ಶಿಕ್ಷಕ ಭವ್ಯಭವಿಷ್ಯದ ಮಾರ್ಗದರ್ಶಕ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
1 min readಶಿಕ್ಷಕ ಭವ್ಯಭವಿಷ್ಯದ ಮಾರ್ಗದರ್ಶಕ. ತನ್ನ ಕಾಲಮಾನದ ಹೊಸ ಪೀಳಿಗೆಯ ದಿಕ್ಸೂಚಕ. ಸ್ವಾಸ್ಥ್ಯ ಸಮಾಜ ಸುಧಾರಕ. ನವಯಗದ ನಾವಿಕ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಎಸ್.ಜೆ.ಎಸ್.ಸಮೂಹ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ದೀಪಾ ತಾನುರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಶಿಕ್ಷಕರು ತಮ್ಮ ನಿಸ್ವಾರ್ಥ ಸೇವೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾ, ಬುದ್ಧಿ ಕಲಿಸಿ ಉಜ್ವಲ ಭವಿಷ್ಯ ರೂಪಿಸುತ್ತಾರೆ.
ಗುರು ಎಂದರೆ ವ್ಯಕ್ತಿಯಲ್ಲ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಒಂದು ಶಕ್ತಿ.
ತಂದೆ ತಾಯಿ ಜನ್ಮ ಕೊಡುತ್ತಾರೆ ಆದರೆ ಗುರುಗಳು ನಮಗೆ ವಿದ್ಯಾ ಬುದ್ಧಿ ಕಲಿಸಿ ನಮ್ಮ ಜೀವನಕ್ಕೊಂದು ಅರ್ಥ ಕೊಡುತ್ತಾರೆ. ಅಂತಹ ಶಿಕ್ಷಕರನ್ನು ಸರ್ಕಾರ ಹಾಗೂ ಸಮಾಜ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಇ
ಆದ್ದರಿಂದ ಶಿಕ್ಷಕರಿಗೆ ಬೋಧನೆಗೆ ತೊಂದರೆಯಾಗುತ್ತದೆ. ಅಂತಹ ಕಾರ್ಯಗಳಿಂದ ಮುಕ್ತಗೊಳಿಸಿ ಬೋಧನೆ ಅವಕಾಶ ಕಲ್ಪಿಸಿಕೊಟ್ಟರೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಫಲರಾಗುತ್ತಾರೆ. ಇಂದು ಸಮಾಜದಲ್ಲಿ ಶಿಕ್ಷಕರ ಸ್ಥಿತಿಗತಿ ಶೋಚನೀಯವಾಗಿದೆ ಕಾರಣ ನಿವೃತ್ತಿಯ ನಂತರ ಪಿಂಚಣಿ ಪದ್ಧತಿಯಿಂದ ಕಷ್ಟಕರವಾಗಿದೆ. ಸುಧಾರಿತ ಪಿಂಚಣಿ ಪದ್ಧತಿ ಜಾರಿಗೊಳಿಸಿ ಕಷ್ಟ-ಕಾರ್ಪಣ್ಯಗಳಿಂದ ಮುಕ್ತವಾಗಿ ಶಿಕ್ಷಕರ ಬದುಕು ಸುಧಾರಣೆಯಾಗುತ್ತದೆ.
ಶಿಕ್ಷಕ ಒಬ್ಬ ಆಯ್ದ ಸರಕಾಗಬೇಕು ವಿನಹಃ ತಾತ್ಕಾಲಿಕ ಉದಾರ ನಿಮಿತ್ತ ಅಥವಾ ಸ್ವಾರ್ಥಕ್ಕಾಗಿ ಆಗಿರಬಾರದು. ಮಕ್ಕಳ ಬದುಕಿಗೆ ಅವಶ್ಯಕವಾದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕತೆ ಇದ್ದರೆ ಮಕ್ಕಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ
ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅಂದು ಇಂದು ನಮ್ಮ ಮನ ಮನೆಗಳಲ್ಲಿ ಚಿರಸ್ಮರಣೀಯ ರಾಗಿದ್ದಾರೆ. ಕಾರಣ ಅವರ ಶ್ರದ್ಧೆ ಜವಾಬ್ದಾರಿ ವೃತ್ತಿನಿಷ್ಠೆ ಅವರ ತತ್ವಜ್ಞಾನ ಅಳವಡಿಸಿಕೊಂಡಿದ್ದರು. ಅವರು ಶಿಕ್ಷಣ ತಜ್ಞರಾಗಿ ಶಿಕ್ಷಕರಾಗಿ ವ್ಯಕ್ತಿಯಾಗಿ ರಾಷ್ಟ್ರದ ಪ್ರಥಮ ಪ್ರಜೆಯಾಗಿ ರಾಷ್ಟ್ರ ಅಂತರ್ ರಾಷ್ಟ್ರಮಟ್ಟಕ್ಕೆ ಬೆಳಕು ಚೆಲ್ಲಿದ್ದಾರೆ. ಎಂದು ತಿಳಿಸಿದರು. ಎಸ್.ಜೆ.ಎಸ್ ಜ್ಞಾನಪೀಠದ ಪ್ರಾಂಶುಪಾಲರಾದ ಕನಕದಾಸ, ಮುಖ್ಯೋಪಾಧ್ಯಾಯರಾದ ಉಮೇಶ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.