಗೊಂಡಿದ್ದಾರೆ.
DCF ಚಂದ್ರಶೇಖರ್ ರವರ ಸಲಹೆ ಮೇರೆಗೆ ಹಾಗೂ ACF ನೀಲಕಂಠಪ್ಪ ನವರ ಸೂಚನೆಯಂತೆ RFO ಹರ್ಷ ಹಾಗೂ ಗೌರವ ಅರಣ್ಯ ಪರಿಪಾಲಕ ರಾದ ರಘುರಾಮ್. ಹೆಚ್ . ಜೀ ರವರು ಕಳ್ಳರನ್ನು ಕೇವಲ 2 ಗಂಟೆಯಲ್ಲಿ ಹಿಡಿದು judicial custody ಗೆ ತೆಗೆದು ಕೊಂಡರು. ಆರೋಪಿ ಬಿಜ್ಜು ವ್ಯಕ್ತಿ ಸೇರಿದಂತೆ ಬೇಟೆಯಾಡಿದ ನರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.